•  
  •  
  •  
  •  
Index   ವಚನ - 441    Search  
 
ಭಕ್ತನ ಮಾಹೇಶ್ವರಸ್ಥಲ - ನಡೆ-ನುಡಿ
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ- ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ; ಒಂದು ಜವೆ ಕೊರತೆಯಾದರೆ ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.
Transliteration Bhakti subhāṣeya nuḍiya nuḍive, nuḍidante naḍeve, naḍeyoḷage nuḍiya pūraisuve- mēle tūguva trāsu kaṭṭaḷe nim'ma kaiyalli; ondu jave korateyādare ennanaddi nīneddu hōgu, kūḍalasaṅgamadēvā
Manuscript
Music Courtesy: Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2 I speak the words of pious speech, I act even as I talk, I live up to my word in deed: In your hand are also The balance and weights: Should I give underweight By even a barley-grain, You'll drown me and arise and go, O Kūḍala Saṅgama Lord! Translated by: L M A Menezes, S M Angadi
Hindi Translation भक्ति सुभाषित उक्ति कहूँगा कथनानुसार आचरण करुँगा आचरण में वचन का पालन करुँगा तुला और तुला-नियम तुम्हारे हाथ में है जौ भर कम हो तो मुझे डुबोकर चले जाओ कूडलसंगमदेव ॥ Translated by: Banakara K Gowdappa
Telugu Translation భక్తి సుభాషను పలికెద పలికినట్టు నడచెద నడతలో పల్కు చెల్లించెద పైదూగు నీచేతి త్రాసున ఒక రవయేని కొఱగల్గెనా ననువిడిచి పారిపోవయ్యా కూడల సంగయ్యా! Translated by: Dr. Badala Ramaiah
Tamil Translation பக்தியைக் குறித்து உயர்ந்த கருத்துக்களைக் கூறுவேன், கூறியபடி ஒழுகுவேன் சொல்லும், செயலும் ஒருமித்திருக்கும் மேலே கட்டியுள்ள துலாக்கோல் உம் கையிலுள்ளது, கூந்தலின் இழை அளவு குறையுமெனின் என்னை நீ அழுத்தி அகல்வாய், கூடலசங்கமதேவனே. Translated by: Smt. Kalyani Venkataraman, Chennai
Marathi Translation भक्ति बोल हे माझे तोंडून बोले तैसा दाविन चालून वाणीपरी आचरणी राहून वाहून घे शरणाला बोला हो बोला मजशी तराजूत तोला ||ध्रु|| तोल आपुले हाती देवून पाहत राहिन मी सहजेतून रतीभरही फरका पाहून कष्ट होई संगाला बोला हो बोला मजशि तराजूत तोला ||धृ|| कूडलसंगमदेव मजला खुशाल बुडवा वेळ कशाला ? यावीण मागे नच तुम्हाला वाणी आचरणी फरक दिसला बोला हो बोला मजशि तराजूत तोला ||ध्रु|| अर्थ - भक्तिपूर्वक मृदु संभाषण सदैव माझ्या तोंडून बाहेर येईल. जैसे बोलेन तसेच चालेन. माझ्या वाणीत आणि आचरणात तसूभरही फरक पडू देणार नाही. त्यात सदैव समतोल साधीत राहीन. जनहो वाटल्यास तुम्ही आपल्या हाती तराजू घेवून, माझे बोल तोलून पहा. जर त्यात रतीभरही फरक आढळून आल्यास मला हवी ती शिक्षा द्या. मी आपण दिलेल्या शिक्षेच सहर्ष स्वागत करीन. Translated by Rajendra Jirobe, Published by V B Patil, Hirabaug, Chembur, Mumbai, 1983 भक्तीपूर्ण मधुरवाणी बोलेन, बोलल्याप्रमाणे वागेन, बोले तैसा चाले असेच वर्तन ठेवीन. जोखण्याचा तराजू तुमच्या हाती आहे. त्यात एक गुंज कमी पडला तरी मला बुडवून तू उठून जा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜವೆ = ; ತ್ರಾಸು = ; ಪೂರೈಸು = ; ಸುಭಾಷೆ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಈ ವಚನದಲ್ಲಿ ಒಂದು ನಿಷ್ಠುರವಾದ ಕಾರ್ಯಪ್ರಣಾಳಿಕೆಯನ್ನು ಹಾಕಿಕೊಂಡು ಅದರಂತೆ ಶತಾಯುಗತಾಯು ನಡೆಯುವಂತೆಯೂ-ನಡೆಯದಿದ್ದರೆ ತಮ್ಮನ್ನು ದೇವರು ತಿರಸ್ಕರಿಸಬೇಕೆಂದೂ-ಆ ದೇವರ ಮುಂದೆಯೇ ಪ್ರತಿಜ್ಞೆ ಮಾಡುತ್ತಿರುವರು : ಭಕ್ತಿಯನ್ನು ಕುರಿತು ಒಳ್ಳೆಯದನ್ನು ನುಡಿಯುತ್ತೇನೆ-ನುಡಿದಂತೆ ನಡೆದು ಆ ನಡೆಯಲ್ಲಿ ನಾನು ನುಡಿದಿದ್ದನ್ನೆಲ್ಲ ನೆರವೇರಿಸುತ್ತೇನೆ. ಶಿವನೇ, ತಕ್ಕಡಿ ಮತ್ತು ತೂಕದ ಬಟ್ಟು ಎರಡೂ ನಿನ್ನ ಕೈಯಲ್ಲಿ-ನನ್ನ ಮಾತೆಷ್ಟು ಕೃತಿಯೆಷ್ಟು ಎಂದು ತೂಗಿ ನೋಡು. ನಾನು ಮಾಡಿದ ಕೃತಿ ಆಡಿದ ಮಾತಿಗಿಂತ ಒಂದು ಚೂರು ಕಡಿಮೆಯಾದರೂ ನನ್ನನ್ನು ಈ ಸಂಸಾರಸಾಗರದ ನಡುನೀರಲ್ಲೇ ಮುಳುಗಿಸಿಬಿಟ್ಟು ನೀನು ಹೋರಟುಹೋಗು-ಎನ್ನುತ್ತಿದ್ದಾರೆ ಬಸವಣ್ಣನವರು. ಇದರ ತಾತ್ಪರ್ಯವೆಂದರೆ-ಬಸವಣ್ಣನವರು ಧರ್ಮಕ್ಕನುಸಾರವಾಗಿ ನಿರ್ಣಾಯಕವಾಗಿ ಮಾತುಗಳನ್ನಾಡುತ್ತಿದ್ದರು-ಅದಕ್ಕನುಸಾರವಾಗಿ ಮಾಡಬೇಕಾದ್ದನ್ನು ನಿಷ್ಕೃಷ್ಟವಾಗಿ ಮಾಡಿ ಮುಗಿಸುತ್ತಿದ್ದರು. ಅವರು ಈ ವಾಕ್-ಕಾರ್ಯ ಸಮಗಮನ ಸೂತ್ರವನ್ನು ನಿತ್ಯಪ್ರತಿಜ್ಞೆಯಾಗಿ ಕೈಕೊಂಡಿದ್ದರು. ನುಡಿದರೆ ಮುತ್ತಿನಹಾರದಂತಿರಬೇಕು ಎಂಬ ಅವರ 805ನೇ ವಚನವನ್ನು ನೋಡಿ. ಭಕ್ತಿ ಸಂಭಾಷಣೆ : ಭಕ್ತಿಯನ್ನು ಕುರಿತ ಸಲ್ಲಾಪ. ತ್ರಾಸುಕಟ್ಟಳೆ ; ತಕ್ಕಡಿ ಮತ್ತು ತೂಕದ ಕಲ್ಲು. ಜವೆ<ಯವೆ : ಗೋಧಿಯ ಕಾಳು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು