•  
  •  
  •  
  •  
Index   ವಚನ - 437    Search  
 
ಭಕ್ತನ ಮಾಹೇಶ್ವರಸ್ಥಲ - ನಿರ್ಭಯ
ಆಲುತ್ತಲು ಹರೆಯ ಹೊಯಿಸಿ, ಅಂಕವ ಮಾಡಿದೆನೆಲ್ಲರ ಕಂಡು! ಆನು ಬೇಡೆಂದರೂ ಮಾಣೆ, ಕಲಿತನವ ಮಾಡಿದೆನೆಲ್ಲರ ಕಂಡು! ಅಲ್ಲಿ ಹೋಯಿತ್ತು ಗಳೆಯೆಂದರೆ ಆಸೆ ಮಾಡೆನು, ಕೂಡಲಸಂಗಮದೇವಾ.
Transliteration Āluttalu hareya hoyisi, aṅkava māḍidenellara kaṇḍu! Ānu bēḍandarū māṇe, kalitanava māḍidenellara kaṇḍu! Alli hoyittu gaḷendare āse māḍenu, kūḍalasaṅgamadēvā.
Manuscript
English Translation 2 Thundering and thumping the kettle-drum, I fought with all I met! Even when you asked me, I did not stop: I fought with all I met! Even if I lose the stake there, O Kūḍala Saṅgama Lord, I do not regret Translated by: L M A Menezes, S M Angadi
Hindi Translation गरजते, नागाडा बजाते सब के सम्मुख मैं ने समर किया । मना करने पर भी मैं ने नहीं माना सब के सम्मुख शौर्य दिखाया वहाँ मुझे शस्त्र खोने की चिंता नहीं कूडलसंगमदेव ॥ Translated by: Banakara K Gowdappa
Telugu Translation పలక గొట్టి బయలజాటుచు ఎల్లరూ చూడపోరెద వలదన్ననూ వదలక బలము చూ పెద నెల్లరూ చూడ కత్తి జారిపడినా ప్రతిభటింపగ బోదు కూడల సంగమదేవ! Translated by: Dr. Badala Ramaiah
Tamil Translation ஆரவாரித்துப் பறைமுழங்க போர்புரிந்த அனைவரையும் கண்டு, என்னைப் போராட வேண்டாம் எனின் விடேன் போர்புரிந்த அனைவரையும் கண்டேன் பாணம் தீர்ந்தது எனின் உயிர்மீது ஆசைப்படுவதில்லை கூடல சங்கமதேவனே Translated by: Smt. Kalyani Venkataraman, Chennai
Marathi Translation गर्जत, नगारा वाजवत युध्द करणाऱ्या सर्वांना पाहून, मी नको म्हणालो पण ऐकले नाही. सर्वांची वीरता पाहून, शिर तुटले तरी हरकत नाही, पर्वा नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಂಕ = ಸೈನಿಕ, ಯೋಧ, ಭಟ, ಯುದ್ದ, ಕಾಳಗ; ಆಲು = ಕೂಗು,ಘರ್ಜಿಸು; ಕಲಿತನ = ; ಗಳೆ = ; ಮಾಣೆ = ; ಹರಿ = ; ಹೊಯಿಸು = ;
ಕನ್ನಡ ವ್ಯಾಖ್ಯಾನ ಸಿಂಹನಾದ ಮಾಡುತ್ತ ರಣದುಂದುಭಿಗಳನ್ನು ಮೊಳಗಿಸುತ್ತ ಯೋಧನು ಪ್ರತಿಯೋಧನೊಡನೆಮಾಡುವ ಒಂದು ಯುದ್ಧದ ಚಿತ್ರವು ಈ ವಚನದ ನಿರೂಪಣೆಯ ಹಿನ್ನೆಲೆಗಿದೆ. ಆ ಯೋಧನು ತನ್ನ ಸಹಯೋಧರ ಶೌರ್ಯವನ್ನು ನೋಡಿ-ತಾನೂ ಆ ಶೌರ್ಯವನ್ನು ಶತ್ರುಗಳ ಮೇಲೆ ತೋರಿಸಬೇಕೆಂದು ಉದ್ದೀಪನಗೊಂಡು ರಣರಂಗವನ್ನು ಪ್ರವೇಶಿಸುತ್ತಾನೆ. ಅಲ್ಲಿ ತಾನು ಮಾಡುವ ಹೋರಾಟದಲ್ಲಿ ಒಂದು ಪಕ್ಷ ತನ್ನ ಬಾಣವೆಲ್ಲಾ ತೀರಿಹೋದರೆ-ಪ್ರಾಣದ ಮೇಲಣ ಹಂಗನ್ನೂ ತೊರೆದು ಕೈಯಿಂದ ಕಾಲಿಂದ ಜಿದ್ದಾಜಿದ್ದಿ ಹೋರಾಟವನ್ನು ಮುಂದುವರಿಸಿ ಸಾಯುವನು. ಬಸವಣ್ಣನವರು ಇಂಥ ವೀರನಿಗೆ ತಮ್ಮನ್ನೂ, ಅವನ ಹೋರಾಟಕ್ಕೆ ತಮ್ಮ ದಾಸೋಹವನ್ನೂ ಹೋಲಿಸಿಕೊಂಡು-ಶರಣರ ಮೇಲ್ಪಂಕ್ತಿಯನ್ನು ಅನುಸರಿಸಿ ಪ್ರಾಣವಿರುವ ತನಕ ದಾಸೋಹದಲ್ಲಿ ನಿರತರಾಗಿರುವುದಾಗಿಯೂ ಅರಿಕೆ ಮಾಡಿಕೊಳ್ಳುತ್ತಿರುವರು. ಗಳೆ : ಗಣೆ, ಬಾಣ, ಪ್ರತಿಜ್ಞೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು