•  
  •  
  •  
  •  
Index   ವಚನ - 438    Search  
 
ಭಕ್ತನ ಮಾಹೇಶ್ವರಸ್ಥಲ - ಮಾನವೀಯತೆ
ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು? ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ? ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ ಕಾಗೆ ಕೋಳಿಯಿಂದ ಕರಕಷ್ಟ! ಕೂಡಲಸಂಗಮದೇವಾ.
Transliteration Kāgeyondaguḷa kaṇḍare kareyade tanna baḷagavanu? Kōḷiyondu kuṭuka kaṇḍare kūgi kareyade tanna kulavellava? Śivabhaktanāgi bhaktipakṣavilladiddare kāge kōḷiyinda karakaṣṭa! Kūḍalasaṅgamadēvā.
Manuscript
English Translation 2 Does not a crow, on seeing a crumb, Call to its flock? Does not a hen, on finding a morsel Call, clacking, to her brood? If, being a bhakta, a man lacks loyalty To his own faith, He's worse than hen or crow, O Kūḍala Saṅgama Lord! Translated by: L M A Menezes, S M Angadi
Hindi Translation काक एक दाना देख निज समूह को नहीं बुलाता? कुक्कुट एक ग्रास देख निज परिवार नहीं पुकारता? शिवभक्त होकर भक्ति-पक्ष न ले, तो वह काक कुक्कुट से भी निकृष्ट है कूडलसंगमदेव ॥ Translated by: Banakara K Gowdappa
Telugu Translation కాకి ఒక్క మెతుకు చూచిన పిలువదే తన బలగమంతటిని కోడి ఒక్కగింజ చూడగ పిలువదే తన కులంబునెల్ల ? శివభక్తుడగుచు భక్తుల పక్షముండనేని కాకి కోడికంటె కడునీచము కూడల సంగమదేవ! Translated by: Dr. Badala Ramaiah
Tamil Translation காகம் ஒரு பருக்கையைக் காணின் தன் இனத்தை அழைக்காதோ? கோழி ஒரு கவளத்தைக் காணின் தன் குலத்தைக் கூவி அழைக்காதோ? சிவபக்தனாகி, அன்பு, பக்தி இல்லையெனின் காகம், கோழியை விட இழிந்ததாம் கூடல சங்கம தேவனே. Translated by: Smt. Kalyani Venkataraman, Chennai
Marathi Translation एक घास अन्न, पहाताच कावळा, जमवी गोतावळा ; ओरडोनि ओरडे कोंबडा, पाहताच दाने कुळासह खाणे, आवडे त्या कूडलसंगमदेवा ! होऊनि शिवभक्त भक्तिपक्ष रहित, व्यर्थ जीणे, अर्थ – कावळ्याला एका घासाएवढेही भक्ष्य मिळाल्यास तो एकटाच खात नाही. तर आपल्या सर्व नातेवाईकांना हाक मारून बोलावतो कोंबड्याला शिताएवढेही खाद्य दिसताच तो सुद्धा आपल्या समस्त कुळाला ओरडून बोलावितो. पण आम्ही शिवभक्त होऊनही आपल्यात भक्ति भावना नसल्यास, भक्तीमार्ग कळालेला नसल्यास त्या कावळ्या कोंबड्या पेक्षाही आपले जीवन हीन नाही का ? ‘जी जी आपणास जाणीव झाली ती ती जनांना सांगावी हाच महात्मा बसवेश्वराचा दृष्टीकोण होता . Translated by Rajendra Jirobe, Published by V B Patil, Hirabaug, Chembur, Mumbai, 1983 कावळा अन्नाचा कण पाहता बंधूंना बोलवित नाही का ? कोंबडी एक किटक पाहता बंधूंना बोलवित नाही का? शिवभक्त होऊन भक्तीपदाविना राहिला तर तो कावळ्या-कोंबडीपेक्षा कनिष्ठ होतो कूडलसंगमदेवा. Translated by Shalini Sreeshaila Doddamani
Urdu Translation نظرجوآئےکہیں ایک دانۂ گندم پکارتا نہیں کیا اپنی قوم کوکوّا جودیکھ لےکہیںمرغی بھی ایک د انے کو تو کیا صدائیں نہیں دیتی اپنےکنبے کو اس طرح سےجو شیوا بھگت ہوکوئی اگر تواس کا فرض ہےجو بھی اُسے خدا سےملے وہ کھائے بانٹ کرآپس میں، ٹھیک ہے،ورنہ حقیرہوگا وہ کوّے سےاورمُرغی سے مرےحضور مرے دیوا کوڈلا سنگم Translated by: Hameed Almas
ಶಬ್ದಾರ್ಥಗಳು ಕರಕಷ್ಟ = ; ಕುಟುಕ = ;
ಕನ್ನಡ ವ್ಯಾಖ್ಯಾನ ಸೌಹಾರ್ದ ಎಲ್ಲಾ ಪ್ರಾಣಿಗಳಿಗಿಂತಲೂ ಮನುಷ್ಯ ಶ್ರೇಷ್ಠನಾದವನು ಎಂದು ಹೇಳುತ್ತಾರೆ. ಆದರೆ ಯಾವ ಕಾರಣದಿಂದ ಅವುಗಳಿಗಿಂತ ಶ್ರೇಷ್ಠ? ಮನುಷ್ಯ ಆಹಾರ ಸೇವಿಸುತ್ತಾನೆಂದರೆ ಇತರೆ ಪ್ರಾಣಿಗಳೇನೂ ಉಪವಾಸದಿಂದಿರುವುದಿಲ್ಲ. ಅವೂ ಕೂಡ ಮನುಷ್ಯನಂತೆಯೇ ಆಹಾರವನ್ನು ಸೇವಿಸುತ್ತವೆ. ಅವನಂತೆಯೇ ನಿದ್ರೆಯನ್ನೂ ಮಾಡುತ್ತವೆ. ಅವನಂತೆಯೇ ಇತರ ಘೋರ ಪ್ರಾಣಿಗಳನ್ನು ಕಂಡರೆ ಹೆದರುತ್ತವೆ. ಅವನಂತೆಯೇ ತಮ್ಮ ಸಂತಾನಾಭಿವೃದ್ಧಿಯನ್ನು ಮಾಡುತ್ತವೆ. ಹೀಗೆ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಅನೇಕ ವಿಧವಾದ ಸಾಮ್ಯವಿದೆ. (ಆಹಾರ ನಿದ್ರಾ ಭಯ ಮೈಥುನಂ ಚ ಸಾಮನ್ಯ ಮೇತತ್ ಪಶುಭಿರ್ನರಾಣಾಂ). ಹೀಗಿದ್ದೂ ಮನುಷ್ಯ ಪ್ರಾಣಿಗಳಿಂದ ಭಿನ್ನನಾಗುವುದು ತನ್ನಲ್ಲಿರುವ ಅಮೋಘವಾದ ವಿಚಾರ ಶಕ್ತಿಯಿಂದ ಹಾಗೂ ಉತ್ತಮ ನಡವಳಿಕೆಗಳಿಂದ. ಆದರೆ ಈ ಉತ್ತಮ ನಡೆ-ನುಡಿಗಳನ್ನು ಇಂದಿನ ಮಾನವರಲ್ಲಿ ಕಾಣದೆ ಅದರ ವಿಪರ್ಯಾಸವನ್ನು ನಾವು ಕಾಣುತ್ತಿದ್ದೇವೆ. ಒಂದು ಸಾಮಾನ್ಯ ಪ್ರಾಣಿಯೂ ತನ್ನಂಥದೇ ಆದ ಇತರ ಪ್ರಾಣಿಯನ್ನು ಕಂಡು ಪ್ರೀತಿಸುವುದನ್ನು ನಾವು ನೋಡುತ್ತೇವೆ. ಆದರೆ ಇಂದು ಮಾನವ ತನ್ನವನೇ ಆದ ಮಾನವನ್ನು ಅವನು ಪ್ರೀತಿಸುತ್ತಿಲ್ಲ. ಪ್ರತಿಯಾಗಿ ದ್ವೇಷಿಸುತ್ತಿದ್ದಾನೆ. ಇದನ್ನು ಕುರಿತೇ ಬಸವಣ್ಣನವರು ‘ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವನು? ಕೋಳಿಯೊಂದು ಕುಟುಕ ಕಂಡರೆ ಕೂಗಿ ಕರೆಯದೇ ತನ್ನ ಕುಲವೆಲ್ಲವನು?......’ ಎನ್ನುತ್ತಿದ್ದಾರೆ. ಒಂದು ಸಾಮಾನ್ಯ ಕಾಗೆಯೂ ಕೂಡ ಎಲ್ಲಿಯಾದರೂ ಒಂದು ಅಗುಳು ಅನ್ನ ಬಿದ್ದಿದ್ದರೆ ಅದು ತನಗೇ ಸಾಲದಷ್ಟು ಕಡಿಮೆಯಾಗಿದ್ದರೂ ತನ್ನ ಬಳಗದ ಕಾಗೆಗಳೆಲ್ಲವನ್ನೂ ‘ಕಾ, ಕಾ’ ಎಂದು ಕೂಗಿಕರೆದು ಅವುಗಳ ಜೊತೆಗೆ ತಿನ್ನುವುದನ್ನು ನಾವು ನೋಡುತ್ತೇವೆ. ಅದೇ ರೀತಿ ಒಂದು ಸಾಮಾನ್ಯ ಕೋಳಿಯೂ ಮುಂದೆ ಬಿದ್ದಿರುವ ಆಹಾರವನ್ನು ಕಂಡು ಅದು ತನಗೇ ಒಂದು ಗುಟುಕಾಗುವಷ್ಟು ಕಡಿಮೆಯಿದ್ದರೂ ತನ್ನ ಕುಲದ ಕೋಳಿಗಳನ್ನೆಲ್ಲಾ ಕರೆದು ಅವುಗಳ ಸಂಗದಲ್ಲಿ ತಿನ್ನವುದನ್ನು ನೋಡುತ್ತೇವೆ. ತಮ್ಮ ಸಹ ಜೀವಿಗಳನ್ನು ಕಂಡರೆ ಅಷ್ಟೊಂದು ಪ್ರೇಮ, ವಾತ್ಸಲ್ಯ ಹಾಗೂ ಸೌಹರ್ದ ಆ ಕಾಗೆ ಮತ್ತು ಕೋಳಿಗಳಿಗೆ. ಆದರೆ ಈ ವಾತ್ಸಲ್ಯ ಸೌಹಾರ್ದಗಳನ್ನು ಮಾನವನಲ್ಲಿ ಕಾಣುತ್ತಿದ್ದೇವೆಯೇ? ಕಾಗೆಯು ಕಾಗೆ ಅನ್ನು ಕಾರಣಕ್ಕಾಗಿಯೇ ಕಾಗೆಯನ್ನು ಪ್ರೀತಿಸುತ್ತದೆ. ಕೋಳಿಯು ಕೋಳಿ ಅನ್ನುವ ಕಾರಣಕ್ಕಾಗಿಯೇ ಕೋಳಿಯನ್ನು ಪ್ರೀತಿಸುತ್ತದೆ. ಅದೇ ರೀತಿ ಮಾನವ, ಮಾನವ ಅನ್ನುವ ಕಾರಣಕ್ಕಾಗಿಯೇ ಮಾನವನನ್ನು ಪ್ರೀತಿಸಬೇಕು ಇದು ಸ್ವಾಭಾವಿಕ. ಈ ಸ್ವಾಬಾವಿಕ ನಡೆಯನ್ನು ಬಿಟ್ಟು ಇವನು ವೈಶ್ಯ, ಇವನು ಶೂದ್ರ, ಇವನು ಕೀಳು, ಇವನು ಹೊಲೆಯ ಎಂದು ದ್ವೇಷಿಸುವುದರಲ್ಲಿ ಅರ್ಥವಿಲ್ಲ. ತನ್ನ ಕುಲವನ್ನೆಲ್ಲಾ ಕೂಗಿಕರೆಯುವ ಕಾಗೆ ಕೋಳಿಗಳ ಸೌಹಾರ್ದ ಭಾವನೆಯತ್ತ? ತನ್ನ ಕೂಲಕ್ಕೆ ಕಂಟಕಪ್ರಾಯನಾಗಿ ಕಪಟ ವೇಷದಲ್ಲಿ ದ್ವೇಷ ಸಾಧಿಸುವ ಮಾನವನ ಸ್ವಾರ್ಥ ಭಾವವೆತ್ತ? ಆದ್ದರಿಂದ “..... ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವಾ.” ಅಂದರೆ ಕೋಳೀಗಳಿಗಿಂತ ಕೀಳು ಮಾನವನ ಬಾಳು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.