ಭಕ್ತನ ಮಾಹೇಶ್ವರಸ್ಥಲ - ಪ್ರಯತ್ನ
ವೇಷ ಅವಿಚಾರದಲ್ಲಿ ನಡೆಯಿತ್ತೆಂದು
ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ:
ಹರಿಯನೆ ದಾಸನ ವಸ್ತ್ರವ?
ಉಣ್ಣನೆ ಚೆನ್ನಯ್ಯನ ಸಂಗಾತ?
ಪರವಧುವ ಕೊಳ್ಳನೆ ಸಿಂಧುಬಲ್ಲಾಳನ?
ಬೇಡನೆ ಸಿರಿಯಾಳನ ಮಗನ?
ನಡೆವುದು ನುಡಿವುದು ಅವಿಚಾರವೆಂದು,
ಭಾವ ವಿಭಾವವೆಂದು ಕಂಡೆನಾದರೆ
ತಪ್ಪೆನ್ನದು, ಮೂಗ ಕೊಯಿ!
ಕೂಡಲಸಂಗಮದೇವಾ.
Transliteration Vēṣa avicāradalli naḍeyitendu
āsuradalli baguḷuva kunni, nī kēḷa:
Hariyane dāsana vastrava?
Uṇṇane cennayyana saṅgāta?
Paravadhuva koḷḷane sindhuballāḷana?
Bēḍane siriyāḷana magana?
Naḍevudu nuḍivudu avicāravendu,
bhāva vibhāvavendu kaṇḍenādare
tappennadu, mūga koyi!
Kūḍalasaṅgamadēvā.
Manuscript
English Translation 2 Listen, you cur who bark amain
'The role is played with little thought':
Could He not tear up Dāsa's clothes?
Could He not eat with Cennayya?
Could He not take away
The better half of Ballāḷa?
Could He not claim
Siriyāḷa's son?
If I regard
Both word and deed as thoughtlessness,
And the right spirit as perverse,
Mine is the fault: cut off my nose,
O Kūḍala Saṅgama Lord!
Translated by: L M A Menezes, S M Angadi
Hindi Translation वेष अविचार के पथ पर चला
यों चिल्लाकर भूँकनेवाली कुतिया सुन
दास का वस्त्र हरण नहीं किया ?
चन्नय्या के साथ भोजन नहीं किया?
सिंधु बल्लाळ की वधु को ग्रहण नहीं किया?
सिरियाळ के पुत्र को नहीं माँगा?
यदि मैं मानूँ कि ऐसे आचार-विचार अविचारपूर्ण हैं
भाव विभाव हैं तो वह मेरा
अपराध है, मेरी नाक काटो कूडलसंगमदेव॥
Translated by: Banakara K Gowdappa
Telugu Translation వేషమున దోషములు చెల్లునని
ఆసురముగ మొఱగు కూనలార వినుడో
చించడే దాసుని చీరను?
భుజించడే చెన్నయగూడి?
కోరడే బల్లాళుని భార్యను?
వేడడే సిరియాళుని బిడ్డను?
చేసినది చెప్పినది అవిచారమంచు
భావము విభావమంచు తలతునా
తప్పు నాది ముక్కు కోయును
కూడల సంగమదేవుడు
Translated by: Dr. Badala Ramaiah
Tamil Translation வேடத்துடன், முறையற்று நடந்தது என
செருக்கிக் குலைக்கும் நாய் நீ கேளாய்
தாசனுடையைக் கிழித்தனன், சென்னனுடனுண்டனன்
சிந்து வல்லாளனின் மனைவியைக் கொண்டனன்
சிறுத் தொண்டரின் மகனை வேண்டினன்
முறையற்றது என்று கூறி ஒழுதுவது, உரைப்பது
எண்ணம் மாறுபட்ட எண்ணம் எனக் கண்டேனெனின்
தவறு என்னுடையது, மூக்கைக் கொய்வாய்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
विकृत वेषधारी समजून घे.
बेसूरात भूकणाऱ्या कुत्र्या तू ऐक.
दासय्याचे वस्त्र फाडले नाहीस ?
चन्नय्या बरोबर जेवला नाहीस ?
सिंधूबल्लाळाची वधू मागितली नाहीस ?
श्रीयाळाच्या पुत्राला मागितले नाहीस?
वागणे बोलणे अविचाराचे म्हणून भेदभाव केला तर
तो माझा दोष समजून माझे नाक कापावे कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅವಿಚಾರ = ವಿಚಾರವಲ್ಲದ; ಆಸುರ = ಸೊಕ್ಕು, ಪ್ರರಾಕ್ರಮ, ಆವೇಶ, ಕಂಟಕ; ಭಾವ = ; ವಧು = ; ವಿಭಾವ = ; ಸಂಗಾತ = ; ಹರಿ = ;
ಕನ್ನಡ ವ್ಯಾಖ್ಯಾನ ಈ ವಚನದ ಪ್ರಮೇಯ ಅವೈಚಾರಿಕವಾಗಿ ನಡೆದುಕೊಂಡವನು ಜಂಗಮವೇಷಧಾರೀ ಶಿವನೋ ? ಅಥವಾ ಶಿವನ ವೇಷಧಾರೀ ಜಂಗಮರೋ ?
ಜಂಗಮರೆನ್ನುವುದಾದರೆ-ಲೋಕವಿರುದ್ಧವಾದ ನರಮಾಂಸಭಕ್ಷಣೆಯನ್ನೂ, ಧರ್ಮವಿರುದ್ಧವಾದ ಪರಸತೀಗಮನವನ್ನೂ ಆ ಜಂಗಮರು ಮಾಡಿದರೂ ಅದಕ್ಕೆ ಬಸವಣ್ಣನವರ ಆಕ್ಷೇಪಣೆ ಇಲ್ಲವೆಂದಂತಾಗುವುದು ಇದು ಅಬದ್ಧ.
ಆದ್ದರಿಂದ ಈ ವಚನ ಕುರಿತಿರುವುದು-ಶಿವನು ಜಂಗಮವೇಷದಲ್ಲಿ ಮಾಡಿದ ಕೆಲಸಗಳನ್ನು. ಅವನ ಆ ಕೆಲಸಗಳು ಪರಿಣಾಮತಃ ಅಕೃತ್ಯಗಳೇನೂ ಅಲ್ಲ-ದೇವರ ದಾಸಿಮಯ್ಯನಿಗೆ ತವನಿಧಿಯನ್ನು ಕೊಟ್ಟನು. ಸಿಂಧುಬಲ್ಲಾಳನಿಗೆ ಸಮತಾಪ್ರಸಾದವನ್ನು ಕೊಟ್ಟನು, ಸಿರಿಯಾಳನಿಗೆ ಪ್ರಾಣಪ್ರಸಾದವನ್ನು ಕೊಟ್ಟನು (ನೋಡಿ ವಚನ 322). ಮತ್ತು ಅವನು ಮಾದಾರ ಚೆನ್ನಯ್ಯನ ಬಟ್ಟಲಲ್ಲಿ ಕೈಯೂರಿ ಉಂಡನೆಂದರೆ-ಅದು ದಲಿತ ಶಿವಭಕ್ತರ ಬಗ್ಗೆ ಅವನಿಗಿದ್ದ ವಾತ್ಸಲ್ಯವನ್ನೇ ವ್ಯಕ್ತಪಡಿಸಿದಂತಾಯಿತು.
ಇದೇ ಸಂದರ್ಭದಲ್ಲಿ ನೆನಪಿಡಬೇಕಾದ್ದೆಂದರೆ-ಶಿವನು ಸಿಂಧುಬಲ್ಲಾಳನ ಸತಿಯ ಪಕ್ಕದಲ್ಲಿ ಶಿಶುವಾಗಿದ್ದನು. ಸಿರಿಯಾಳನ ಮಗನ ಮಾಂಸವನ್ನು ತಿನ್ನಲಿಲ್ಲ-ಬದಲಾಗಿ ಸತ್ತ ಆ ಮಗನನ್ನು ಮರಳಿ ಬದುಕಿಸಿಕೊಟ್ಟನು.
ಇಂಥ ಶಿವನನ್ನು ಯಾರಾದರೂ ಖಂಡಿಸಿದರೆಂದರೆ ಬಸವಣ್ಣನವರಿಗೆ-“ಅಸುರದಲ್ಲಿ ಬೊಗಳುವ ಕುನ್ನಿ ನೀ ಕೇಳಾ” ಎಂದು ದಟ್ಟಿಸುವಷ್ಟು ಮುನಿಸು.
148 ನೇ ವಚನಕ್ಕೆ ಪೂರಕವಾಗಿರುವಂಥ ಈ ವಚನದ ಧೋರಣೆ-ವಚನದ ಸಾಚಾತನವನ್ನೇ ಪ್ರಶ್ನಿಸುವಂತಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು