•  
  •  
  •  
  •  
Index   ವಚನ - 432    Search  
 
ಭಕ್ತನ ಮಾಹೇಶ್ವರಸ್ಥಲ - ತ್ರಿವಿಧ ದಾಸೋಹ
ಕಂದಿದೆನಯ್ಯಾ ಎನ್ನ ನೋಡುವರಿಲ್ಲದೆ; ಕುಂದಿದೆನಯ್ಯಾ ಎನ್ನ ನುಡಿಸುವರಿಲ್ಲದೆ; ಬಡವಾದೆನಯ್ಯಾ ಎನ್ನ ತನು, ಮನ, ಧನವ ಬೇಡುವರಿಲ್ಲದೆ? ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯಾ ಕೂಡಲಸಂಗಮದೇವಾ.
Transliteration Kaṇḍidenayyā enna nōḍuvarillade; kundidenayyā enna nuḍisuvarillade; baḍavādenayyā enna tanu, mana, dhanava bēḍuvarillade? Kāḍuva bēḍuva śaraṇara tandu kāḍisu bēḍisayya kūḍalasaṅgamadēvā.
Manuscript
English Translation 2 With none to see me, I'm withered, Sir; With none to speak to me I,ve waned; With none to ask For all I am and have, I have grown lean ! Bring me Your teasing, begging Śaraṇās. O Kūḍala Saṅgama Lord, And make them tease and beg of me! Translated by: L M A Menezes, S M Angadi
Hindi Translation मैं कांतिहीन हुआ मुझे देखनेवालों के अभाव में, कृश हुआ मुझसे बोलनेवालों के अभाव में, क्षीण हुआ मेरे तन, मन, धन माँगनेवालों के अभाव में, पीडक और याचक शरणों को लाकर पीडित कराओ, याचना कराओ कूडलसंगमदेव ॥ Translated by: Banakara K Gowdappa
Telugu Translation కందితినయ్యా నను జూచువారు లేక కుందితినయ్యానను పలుకరించువారు లేక బడుగై తినయ్యా నాతనుమనధనముల వేడువారు లేక వేడెడి వేచెడి శరణులదెచ్చి వేధింపుమా యాచింపుమా కూడల సంగమదేవా! Translated by: Dr. Badala Ramaiah
Tamil Translation என்னைக் காண்போரின்றி வாடினேன் ஐயனே என்னிடம் பேசுவோரின்றி இளைத்தேன் ஐயனே என் உடல், மனம், செல்வத்தை வேண்டுவோர் இன்றி வறியவனானேன் ஐயனே வாட்டும், வேண்டும் அடியார் மூலம் என்னை வாட்ட, வேண்டவைப்பாய் கூடல சங்கம தேவனே. Translated by: Smt. Kalyani Venkataraman, Chennai
Marathi Translation निस्तेज झालो माझी कोणी देखरेख करीत नाही म्हणून. निस्तेज झालो माझी कोणी विचारपूस करीत नाही म्हणून, गरीब झालो देवा माझे तन-मन-धन मागणारे कोणी नाही. म्हणून त्रास देणाऱ्या, मागणाऱ्या शरणांना घेऊन येऊन त्रास द्यावा, मागावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಕಂದು = ; ಕುಂದು = ; ತನು = ;
ಕನ್ನಡ ವ್ಯಾಖ್ಯಾನ ನನ್ನನ್ನು ಜನ ನೋಡಬಾರದೇಕೆ, ಮಾತನಾಡಿಸಬಾರದೇಕೆ, ಬೇಕಾದುದನ್ನು ಕೇಳಿ ಪಡೆಯಬಾರದೇಕೆ-ಎಂದು ಬಸವಣ್ಣನವರು ಪರಿತಪಿಸುತ್ತಿರುವರು. ಬಸವಣ್ಣನವರ ಬಗ್ಗೆ ಜನರಿಗಿದ್ದ ಭಯಭಕ್ತಿಯೇ-ಆ ಜನರು ಅವರ ಬಳಿ ಸರಾಗವಾಗಿ ಹೋಗಲು, ಮಾತನಾಡಲು ಅಡ್ಡಿಯಾಗಿತ್ತಾಗಬಹುದು. ಅದನ್ನು ವೇದನೆಯಿಂದ ಗಮನಿಸಿದ ಬಸವಣ್ಣನವರು ಶಿವನಲ್ಲಿ ಮೊರೆಯಿಡುತ್ತಿರುವರು : ಶಿವಶರಣರು ಬಂದು ನನ್ನನ್ನು ನೋಡದಿರುವುದರಿಂದ ಕಂದಿದ್ದೇನೆ, ಮಾತನಾಡದಿರುವುದರಿಂದ ಕುಂದಿದ್ದೇನೆ. ಶರಣರನ್ನು ನೋಡುವುದೇ ನನ್ನ ಕಣ್ಣಿಗೊಂದು ಚಂದ, ಶರಣರ ಮಾತುಗಳನ್ನು ಕೇಳುವುದೇ ನನ್ನ ಕಿವಿಗತಿಮಧುರ. ಅವರು ಬರಲಿ, ನನ್ನ ತನು ಮನ ಧನವನ್ನು ಕೇಳಲಿ-ಕೊಟ್ಟು ಧನ್ಯನಾಗುತ್ತೇನೆ. ಕೇಳುವರಿಲ್ಲದೆ ನಾನೀಗ ಬಡವನಾಗಿದ್ದೇನೆ. ಶರಣರು ಬಂದು ಬೇಡುವಂತಾಗಲಿ ಕಾಡುವಂತಾಗಲಿ-ನಾನು ಕೊಟ್ಟು ಕೊಟ್ಟು ದಣಿಯದಂತಾಗಲಿ-ಎಂದು ದೇವರಲ್ಲಿ ಮೊರೆಯಿಡುತ್ತಿರುವರು. ಯಾರೂ ದಾನ ಕೇಳದಿರುವುದರಿಂದ ಜನ ಶ್ರೀಮಂತರಾಗಿರುವರು. ಬಸವಣ್ಣನವರಿಗಾದರೋ ಯಾರೂ ದಾನ ಕೇಳದಿರುವುದರಿಂದ ಬಡವರಾದಂತೆನಿಸುತ್ತಿರುವುದು ಗಮನಾರ್ಹ. ಮಡಿವಾಳ ಮಾಚಯ್ಯನು (ಬೇಡುವೀಶ್ವರಭಕ್ತವ್ರಜಮಿಲ್ಲದಿಂತು ಬಡವಾದೆನೆಂಬ) ಈ ವಚನವನ್ನು ಕೇಳಿ ಬಸವಣ್ಣನವರ ಮೇಲೆ ಕೋಪಿಸಿಕೊಂಡನೆಂದೂ-ಅವರ ಆ ದಾನಮದವನ್ನು ಇಳಿಸುವ ಒಂದು ಪವಾಡವನ್ನು ಮೆರೆದನೆಂದೂ ಬಸವಪುರಾಣದಲ್ಲಿ ಹೇಳಿದೆ. (ಹಿಂದಿನ ವಚನವನ್ನು ನೋಡಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು