•  
  •  
  •  
  •  
Index   ವಚನ - 450    Search  
 
ಭಕ್ತನ ಮಾಹೇಶ್ವರಸ್ಥಲ - ಪ್ರಾರ್ಥನೆ
ಒಡೆಯರಾಡುವ ಮಾತ ಕಡೆ ಪರಿಯಂತರ ಕೇಳಿ, ಇದಿರು ಹೋಗಿ ಕಿಂಕರನಾಗಿ ಬಿನ್ನಹವ ಮಾಡುವ ಸದ್ಭಕ್ತರ ತೋರಯ್ಯಾ! ಒಡೆಯರಾಡುವ ಮಾತ ಕಂಡು, ಕರೆವಲ್ಲಿ ಕೆಡೆಮೆಟ್ಟಿ ಬಾಯಿ ಘನವೆಂದು ಆಡುವವನ ತೋರದಿರಯ್ಯಾ, ಅವನ ಸಂಗದಲ್ಲಿರಿಸದಿರಯ್ಯಾ, ಅವನ ಸಹಪಂಕ್ತಿಯಲ್ಲಿ ಕುಳ್ಳಿರಿಸದಿರಯ್ಯಾ! ಕೂಡಲಸಂಗಮದೇವಯ್ಯಾ, ನಿಮ್ಮ ಬೇಡುವುದೊಂದೇ ವರವು.
Transliteration Oḍeyaraḍuva māta kaḍepariyantara kēḷi, idiru hōgi kiṅkaranāgi binnahava māḍuva sadbhaktara tōrayya! Oḍeyaraḍuva māta kaṇḍu, karevalli keḍemeṭṭi bāyi ghanavendu āḍuvavana tōradirayyā, avana saṅgadallirisadirayyā, avana sahapaṅktiyalli kuḷḷirisadirayyā! Kūḍalasaṅgamadēvayya, nim'ma bēḍuvudondē varavu.
Manuscript
English Translation 2 Show me, O Lord, such as Obey the Masters, word until the end; Who, in humility, go out To meet them and entreat! But show me not, O Lord, The man who, thinking that his mouth Is big, talks loud as if to drown The masters' word when they, At sight of one, should call! Do not, Lord, place me in his company; Let me not sit, O Lord, In the same row as he. This is the one gift, pray, I beg of Thee, Kūḍala Saṅgama Lord! Translated by: L M A Menezes, S M Angadi
Hindi Translation प्रभुओं की बातें अंत तक सुनकर विनम्रता से आगे बढ विनती करनेवाले सद्भक्त दिखा दो स्वामी; प्रभुओं की बातें सुन, उनकी पुकार अनसुनी करनेवाले मुँहजोर वाचाल मत दिखाओ; उसके संग में मत रखो; उसकी पंक्ति में मुझे बैठने न दो; कूडलसंगमदेव, तुमसे यही वर माँगता हूँ ॥ Translated by: Banakara K Gowdappa
Telugu Translation ఒడయు లాడెడిమాట తుదిదాక ఆలించి ఎదురేగి కింకరుడై విన్నప మొనరించు సద్భక్తుల చూపుమయ్యా ఒడయు లాడెడిమాట వినక పిలిచిన చెలరేగి గళము ఘనమంచు వాగువానిని చూపింపకయ్యా వారిమధ్య నన్ను పడవేయకయ్యా కూర్చొన చేయకయ్య వారి మధ్య ఈ వరమొక్కటే నిను గోరెద కూడల సంగమదేవా! Translated by: Dr. Badala Ramaiah
Tamil Translation உடையர் கூறும் உரையை இறுதிவரை கேண்மின் எதிரில் சென்று, தொண்டனாக நடுங்கி விண்ணப்பிக்கும் நல்ல பக்தனை காட்டுவீர் உடையர் கூறும் உரையைக் கண்டு அழைக்கும் பொழுது வீழ்த்தி, மிதித்து செருக்குற்று உரைப்போனைக் காட்டது இருப்பாய் அவன் தொடர்பில் வைக்காதீர் ஐயனே அவனுடன் பந்தியில் அமர்த்தாதீர் ஐயனே! கூடல சங்கம தேவனே, உம்மிடம் இந்த ஒரு வரத்தையே வேண்டுகிறேன். Translated by: Smt. Kalyani Venkataraman, Chennai
Marathi Translation शरणांचे शब्द शेवटपर्यंत ऐक. त्यांच्या समोर विनम्र होऊन घाबरत विनंती करणाऱ्या सद्भक्तांना दाखवावे देवा. शरणांचे शब्द ऐकून शेवटी त्यांची उपेक्षा करणाऱ्यांचे तोंड मला दाखवू नका देवा. त्यांच्या संगात मला ठेवू नका देवा. त्यांच्या पंक्तीत मला बसवू नका देवा. कूडलसंगमदेवा, हा एकच वर तुम्हा मागतो. Translated by Shalini Sreeshaila Doddamani
ಶಬ್ದಾರ್ಥಗಳು ಕಿಂಕರ = ; ಕೆಡೆಮಟ್ಟು = ; ಪಂಕ್ತಿ = ; ಪರಿ = ; ಬಿನ್ನಹ = ; ಸಂಗಾತ = ;
ಕನ್ನಡ ವ್ಯಾಖ್ಯಾನ ಜಂಗಮರಾಡುವ ಮಾತನ್ನು ದೂರದಿಂದ ಪೂರ್ತಿ ಕೇಳಿ ಬಳಿ ಹೋಗಿ ಹೇಳುವುದನ್ನು ಬಿನ್ನೈಸಿಕೊಳ್ಳಬೇಕು. ಶರಣರು ಕಂಡು ಕರೆದರೆ ದೂರ ಹೋಗುತ್ತ ಬಾಯಿಜೋರು ಮಾಡುವನನ್ನು ನನಗೆ ತೋರಿಸಬೇಡ, ನನ್ನನ್ನು ಅವನ ಸಂಗದಲ್ಲಿರಿಸಬೇಡ, ಅವನ ಸಹಪಂಕ್ತಿಯಲ್ಲಿ ಕುಳ್ಳಿರಿಸಬೇಡ-ಎಲೇ ಶಿವನೇ ನಿನ್ನನ್ನು ನಾನು ಬೇಡುವುದಿದೊಂದೇ ವರವನ್ನು-ಎಂಬುದು ಈ ವಚನದ ಸರಳಾನುವಾದ. ಈ ವಚನದಲ್ಲಿ ಇದಿರುವೋಗಿ ಕೆಡೆಮೆಟ್ಟಿ ಮುಂತಾದ ಪದಪ್ರಯೋಗ ಸರಿಯಾಗಿಲ್ಲ. ಕ್ಷುದ್ರ ಶೈಲಿಯಿಂದಲೂ ಕ್ಷುದ್ರತರ ಧೋರಣೆಯಿಂದಲೂ ಈ ವಚನ ಬಸವಣ್ಣನವರ ನಿಜವಚನವಲ್ಲವೆನ್ನಲು ಹಿಂಜರಿಯಬೇಕಾಗಿಲ್ಲ. ಶರಣರಿಗೆ ಶಿವಭಕ್ತರು ವಿನಯವಾಗಿ ನಡೆದುಕೊಳ್ಳಬೇಕೆಂಬುದು ಬಸವಣ್ಣನವರ ಅಭಿಪ್ರಾಯವೆಂಬುದರಲ್ಲಿ ಸಂಶಯವಿಲ್ಲ. ಆದರೆ “ಶರಣರಿಗೆ ಮುಳಿಸತಾಳಿ ಎನ್ನ ಭಕ್ತಿ ಅರೆಯಾಯಿತ್ತು” (ನೋಡಿ ವಚನ 256) ಎಂಬ ಪ್ರಜ್ಞೆಯಿರುವ ಬಸವಣ್ಣನವರು-ಒಬ್ಬ ಭಕ್ತನ ಬಗೆಗೇ ಆಗಲಿ-“ಅವನ ಸಹಪಂಕ್ತಿಯಲು ಕುಳ್ಳಿರಿಸದಿರಯ್ಯ” ಎಂಬಷ್ಟು ಶಾಠ್ಯದಿಂದ ನಡೆದುಕೊಳ್ಳುವರೆಂಬುದಕ್ಕೆ ಬೇರೆ ಯಾವ ಸಾಕ್ಷಿಯೂ ಇಲ್ಲ. ಶಿವಭಕ್ತರು ನಡೆವಳಿಯಲ್ಲಿ ಕೊಂಚ ತಪ್ಪಿದಾಕ್ಷಣವೇ ಅವರನ್ನು ಬಹಿಷ್ಕರಿಸುವಂಥ ಮನೋಭಾವ ಬಸವಣ್ಣನವರಿಗಿರಲಿಲ್ಲ. ವಚನ 237, 276 ವಚನಗಳೊಡನೆ ಈ ವಚನವನ್ನು ಹೋಲಿಸಿ ನೋಡಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು