•  
  •  
  •  
  •  
Index   ವಚನ - 434    Search  
 
ನೀನಿಕ್ಕಿದ ಬೀಯದಲ್ಲಿ ವಂಚನೆಯುಳ್ಳರೆ ಸಂಗಾ, ನಿಮ್ಮ ತೊತ್ತುತನಕ್ಕೆ ದೂರವಯ್ಯಾ! ಕದ್ದು ತಿಂದರೆ ಕೈಹಿಡಿದೊಮ್ಮೆ ಬಡಿದು ತುಡುಗುಣಿತನವ ಬಿಡಿಸಯ್ಯಾ! ಜಂಗಮ ಮನೆಗೆ ಬಂದಲ್ಲಿ ಓಸರಿಸಿದರೆ ಹಿಡಿದು ಮೂಗ ಕೊಯಿಯಯ್ಯಾ! ಕೂಡಲಸಂಗಮದೇವಾ.
Transliteration Nīnikkida bīyadalli van̄caneyuḷḷare saṅga, nim'ma tottutanakke dūravayya! Kaddu tindare kai hiḍidom'me baḍidu tuḍuguṇitanava biḍisayyā! Jaṅgama manege bandalli ōsidare mūga hiḍidu koyyayya! Kūḍalasaṅgamadēvā.
Manuscript
English Translation 2 If I commit a fraud In food bestowed by Thee, I’ll be, O Lord, removed Far from Thy servanthood ! If I eat thievishly, Restrain my hand at once. Purge me of thievish ways ! And should I turn my back Upon a Jaṅgama come to my door, Catch me and chop my nose, O KudalaSangama Lord ! Translated by: L M A Menezes, S M Angadi
Hindi Translation तुमसे प्रदत्त अन्न से छल करूँ तो संगमेश तव दासत्व से दूर होऊँगा । मैं चोरी से खाऊँ तो हाथ पकड एक बार मारो स्वामी, मुझे चोरी के व्यसन से छुड़ाओ । जंगम के घर आने पर यदि मैं उपेक्षा करूँ तो कूडलसंगमदेव, मेरी नाक काटो ॥ Translated by: Banakara K Gowdappa
Telugu Translation వేషమున దోషములు చెల్లునని ఆసురముగ మొఱగు కూనలార వినుడో చించడే దాసుని చీరను? భుజించడే చెన్నయగూడి? కోరడే బల్లాళుని భార్యను? వేడడే సిరియాళుని బిడ్డను? చేసినది చెప్పినది అవిచారమంచు భావము విభావమంచు తలతునా తప్పు నాది ముక్కు కోయును కూడల సంగమదేవుడు Translated by: Dr. Badala Ramaiah
Tamil Translation நீ அளித்த உணவில் வஞ்சனை இருப்பின் உம் தொண்டுத்தனத்திற்குத் தொலைவு ஐயனே திருடித்தின்றால் கையைப் பிடித்து அடித்து திருட்டுத்தனத்தை அகற்றுவாய் ஐயனே ஜங்கமர் இல்லத்திற்கு வரின் தள்ளிவிடின் பிடித்து மூக்கைக் கொய்வாய் ஐயனே கூடல சங்கம தேவனே. Translated by: Smt. Kalyani Venkataraman, Chennai
Marathi Translation आपल्या अन्नाला जागलो नाही तर लिंगदेवा, तुमच्या सेवकाच्या चाकरीतून दूर करावे. चोरी केली तर हात पकडून मारावे. चोरी करण्यापासून दूर करावे देवा. जंगम घरी येता तोंड लपविले तर पकडून नाक कापावे देवा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಓಸರಿಸು = ; ಜಂಗಮ = ; ತುಡುಗುಣಿ = ; ತೊತ್ತು = ; ಬೀಯ = ; ವಂಚನೆ = ;
ಕನ್ನಡ ವ್ಯಾಖ್ಯಾನ ನೀನು ನನಗೆ ವ್ಯಯ ಮಾಡಲು ಕೊಟ್ಟಿರುವ ಭಿಕ್ಷದಲ್ಲಿ ವಂಚನೆಯಿಲ್ಲದೆ ಜಂಗಮದೊಡನೆ ಹಂಚಿ ತಿನ್ನುತ್ತೇನೆ. ಆ ನೀನು ಕೊಟ್ಟುದು ಸಾಲದೆಂದು ಅಪಮಾರ್ಗದಲ್ಲಿ ಧನಾರ್ಜನೆ ಮಾಡಿ ದೌಲತ್ತು ಮಾಡಿದರೆ ಮತ್ತು ಮನೆಗೆ ಬಂದ ಜಂಗಮಕ್ಕೆ ಉದಾಸೀನ ಮಾಡಿದರೆ-ನೀನು ಮಾಡಿದ ದಂಡ ನನಗಾಗಲಿ ಎಂದು ಬಸವಣ್ಣನವರು ಶಿವನಿಗೆ ಅರಿಕೆ ಮಾಡಿಕೊಳ್ಳುತ್ತಿರುವರು. ಬಿಯ್ಯ : ವ್ಯಯ>ಬಿಯ್ಯ, ಬೀಯ, ಸ್ವಾಮಿಯ ಸೇವಕನಿಗೆ ಅವನ ಸೇವೆಗಾಗಿ ಕೊಡುವ ನಿಯತವಾದ ಸಂಬಳ, ಕೂಲಿ, ತುಡುಗುಣಿತನ : ಕದ್ದು ತಿನ್ನುವ ಕಳ್ಳಬುದ್ಧಿ. ಓಸರಿಸು : ಮುಖ ತಿರುಗಿಸು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು