•  
  •  
  •  
  •  
Index   ವಚನ - 440    Search  
 
ಭಕ್ತನ ಮಾಹೇಶ್ವರಸ್ಥಲ - ಆತ್ಮಶುದ್ಧಿ
ಹರಗಣಪಂಕ್ತಿಯ ನಡುವೆ ಕುಳ್ಳಿರ್ದು ನಾನು ಒಡೆಯತನದ ನಾಯತೇಜವ ಹೊತ್ತುಕೊಂಡು- ಮಡದಿಯೆನ್ನಗಲೊಳಗೆ ಸಕಲದೇವಾನ್ನವ! ಒಡೆಯರಿಂದಲೂ ಮಿಗಿಲಾಗಿಕ್ಕಲು, ತೆಗೆದಿರಿಸಿದೆನು! ಈ ಪರಿಯ ಆಯ ಕಣ್ಗೆ ತೋರಲು ಕಲ್ಮಷವಾದುವು! ಕರುಣಿ ಚೆನ್ನಬಸವಣ್ಣ(ನ), ಮರೆದುಕೊಂಡೆನಾದರೆ, ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.
Transliteration Haragaṇapaṅktiya naḍuve kuḷḷirdu nānu oḍeyatanada nāyatējava hottukoṇḍu- maḍadiyennagaloḷage sakaladēvānnava! Oḍeyarindalū migilāgikkalu, tegedirisidenu! Ī pariya āya kaṇge tōralu kilmaṣavādavu! Karuṇi cannabasavaṇṇa(na), maredu koṇḍenādare, oḍeya kūḍalasaṅgayya keḍahi narakadallikkuva.
Manuscript
English Translation 2 When I sit among the row Of Hara's saints, and I put on The lapdog pride of lordly ways, And my wife piles up on my plate The food that's offered unto God Aboce the portion of those Saints, I put it aside... When privilege of this sort appears, It's poison to the eyes that see! Should I accept it heedlessly, Cennabasavaṇṇa the compassionate, Lord Kūḍala Saṅga Shall thrust me down to hell! Translated by: L M A Menezes, S M Angadi
Hindi Translation हर-गण-पंक्ति मध्य आसीन मैं ने स्वामित्व का श्वान तेज धारण कर मेरी थाली में सकल दिव्यान्न प्रभुओं से अधिक मेरी पत्नी के परोसने पर मैं ने उसे पृथक रख दिया इस प्रकार का लाभ दिखे तो वह पाप है, करुणालु चेन्नबसवण्णा को भूलकर स्वीकार करूँ, तो स्वामी कूडलसंगमदेव नरक में गिरायेंगे ॥ Translated by: Banakara K Gowdappa
Telugu Translation హర గణ సేవాపరతంత్రుల పంక్తి ప్రభుత్వపు శునక తేజమెత్తుకొని కూర్చుండ పడతి యెల్ల రకంటె యెక్కువ నా యాకున వడ్డింప నా దివ్యాన్నము నవల త్రోసితి ..... అది అందరి కన్ను బడి విషమైపోయె కరుణామయుని చెన్నబసవని మఱతునా నను జెఱచి కూడల సంగయ్య నరకమునకు దొక్కునయ్యా! Translated by: Dr. Badala Ramaiah
Tamil Translation விளைச்சலின் நடுவில் அமர்ந்து கொண்டு செல்வச் செழிப்பு எனும் உடலைச் சுமந்து கொண்டு அகத்திலே மனைவி சுவை மிகுந்த உணவை உடையரை விட மிகுதியாக இட எடுத்து வைத்தேன். இத்தகு முறையைக் கண்ணிற்குக் காட்டுவதும் பாவமன்றோ சன்ன பசவண்ணலே, அருள்வாய் மறந்து கொண்டேனெனின் உடையன் கூடல சங்கய்யன் வீழ்த்தி, நரகத்தில் இடுவான் ஐயனே. Translated by: Smt. Kalyani Venkataraman, Chennai
Marathi Translation हर गणांच्या पंक्तीमध्ये बसलो असता, स्वामीत्त्वाचे ढोंग करुन कुत्र्यासारखे बसलो असता, पत्नीने इतर शरणांच्या ताटातील अन्नापेक्षा जास्त देवान्न आपल्या ताटात वाढले, ते अन्न मी बाजूला ठेवले. असा भेदभाव केल्याने ते अन्न किल्मिष झाले. करुणाकर चन्नबसवण्णांला विसरुन ते स्विकारले तर कूडलसंगमदेव नरकात ढकलतील. Translated by Shalini Sreeshaila Doddamani
ಶಬ್ದಾರ್ಥಗಳು ಅಗಲೊಳಗೆ = ; ಕಲ್ಮಷ = ; ಕೆಡಹಿ = ; ತೇಜ = ; ಪಮ್ಕಿ = ; ಪರಿ = ; ಮಿಗೆ = ; ಹರ = ;
ಕನ್ನಡ ವ್ಯಾಖ್ಯಾನ ಶಿವಗಣಂಗಳ ಪಂಕ್ತಿಯಲ್ಲಿ ಬಸವಣ್ಣನವರು ಕುಳಿತಿದ್ದಾರೆ. ಅವರ ಹೆಂಡತಿ ಊಟಕ್ಕೆ ನೀಡಲು ಬಂದು-“ನಾನು ಒಡತಿ ನನ್ನ ಗಂಡ ಒಡೆಯ”ನೆಂಬ ನಿಕೃಷ್ಟರೀತಿಯ ಪ್ರತಿಷ್ಠೆಯಿಂದ-ಬಸವಣ್ಣನವರ ಬಟ್ಟಲಿಗೆ-ಅವರ ಪಕ್ಕದಲ್ಲೇ ಕುಳಿತಿದ್ದ ಗಣಂಗಳಿಗೆ ನೀಡಿರುವುದಕ್ಕಿಂತಲೂ ಹೆಚ್ಚಾಗಿ ನೀಡುತ್ತಿದ್ದರು. ಅದನ್ನು ಗಮನಿಸಿದ ಬಸವಣ್ಣನವರು-ಹಾಗೆ ಇಟ್ಟುದನ್ನೆಲ್ಲಾ ಪಕ್ಕಕ್ಕೆ ತೆಗೆದಿಟ್ಟರು-ಮತ್ತು ಅದನ್ನು ತಮ್ಮ ಹೆಂಡತಿಗೆ ತೋರಿ-“ಇದೋ ನೀನು ಇಟ್ಟ ಪಾಪದ ಅನ್ನವಿದು” ಎಂದರು. ಈ ಒಂದು ಕಹಿಪ್ರಸಂಗವನ್ನು ಬಸವಣ್ಣನವರು ತಮ್ಮ ಸೋದರಳಿಯನೂ ಮಹಾಜ್ಞಾನಿಯೂ ಆದ ಚೆನ್ನಬಸವಣ್ಣನವರೊಡನೆ ಹೇಳಿಕೊಂಡು-ಅಂಥ ವಿಶೇಷವಾದ ಆದರಣೆ ತಮಗೆ ಬೇಡವೆಂದರು. ಬಸವಣ್ಣನವರು ಯಾವೊತ್ತೂ ಶರಣರಿಗೆ ಅವಮರ್ಯಾದೆಯಾದೀತೆಂಬ ಎಚ್ಚರದಿಂದಲೇ ನಡೆದುಕೊಳ್ಳುತ್ತಿದ್ದರು ಮತ್ತು ಆ ಶರಣರು ಪಡುವ ಸುಖಕ್ಕಿಂತ ಅಧಿಕವಾದ ಸುಖವನ್ನು ಅವರೆಂದಿಗೂ ಬಯಸಲಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು