•  
  •  
  •  
  •  
Index   ವಚನ - 442    Search  
 
ಭಕ್ತನ ಮಾಹೇಶ್ವರಸ್ಥಲ - ಭಕ್ತ
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ: ಓಡಲಾಗದು ಲೆಂಕನು, ಬೇಡಲಾಗದು ಭಕ್ತನು. ಓಡೆನಯ್ಯಾ, ಬೇಡೆನಯ್ಯಾ, ಕೂಡಲಸಂಗಮದೇವಾ.
Transliteration Ōḍuvāta leṅkanalla, bēḍuvāta bhaktanalla: Ōḍalāgadu leṅkanu, bēḍalāgadu bhaktanu. Ōḍenayyā, bēḍanayyā, kūḍalasaṅgamadēvā.
Manuscript
English Translation 2 He is no servant-man who runs, Nor devotee who begs... No servant-man should run, Nor devotee should beg. I will not run nor beg, O Kūḍala Saṅgama Lord! Translated by: L M A Menezes, S M Angadi
Hindi Translation पलायक भृत्य नहीं, याचक भक्त नहीं भृत्य को भागना नहीं चाहिए, भक्त को माँगना नहीं चाहिए मैं न भागूँगा, न माँगूगा कूडलसंगमदेव ॥ Translated by: Banakara K Gowdappa
Telugu Translation ఓడువాడు భటుడుకాడు వేడువాడు భక్తుడుకాడు ఓడతగదు భటుడు వేడ తగదు భక్తుడు ఓడనయ్యా వేడనయ్యా కూడల సంగయ్యా! Translated by: Dr. Badala Ramaiah
Tamil Translation ஓடுவோன் உயிரை ஈயும் தொண்டனன்று வேண்டுவோன் பக்தனன்று உயிரை ஈயும் தொண்டன் ஓடலாகாது பக்தன் வேண்டக் கூடாது ஓடேன் ஐயனே, வேண்டேன் ஐயனே கூடல சங்கம தேவனே. Translated by: Smt. Kalyani Venkataraman, Chennai
Marathi Translation पळणारा नोहे वीर भक्त नोहे मागणार न पळे तो वीर धीर एकमेव खास सद्भक्ता न मागता ये वीरा पळून न जाता ये कूडलसंगमदेवा ! बा हे पाहे चार सत्य अर्थ - जीवनात पलायन करणाऱ्याना तुझा भक्त वा शरण म्हणवून घेता येणार नाही. तसेच भीक मागणारा तुझा भक्त वा शरण होऊच शकत नाही. म्हणून हे कूडलसंगमदेवा! मी कधीही जीवनात पलायन करणार नाही. तसेच काहीही कुणाला मागणार पण नाही. Translated by Rajendra Jirobe, Published by V B Patil, Hirabaug, Chembur, Mumbai, 1983 पळून जाणारा वीर नाही, मागणारा भक्त नाही. पळून जाऊ नये वीराने, मागू नये भक्तांनी, पळणार नाही देवा, मागणार नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಲೆಂಕ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಮ್ಮನ್ನು ಒಬ್ಬ “ಭಕ್ತ”ನನ್ನಾಗಿಯೇ ಕರೆದುಕೊಂಡಿರುವುದು ಪ್ರಸಿದ್ದವೇ ಆಗಿದೆ. ಈ ವಚನದಲ್ಲಿ ಅವರು ಅಂಥ ಭಕ್ತನ ಲಕ್ಷಣವನ್ನು ಹೇಳಿರುವರು. ಶಿವಭಕ್ತನು ಶಿವನ ಸೈನಿಕ(ಲೆಂಕ)ನು, ಅವನು ಶಿವಭಕ್ತಿಸ್ಥಾಪನೆಗಾಗಿ ಅಮರಣ ಹೋರಾಡಲು ಸಿದ್ಧನಾಗಿರಬೇಕು-ಮತ್ತು ಯಾರನ್ನೂ ಬೇಡಿ ಜೀವನ ನಡೆಸಬಾರದು. -ಬೇಡುವ ಹಕ್ಕು ಅವನಿಗಿಲ್ಲ. ಅವನು ದುಡಿದು (ಕಾಯಕಮಾಡಿ) ಬದುಕಬೇಕು. ಅಂದರೆ ಶಿವಸಾಮ್ರಾಜ್ಯದಲ್ಲಿ ಪ್ರಜೆಯಾದ ಶಿವಭಕ್ತನು ಏಕಕಾಲಕ್ಕೆ ಒಬ್ಬ ವೀರಸೈನಿಕನೂ ಮತ್ತು ಶ್ರದ್ಧಾವಂತ ಕಾರ್ಮಿಕನೂ ಆಗಿರಬೇಕಾಗಿತ್ತು. ಭಕ್ತ-ಶರಣ-ಜಂಗಮ ಈ ಮೂರು ಸೇರಿ ಬಸವಸಮಾಜ. ಇಡೀ ಸಮಾಜದ ಉದ್ಧಾರಕ್ಕಾಗಿ ಭಕ್ತ(ಮತ್ತು ಶರಣ)ರು (ಕಾಯಕದಿಂದ) ಧನಸಹಾಯ ಮಾಡಬೇಕಿತ್ತು. ಈ ಧನದ ಸಂಗ್ರಹಣೆಯ ಹೊಣೆಯು ಸನ್ಯಾಸಿಯಾದ ಜಂಗಮದ ಮೇಲಿತ್ತು. ಈ ಜಂಗಮರಿಗೆ ಶರಣರೂ ಸಹಾಯಕರಾಗಿರುತ್ತಿದ್ದರು. (ನೋಡಿ ವಚನ 433, 437) ಈ ದೃಷ್ಟಿಯಿಂದ ಭಕ್ತನಿಗೆ ಬೇಡುವ ಹಕ್ಕಿಲ್ಲ. ಶರಣನು ಬೇಡಿದರೂ ಜಂಗಮದ ಪರವಾಗಿ ಮಾತ್ರ. ಹೀಗೆ ಜಂಗಮನೇತೃತ್ವದಲ್ಲಿ ಸಂಗ್ರಹವಾದ ನಿಧಿಯನ್ನು ಸಮಾಜೋದ್ಧಾರದ ಯೋಜನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸುವ ಜವಾಬ್ದಾರಿ ಇದ್ದುದು ಈ ಶರಣನಿಗೇ. ಲಕ್ಷಕ್ಕೊಬ್ಬ ಜಂಗಮ, ಸಾವಿರಕ್ಕೊಬ್ಬ ಶರಣ, ಮಿಕ್ಕವರೆಲ್ಲಾ ಭಕ್ತರು ! ವಿ. (1) ಲೆಂಕ : ಹಿಂದಿನ ಕಾಲದಲ್ಲಿ ರಾಜನ ಪರವಾಗಿ ಪ್ರಾಣವನ್ನು ಪಣವಾಗಿಟ್ಟು ಯುದ್ದಗಳಲ್ಲಿ ಹೋರಾಡುತ್ತಿದ್ದ ಪಟುಭಟರಲ್ಲಿ ಒಂದು ಬಗೆಯವರನ್ನು “ಲೆಂಕ”ರೆಂದು ಕರೆಯುತ್ತಿದ್ದರು. (2) ಬಸವ ಸಮಾಜದಲ್ಲಿ ಯಾರು ಬೇಡುವಂತಿಲ್ಲ. ಶರಣನಾಗಲಿ ಜಂಗಮನಾಗಲಿ ಬೇಡುವ ಹಕ್ಕನ್ನು ಪಡೆದಿದ್ದರೂ ತಮ್ಮ ಹೊಟ್ಟೆಪಾಡಿಗಾಗಿಯಲ್ಲ-ಸಮಾಜಸುಧಾರಣೆಗಾಗಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು