•  
  •  
  •  
  •  
Index   ವಚನ - 439    Search  
 
ಭಕ್ತನ ಮಾಹೇಶ್ವರಸ್ಥಲ - ಮಾನವೀಯತೆ
ಆವ ನೇ(ಮವಾ)ದರೇನು? ಹೇಮವಿಲ್ಲದಂಗೈಸಬಹುದೆ? ಕೊಡಲಿಲ್ಲೆಂಬುದರಿಂದ ಸಾಯಲುಬಹುದು: ಸೈರಿಸಬಾರದು! ಬೇಡುವವರ ನೋಡಿ ನೋಡಿ, ಈಯಲಿಲ್ಲದವನ ಜೀವನವದೇತಕೊ ಕೂಡಲಸಂಗಮದೇವಾ?
Transliteration Avanē(mavā)darēnu? Hēmavilladaṅgaisabahude? Koḍalillembudarinda sāyabahudu: Sairisabāradu! Bēḍuvavara nōḍi, īyalillada jīvanavadētako kūḍalasaṅgamadēvā?
Manuscript
English Translation 2 Whatever the vow, how to fulfil It without resoluteness Better to die than say, 'There is nothing to give'-it is intolerable! What price his life who will not give Seeing the beggers all the time, O Kūḍala Saṅgama Lord? Translated by: L M A Menezes, S M Angadi
Hindi Translation कोई व्रत स्वर्ण बिना कर सकते हैं? ‘देने केलिए नहीं है’ कहने की अपेक्षा मरना भला है, यह सह नहीं जाता। याचकों को देख नहीं देनेवाले का जीवन किस काम का कूडलसंगमदेव? Translated by: Banakara K Gowdappa
Telugu Translation ఏ నియమమైన నేమి? కాసు లేకనే గ్రహియింపతగునే? లేదనుటకంటె మరణించుట మేలు యాచకుని చూచి చూచి సైరింపతగదు ఇయ్యలేని వాని జీవన మేటికో ! కూడల సంగమదేవా! Translated by: Dr. Badala Ramaiah
Tamil Translation எவராக இருந்தால் என்ன? ஈவதற்கு இல்லை என்பதை ஏற்கவியலுமோ? அளிப்பதற்கு இல்லை என்பதைவிட மடியலாம் பொறுக்கவியலுமோ? வேண்டுவோரைக் கண்டு கண்டு ஈயாத அந்த வாழ்க்கை எதற்கோ? கூடல சங்கமதேவனே. Translated by: Smt. Kalyani Venkataraman, Chennai
Marathi Translation तो कोणीही असू दे ? सोन्याविना काय करु शकतो? देवू शकत नसेल तर त्याने मरावे, सहन करु नये. मागणाऱ्यांना पाहून पाहून देवू शकत नसलेल्यांचे जीवन काय कामाचे कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಈಯು = ; ಐಸು = ; ನೇಮ = ; ಸೈರಿಸು = ; ಹೇಮ = ;
ಕನ್ನಡ ವ್ಯಾಖ್ಯಾನ ಹಣವೆಂಬುದು ಎಲ್ಲರಿಗೂ ಬೇಕಾದ ವಸ್ತು, ಅದಿಲ್ಲದೆ ಯಾರ ಜೀವನ ನಿರ್ವಹಣೆಯೂ ನಡೆಯುವುದಿಲ್ಲ. ಅಂದಮೇಲೆ ಐಶ್ವರ್ಯ ತನ್ನಲ್ಲಿದ್ದಾಗ ಇಲ್ಲದವನೊಬ್ಬನು ಬಂದು ಬೇಡಿದರೆ ಕೊಡುವುದಿಲ್ಲವೆಂದು ಬರಿಗೈಯಲ್ಲಿ ಕಳಿಸುವುದು ಆತ್ಮಕ್ಕೇ ಅವಮಾನಕರ-ಅದಕ್ಕಿಂತ ಸಾಯುವುದೇ ಮೇಲು-ಸೈರಿಸಬಾರದು. ಅಂದರೆ ತನ್ನಲ್ಲಿದ್ದ ಒಂದು ತುತ್ತನ್ನವನ್ನೇ ಹಸಿದವನು ಕೇಳಿದನೆಂದರೆ ಅದನ್ನವನಿಗೆ ಕೊಟ್ಟು ತಾನು ಸಾಯುವುದಾದರೂ ಶ್ರೇಯಸ್ಕರ-ಹಸಿವಿನಿಂದ ಒಬ್ಬನು ಬಳಲುತ್ತಿರುವಾಗ ಅದನ್ನು ಕಂಡೂ ತಾನೊಬ್ಬನೇ ಉಣ್ಣುತ್ತಿರುವುದು ಅಸಹ್ಯವೆಂದರ್ಥ. ದಾನಶೂರನಾಗಿ ಸಾಯುವುದೂ ಒಳ್ಳೆಯದೆ-ಲುಬ್ಧಜೀವನವನ್ನು ಶಿವಭಕ್ತರು ಜೀವಿಸಬಾರದು. ಆವನೋರ್ವನು : ಯಾವನಾದರೊಬ್ಬನು. ಹೇವ<ಹೇಮ : ಚಿನ್ನ (ನೋಡಿ ಕೇಶಿರಾಜ-277) ಅಂಗೈಸು : ಜೀವನ ನಡೆಸು. ಕೊಡಲಿಲ್ಲೆಂಬುದರಿಂದ : ಇದ್ದು ಇಲ್ಲವೆಂಬುದಕ್ಕಿಂತ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು