ಭಕ್ತನ ಮಾಹೇಶ್ವರಸ್ಥಲ - ಶರಣರ ಸಂಗ
ಚಂದ್ರ ಶೈತ್ಯದಲು ಬೆಳೆದ ಕಾಯಕ್ಕೆ
ಬೆಳುದಿಂಗಳ ಬಯಸುವ ಹಂಗೇಕಯ್ಯಾ?
ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ?
ಕೂಡಲಸಂಗಯ್ಯನ ಶರಣರು ಬಂದು
ತಮ್ಮವನೆಂದರೆ ಸಾಲದೆ ಅಯ್ಯಾ?
Transliteration Candra śaityadalu beḷeda kāyakke
beḷudiṅgaḷa bayasuva haṅgēkayyā?
Śaraṇara saṅgadalirdu śivana bēḍuva haṅgēkayyā?
Kūḍalasaṅgayyana śaraṇaru bandu
tam'mavanendare sālade ayyā?
Manuscript
English Translation 2 What needs a body grown
In the moon’s cold,
To long for light of moon?
What needs a man who lives
In the company of Śaraṇaś
To beg of Śiva ?... Is’ t not enough
If Lord Kūḍala Saṅga’s Śaraṇaś
Should come and claim me for their own ?
Translated by: L M A Menezes, S M Angadi
Hindi Translation चंद्रशीत में बढ़ती काया को
चंद्रिका-लिप्सा क्यों?
शरणसंग रहते शिव से माँगे क्यों?
कूडलसंगमदेव के शरणों का आकर
‘यह हमारा है’ कहना पर्याप्त नहीं?
Translated by: Banakara K Gowdappa
Telugu Translation చంద్రుని తైత్యమున పెరుగు దేహమునకు
వెన్నలగోరు ప్రమేయ మెందుకయ్యా
శరణుల నొడగూడి
శివుని వేడు కర్మ మేమయ్యా?
కూడల సంగని శరణులువచ్చి
తనవాడని పలుక చాలదే అయ్యా?
Translated by: Dr. Badala Ramaiah
Tamil Translation நிலவின் தண்ணொளியில் வளர்ந்த உயிருக்கு
நிலவொளியை விரும்பும் விருப்பம் எதற்கோ?
சிவடியாருடன் இருந்து கொண்டு சிவனை
சிவனை வேண்டும் விருப்பம் எதற்கோ?
கூடல சங்கனின் அடியார் வந்து, தம்மவன்
என்று கூறினால் போதாதோ ஐயனே?
Translated by: Smt. Kalyani Venkataraman, Chennai
Marathi Translation
चंद्र प्रकाशात, देह वाढलेला
चंद्र तो कशाला हवा आहे ?
शरण संगतीत, देह वाढलेला
शिव तो कशाला हवा आहे ?
मागणी ती खोटी, शिवशरणासाठी
तैसिच ती गोष्ट, चंद्राची ती
शरण येऊनिया, म्हणति आपुले ज्या
पुरे नव्हे का त्या, मागणे ते
कूडलसंगम देवा ! ऐसे मज वाटे
शरण येता दाटे, अंतर हे
अर्थ - चंद्राच्या शीतल प्रकाशात ज्यांचे शरीर वाढले आहे अशानी चंद्राची आशा तरी कां करावी ? तद्वतच शिवशरण संगतीत वाढलेल्याना शिवाची मागणी तरी कशाला ? कूडलसंगमदेवाच्या प्रिय शरणांना जे आपुलेसे केलेले आहेत व ज्यांना हे सद्भाग्य लाभले तेच खरे थोर होत. अशाना अन्य कसल्याही मागणीची गरजच उरत नाही. ते सदैव आत्मतृप्त असतात.
Translated by Rajendra Jirobe, Published by V B Patil, Hirabaug, Chembur, Mumbai, 1983
चंद्राच्या शितलतेने विकसित होणाऱ्या देहाला
चांदण्यांची अपेक्षा करण्याची गरज काय?
शरणसंगात राहून लिंगदेवाला मागण्याची गरज कशाला?
कूडलसंगाच्या शरणांनी येऊन आपले म्हणणे पुरे नाही?
Translated by Shalini Sreeshaila Doddamani
ಶಬ್ದಾರ್ಥಗಳು ಕಾಯ = ; ಶೈತ್ಯ = ; ಸಂಗಾತ = ; ಹಂಗು = ;
ಕನ್ನಡ ವ್ಯಾಖ್ಯಾನ ಶಿವಭಕ್ತರ ಅಭ್ಯುದಯಕ್ಕೆ ಕಣ್ಣೆದುರಿಗೇ ಶಿವಶರಣರಿರುವಾಗ ಮತ್ತೆ ಶಿವನ ಹಂಗೇಕೆಂದು ಹೇಳಿ-ಅದಕ್ಕೊಂದು ನಿದರ್ಶನವಾಗಿ-ಚಂದ್ರದರ್ಶನ (ಶೈತ್ಯ)ದಿಂದಲೇ ನೇರವಾಗಿ ಉಲ್ಲಾಸಗೊಳ್ಳುವ ಸಮುದ್ರಕ್ಕೆ ಚಂದ್ರನ ಬೆಳುದಿಂಗಳ ಹಂಗಿನ ಪ್ರತ್ಯೇಕ ಅವಶ್ಯಕತೆ ಇಲ್ಲವೆನ್ನುತ್ತ ಶಿವಭಕ್ತರನ್ನು ಅಪಾರ ಸಮುದ್ರಕ್ಕೂ ಶಿವಶರಣರನ್ನು ಶೀತಲ ಚಂದ್ರನಿಗೂ ಹೋಲಿಸಿರುವುದು ಅರ್ಥಪೂರ್ಣ.
ಶಿವಭಕ್ತರು ಉದ್ಧಾರಕ್ಕಾಗಿ ತಹತಹಿಸುತ್ತಿದ್ದರೆ-ಶಿವಶರಣರು ಆ ಶಿವಭಕ್ತರತ್ತ ಕೃಪಾದೃಷ್ಟಿಯಿಂದ ಅವಲೋಕಿಸುವರು ಆ ಮೂಲಕ ಶಿವಶಕ್ತಿ ಆ ಭಕ್ತರ ಮೇಲೆ ತಾನೇ ತಾನಾಗಿ ಸುರಿಯುವುದೆಂಬುದಭಿಪ್ರಾಯ.
ಬಸವಣ್ಣನವರಿಗೆ ದೇವರ ಬಗೆಗಿದ್ದ ಕಲ್ಪನೆಯನ್ನು ಈ ವಚನದಲ್ಲಿ ಮನಗಾಣಬಹುದು. ಲೆಕ್ಕಕ್ಕಿದೆ ಆಟಕ್ಕಿಲ್ಲವೆಂಬಂತೆ ಬಸವಣ್ಣನವರಿಗೆ ಶಿವನು ಒಂದು ತಾತ್ವಿಕ ಸತ್ಯವಷ್ಟೆ-ಗಟ್ಟಿಮುಟ್ಟಾದ ಸತ್ಯಗಳೆಂದರೆ (ಭಕ್ತರು-) ಶರಣ(ರು ಮತ್ತು ಜಂಗಮ)ರಷ್ಟೆ. (ನೋಡಿ ಹಿಂದಿನ ವಚನದ ವ್ಯಾಖ್ಯಾನವನ್ನು).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು