ಭಕ್ತನ ಮಾಹೇಶ್ವರಸ್ಥಲ - ಪರಸ್ತ್ರೀ
ಎಲ್ಲಿ ನೋಡಿದಲ್ಲಿ ಮನವೆಳಸಿದರೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಪರವಧುವನು ಮಾಹಾದೇವಿಯೆಂಬೆ,
ಕೂಡಲಸಂಗಮದೇವಾ.
Transliteration Nōḍidalli manaveḷasidare
āṇe, nim'māṇe, nim'ma pramatharāṇe!
Paravadhuvanu mahādēviyembe,
kūḍalasaṅgamadēvā.
Manuscript
Hindi Translation जहाँ देखूँ वहाँ मेरा मन भटक जाय
तो तव सौगंध, तव प्रमथों की सौगंध
परवधू को महादेवी मानता हूँ
कूडलसंगमदेव ॥
Translated by: Banakara K Gowdappa
Telugu Translation చూచిన కడయెల్లా మనసీడ్చెనా
ఆన! నీ యాన నీ ప్రమథుల ఆన
పరవధువును మహాదేవియందు
కూడల సంగమ దేవా!
Translated by: Dr. Badala Ramaiah
Tamil Translation நோக்குமிடமெல்லாம் மனத்தைச் செலுத்தின்
ஆணை, உம்மாணை உம் கணங்களின் ஆணை
பிறன்மனையை மகாதேவி என்பேன்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
जिकडे पाहीन तिकडे मन आकर्षित झाले तर
शपथ, तुमची शपथ, तुमच्या प्रमथांची शपथ.
परस्त्रीला महादेवी म्हणतो कूडलसंगमदेवा.
Translated by Shalini Sreeshaila Doddamani
Urdu Translation تری قسم ، ترے ہرپارسا بھگت کی قسم
قدم قد م پہ ہَوس سے بچاؤں گادل کو
پرائی نا رکوسمجھوں گا میں مہادیوی
یہ عہد کرتا ہوں اے دیوا کوڈلا سنگم
Translated by: Hameed Almas
ಶಬ್ದಾರ್ಥಗಳು ಆಣೆ = ಪ್ರಮಾಣ, ಸಾಕ್ಷಿ; ಎಳಸು = ; ಪರವಧು = ; ಪ್ರಥಮರು = ;
ಕನ್ನಡ ವ್ಯಾಖ್ಯಾನ ಪ್ರಾಚೀನಭಾರತದಲ್ಲಿ ವೇಶ್ಯಾಗಮನ ಒಂದು ನಾಗರಿಕ ಹವ್ಯಾಸವೇ ಆಗಿತ್ತು. ಆದರೆ ಪರಸತೀಗಮನ ಅತ್ಯಂತ ನಿಂದ್ಯವಾಗಿ ಅದಕ್ಕೆ ಉಗ್ರವಾದ ಶಿಕ್ಷೆಯಾಗುತ್ತಿತ್ತು. ಬಸವಣ್ಣನವರು ಈ ಪರಸತೀಗಮನವನ್ನು ಕೇವಲ ನಿಷೇಧಾತ್ಮಕವಾಗಿ ನೋಡದೆ-ಪರಸತಿಯರನ್ನು ಶಿವನ ಹೆಂಡತಿಯಾದ ಪಾರ್ವತಿಯನ್ನಂತೆ ಪೂಜ್ಯ ಭಾವದಿಂದ ಕಾಣುವುದಾಗಿ ಪ್ರತಿಜ್ಞೆ ಮಾಡುತ್ತಿರುವರು.
ಪರಸತಿಯರನ್ನು ಕಾಣಬಾರದೆಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಳ್ಳಬೇಕಾಗಿಲ್ಲ-ಆದರೆ ಅವರನ್ನು ಕಂಡ ಕಣ್ಣಲ್ಲಿ ಕಾಮಸಂಚಾರವಾಗಬಾರದು, ಬದಲಿಗೆ ಭಕ್ತಿಸಂಚಾರವಾಗಬೇಕೆಂಬುದು ಬಸವಣ್ಣನವರ ಅನುಶಾಸನ.
ಮಹಾದೇವಿ : (1) ಮಹಾದೇವನಾದ ಶಿವನ ಹೆಂಡತಿ ಪಾರ್ವತಿ (2) ರಾಜನ ಹೆಂಡತಿ. ಈ ಎರಡನೇ ಅರ್ಥ ಈ ವಚನದಲ್ಲಿ ಅಪ್ರಕೃತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು