•  
  •  
  •  
  •  
Index   ವಚನ - 448    Search  
 
ಒಂದಕ್ಕೊಂಬತ್ತ ನುಡಿದು, ಕಣ್ಣ ಕೆಂಚನೆ ಮಾಡಿ, ಗಂಡುಗೆದರಿ, ಮುಡುಹಿಕ್ಕಿ ಕೆಲೆವವರ ಕಂಡಡಂಜುವೆ, ಓಸರಿಸುವೆ ! ಓಡಿದೆನೆಂಬ ಭಂಗವಾದಡಾಗಲಿ: ನಮ್ಮ ಕೂಡಲಸಂಗನ ಶರಣರ ಅನುಭಾವವಿಲ್ಲದವರ ಹೊಲಮೇರೆಯ ಹೊಂದೆ, ಹೊಲನ ಬಿಟ್ಟೋಡುವೆ!
Transliteration Ondakkombatta nuḍidu, kaṇṇa ken̄cane māḍi, gaṇḍugedari, muḍ'̔uhikki kelevavara kaṇḍaḍan̄juve, ōsarisuve! Ōḍidenemba bhaṅgavādāgali: Nam'ma kūḍalasaṅgana śaraṇara anubhāvavilladavara holamēreya honde, holana biṭṭoḍuve!
Manuscript
English Translation 2 At sight of those who talk Protesting for too much, Roll their eyes red and strike A hero’s pose, pugnaciously talk tall, I tremble and retreat ! Let the disgrace of flight come if it will; If I am close to the boundary Of those who lack experience Of our Kūḍala Saṅga’s Śaraṇaś I leave my plot and run ! Translated by: L M A Menezes, S M Angadi
Hindi Translation एक की दस सुनाकर, आँखे लाल कर वीरावेश से ‘भुजास्फालन’ देख मैं डर जाता हूँ, पीछे हट जाता हूँ । मेरे भागने से अपमान हो तो, मम कूडलसंगमदेव के शरणों के अननुभावियों की क्षेत्र सीमा में ना रहुँगा, वहाँ से भाग जाऊँगा॥ Translated by: Banakara K Gowdappa
Telugu Translation ఒకటికి పదివాగి కనులెర్రచేసి మగటిమి జూపి చెనకి పేలెడివారల చూడ వెఱతునయ్యా వెనుకంజ వేతునయ్యా పాఱుబోతని పలికిన పరుల పలుకనీ కూడల సంగని శరణుల అనుభావము లేని వారి పొలిమేర దొక్కిన తొలుగునయ్యా నా పట్టు Translated by: Dr. Badala Ramaiah
Tamil Translation ஒன்றனுக்கு ஒன்பதை உரைத்து கண்களைச் சிவக்க வைத்து, வீர உரைகளை உரைத்து, அழிக்க எண்ணி, கூக்குரல் இடுவோரைக் கண்டு அஞ்சுவேன், பின்னடைவேன் ஓடினேன் எனும் பங்கம் வரினும் வரட்டும் நம் கூடல சங்கனின் அடியாரை அறியாதோரின் எல்லையை அடையேன், அங்கிருந்து ஓடுவேன். Translated by: Smt. Kalyani Venkataraman, Chennai
Marathi Translation एकासि नऊ शब्द खर्चिती वाचाळ बडबडती लाल भडक डोळ्यानी बघती पौरूष दाखवितो तिथे नम्र मी आणि भ्याड मी तयासाठी लपतो शरणा सान्निध जाता कळले म्हणूनिया पळतो निंदो वंदो मज नच भीती वा नच हळहळती कूडलसंगमदेव! क्षेत्र ते सोडुनिया जातो अर्थ - काही वाचाळ लोक एका शब्दासाठी अनेक शब्द खर्चितात तशाना शब्दाचा अर्थ कळलेला नसतो. किंबहुना ते आपले डोळे लाल भडक करून आपल्यात नसलेले पौरुष दाखविण्याचा प्रयत्न करीत असतात. असे अल्पज्ञ स्वतःच्या होणाऱ्या ऱ्हासासही ओळखण्यास अपात्र असतात कारण ते आपली बुद्धीमता व चैतन्य व्यर्थ वाया घालवित असतात. महात्मा बसवेश्वराना शरण सान्निध्यात राहून त्यांच्या आचाराचा पूर्ण अनुभव, अनुभाव व अनुभूती झालेली असल्यामुळे ते अशा वाचाळ व अल्पज्ञानापासून दूर राहू इच्छितात जसे नंगेसे खुदा डरे‘ या उक्तिप्रमाणे शरणवृत्ती थोर सिद्ध करण्यासाठी तशा वाचाळांचे क्षेत्रच त्याग करीत आहेत. Translated by Rajendra Jirobe, Published by V B Patil, Hirabaug, Chembur, Mumbai, 1983 एकाला नऊ म्हणणारे, डोळे लाल करुन पौरुषत्त्व दाखविणाऱ्यांना पाहून घाबरतो, मान खाली घालतो. पळपुटा म्हणून कलंक लागला तरी चालेल. आमच्या कूडलसंगाच्या शरणांच्या अनुभाव नसलेल्यांच्या शेताच्या शेजारी माझे शेत ठेवणार नाही, शेत सोडून पळून जातो. Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಓಸರಿಸು = ; ಕೆಂಚನೆ = ; ಕೆಲೆ = ; ಭಂಗ = ; ಮುಡು = ; ಹೊಂದೆ = ;
ಕನ್ನಡ ವ್ಯಾಖ್ಯಾನ ಶಿವಶರಣರ ಸಂಗ ಮತ್ತು ಪ್ರಸಂಗದಿಂದ ಶಿವಾನುಭಾವವನ್ನು ಸಂಪಾದಿಸದೆ-ಸಂಪಾದಿಸಬೇಕೆಂಬ ಹಂಬಲವೂ ಇಲ್ಲದೆ-ಏನೂ ತಿಳಿಯದೆ ಕೇವಲ ಖಂಡನೆ ಮಾಡುವ ಆತುರದಲ್ಲಿ ಒಂದು ಮಾತನಾಡಬೇಕಾದೆಡೆ ಒಂಭತ್ತು ಮಾತನಾಡುತ್ತ, ಯಾರಾದರೂ ತಿದ್ದಲು ಬಂದರೆ ಕಣ್ಣನ್ನು ಕೆಂಪಗೆ ಮಾಡುತ್ತ, ಮೈಯುಬ್ಬಿಸಿ ಮೀಸೆ ತಿರುವುತ್ತ, ಪ್ರತಿಜ್ಞೆಗಳನ್ನು ಮಾಡಿ ಷರತ್ತುಗಳನ್ನು ಹಾಕುತ್ತ, ತನ್ನ ತಲೆಯ ಮೇಲಿನ ಟೊಪ್ಪಿಗೆಯನ್ನು ತೆಗೆದು ನೆಲಕ್ಕೆಸೆದು-ವಿದ್ವಾಂಸನಾದರೆ ಅದನ್ನು ಮೊದಲು ಮೇಲೆತ್ತು ನೋಡೋಣ-ಆಮೇಲೆ ನನ್ನೊಡನೆ ವಾದಮಾಡುವೆಯೆನ್ನುತ್ತ, ಆಹಾಕಾರವೆಬ್ಬಿಸಿ ಹಾರಾಡುವ ಅಸಭ್ಯನೊಡನೆ ತಾವೆಂದಿಗೂ ವಾದಕ್ಕಿಳಿಯುವುದಿಲ್ಲವೆನ್ನುತ್ತಿರುವರು ಬಸವಣ್ಣನವರು. ಮತ್ತೆ ಮುಂದುವರಿದು-ಆ ಜಾಗವನ್ನೇ ಬಿಟ್ಟುಹೋಗುತ್ತೇನೆ, ವಾದ ಮಾಡಲಾರದೆ ಅಂಜಿಹೋದನೆಂದು ಜನರಾಡಿಕೊಳ್ಳಲಿ. ಅವಮಾನವಾಗಲಿ-ವಿತಂಡವಾದಿಗಳನ್ನು ಕಂಡರೆ ತಮಗೆ ನಿಜವಾಗಿಯೂ ಅಂಜಿಕೆಯೆನ್ನುತ್ತ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವರು. ಮತ್ತೊಮ್ಮೆ ಆ ದುರ್ವಿದಗ್ಧರ ಆಸುಪಾಸಿನಲ್ಲೂ ಅಡ್ಡಾಡುವುದಿಲ್ಲವೆನ್ನುತ್ತಿರುವರು. ಬಸವಣ್ಣನವರು ಮಿಕ್ಕ ಆಚಾರ್ಯರಂತೆ ವಾದ ಮಾಡಿ ಸಿದ್ಧಾಂತವನ್ನು ಸ್ಥಾಪಿಸಿದವರಲ್ಲ-ಜನರ ಹೃದಯಪರಿವರ್ತನೆ ಮಾಡಿ ಸಮಾಜವನ್ನು ಕಟ್ಟಿದವರು. ಅವರು -750ನೇ ವಚನದಿಂದ ಮತ್ತು 531ನೇ ವಚನದಿಂದ ತಿಳಿದುಬರುವಂತೆ-ಮೀಮಾಂಸಕನೊಬ್ಬನೊಡನೆ ಒಮ್ಮೆ ವಾದ ಮಾಡಿದ್ದುಂಟು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು