ನಯನದಾಹಾರವ ಜಂಗಮವ ನೋಡಿಸುವೆ,
ಶ್ರೋತ್ರದಾಹಾರವ ಜಂಗಮವ ಕೇಳಿಸುವೆ,
ಘ್ರಾಣದಾಹಾರವ ಜಂಗಮವ ವಾಸಿಸುವೆ,
ಜಿಹ್ವೆಯಾಹಾರವ ಜಂಗಮವನೂಡಿಸುವೆ,
(ತ್ವ)ಚದಾಹಾರವ ಜಂಗಮಕ್ಕೆ ಹೊದ್ದಿಸುವೆ;
ಅಧಿಕ ಪ್ರೇಮ ಪ್ರಣಾಮವ ಮಾಡುವೆ-
ಸಕಲ ಪದಾರ್ಥಂಗಳ ನೀಡುವೆನು,
ಕೂಡಲಸಂಗಾ ನಿಮ್ಮ ಶರಣರಿಗೆ.
Transliteration Nayanadāhārava jaṅgamava nōḍuve,
śrōtradāhārava jaṅgamava kēḷisuve,
ghrāṇadāhārava jaṅgamava vāsisuve,
jihveyāhārava jaṅgamavanūḍisuve,
(tva)cadāhārava jaṅgamakke hoddisuve;
adhika prēma praṇāmava māḍuve-
sakalapadārthaṅgaḷa nīḍuvenu,
kūḍalasaṅga nim'ma śaraṇarige.
Manuscript
English Translation 2 I make the Jaṅgama see
The relish of the eye;
I make the Jaṅgama hear
The relish of the ear;
I make the Jaṅgama smell
The relish of the nose;
I make the Jaṅgama eat
The relish of the tongue;
I make the Jaṅgama wear
The relish of the skin.
I bow to him in my excess of love,
And serve all dainties that I have
Unto Thy Śaraṇās , O Lord
Kūḍala Saṅgama!
Translated by: L M A Menezes, S M Angadi
Hindi Translation नयनहार जंगम को दिखाऊँगा,
श्रवणहार जंगम को सुनाऊँग,
नासिकहार जंगम को सुंघाऊँगा,
जिह्वाहार जंगम को खिलाऊँगा,
त्वचाहार जंगम को उढाऊँगा,
अधिक श्रद्धा से प्रणाम करूँगा,
सकल वस्तुएँ समर्पित करूँगा,
तव शरणों को कूडलसंगमदेव ॥
Translated by: Banakara K Gowdappa
Telugu Translation నయనాహారము జంగమునకు చూపింతు
శ్రవణాహారము జంగమునకు వినిపింతు
ఘ్రాణాహారము జంగమునకు వాసన చూపింతు
జిహ్వాహారము జంగమునకు తినిపింతు
త్వగాహారము జంగమునకు కప్పెద
అధిక ప్రణయప్రణామము చేసెద
సకల పదార్థములర్పించెద
కూడల సంగమదేవా నీ శరణులకు
Translated by: Dr. Badala Ramaiah
Tamil Translation கண்களின் உணவிற்கு ஜங்கமரைக் காண்பேன்
செவிகளின் உணவிற்கு ஜங்கமரைக் கேட்பேன்
மூக்கின் உணவிற்கு ஜங்கமரை முகர்வேன்
நாக்கின் உணவிற்கு ஜங்கமரை உண்ண வைப்பேன்
தோலின் உணவிற்கு ஜங்கமரைத் தீண்டுவேன்
மிகுதியான அன்பு, நன்மையைச் செய்வேன்
எல்லாப் பொருட்களையும் அளிப்பேன்
கூடல சங்கமனே, உம் அடியார்க்கு ஐயனே
பக்தனின் மாகேசுவரத்தலம்
Translated by: Smt. Kalyani Venkataraman, Chennai
Marathi Translation
नयनाचा आहार जंगमाला दाखवितो.
श्रवणाचा आहार जंगमाला ऐकवितो.
नाकाचा आहार जंगमाला हुंगवितो.
जिभेचा आहार जंगमाला चाखवितो.
त्वचेचा आहार जंगमाला पांघरतो.
अति प्रेमाने प्रणाम करुन, सकल पदार्थ अर्पण करतो
कूडलसंगमदेवा तुमच्या शरणांना.
Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಜಿಹ್ವೆ = ; ತ್ವಚ = ; ನಯನ = ; ಪರಿಣಾಮ = ; ಫ್ರಾಣ = ; ಶ್ರೋತ್ರ = ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿ ಜಂಗಮರಿಗೆ ಕೆಲವು ಧರ್ಮಬಾಹಿರ ಹಕ್ಕುಗಳನ್ನು ಕೊಡಮಾಡಿದ್ದರೆ-ಈ ವಚನದಲ್ಲಿ ಶರಣರಿಗೆ ಕೆಲವು ಘೋರವಾದ ಹಕ್ಕುಗಳನ್ನು ಕೊಡಮಾಡಲಾಗಿದೆ. ಜಂಗಮರು ಮತ್ತು ಶರಣರು ಪರಸ್ಪರ ಮಾಡಿಕೊಂಡ ಅನೈತಿಕ ಒಪ್ಪಂದದ ಫಲವಾಗಿ ರಚನೆಗೊಂಡಿರುವುದೆಂಬಂತೆ ಊಹಿಸಲವಕಾಶವಿರುವ ಈ ವಚನವೂ ಪ್ರಕ್ಷಿಪ್ತವೇ ಆಗಿದೆ. ಮತ್ತು ಇದು ಪ್ರಕ್ಷಿಪ್ತವಾಗಿರುವುದು ಕೀಳುಮಟ್ಟದ ದುರುದ್ದೇಶದಿಂದ.
ಭಕ್ತನು ತನ್ನ ಪಂಚೇಂದ್ರಿಯಗಳ ಮೂಲಕ ಏನೇನನ್ನು ಭೋಗಿಸುತ್ತಾನೋ ಅದೆಲ್ಲವನ್ನೂ ಶರಣರಿಗೆ ಕೊಡಬೇಕೆನ್ನುತ್ತದೆ ಈ ವಚನ.
ಆ ಶರಣರಿಗೆ ನಯನದಾಹಾರ(ರೂಪ)ವನ್ನು ನೋಡಿಸಬೇಕು, ಶ್ರೋತ್ರದ ಆಹಾರ(ಗೀತ ಸರಸ ಸಂಭಾಷಣ)ವನ್ನು ಕೇಳಿಸಬೇಕು, ಘ್ರಾಣದ ಆಹಾರ(ಪುನುಗುಪನ್ನೀರುಗಂಧ)ವನ್ನು ಮೂಸಿಸಬೇಕು. ಜಿಹ್ವೆಯ ಆಹಾರ(ಅನ್ನ ಪಾನೀಯ)ವನ್ನು ಉಣಿಸಬೇಕು, ತ್ವಚದ ಆಹಾರ(ವನಿತಾದಿ ಸ್ಪರ್ಶಸುಖ)ವನ್ನು ಹೊಂದಿ (<ಹೊದ್ದಿ <ಪೊರ್ದಿ)ಸಬೇಕು ಎನ್ನುತ್ತ-ಬಸವಣ್ಣನವರ ಅಂಕಿತವನ್ನು ತಲೆತಗ್ಗಿಸುವಷ್ಟು ಹೀನವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಇಲ್ಲಿ. ಪ್ರಕ್ಷೇಪಕಾರನು ಅಷ್ಟಕ್ಕೇ ನಿಲ್ಲದೆ-ಶರಣರಿಗೆ ಪ್ರೇಮ ಪ್ರಣಾಮ ಮಾಡಬೇಕು ಸಕಲ ಪದಾರ್ಥಗಳನ್ನು ಕೊಡಬೇಕು ಎಂದು ದ್ವಂದ್ವಾರ್ಥ(?)ದಲ್ಲಿ ಪದಗಳನ್ನು ಬಳಸಿರುವುದು ದುರದೃಷ್ಟಕರ.
ವಿ : ಈ ವಚನದಲ್ಲಿ ಎಲ್ಲೆಡೆಯೂ ಕವಚದಾಹಾರವೆಂದೇ ಘೋರತೆಯನ್ನು ತಗ್ಗಿಸಲು ತಿದ್ದಿದ ಪಾಠವೇ ಇರುವುದಾದರೂ-ಅದರ ಮೂಲ ಪಾಠ “ತ್ವಚದಾಹಾರ”ವೆಂಬುದರಲ್ಲಿ ಸಂಶಯವಿಲ್ಲ-ತ್ವಕ್ಕಿಗೆ ವಿಷಯ ಸ್ಪರ್ಶ. ಮತ್ತು ಪರಿವಿಡಿಯಲ್ಲಿ ಹೆಸರಿಸಬೇಕಾಗಿರುವುದು ಒಂದು ಇಂದ್ರಿಯವನ್ನೇ ಹೊರತು ವಿಷಯವನ್ನಲ್ಲ ಎಂಬುದನ್ನು ಗಮನಿಸಿರಿ (ಪೊರ್ದು ಸಮೀಪೇ ಕೇಶಿರಾಜ ಧಾ. 436).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು