•  
  •  
  •  
  •  
Index   ವಚನ - 451    Search  
 
ಭಕ್ತನ ಮಾಹೇಶ್ವರಸ್ಥಲ - ಭಕ್ತ
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ! ಮಾಲೆಗಾರನೇಸು ಭಕ್ತನಾದರೆಯೂ ಬಾವಿಯ ಬೊಮ್ಮನ ಹಂಗ ಬಿಡ! ಬಣಜಿಗನೇಸು ಭಕ್ತನಾದರೆಯೂ ಒಟ್ಟಿಲ ಬೆನಕನ ಹಂಗ ಬಿಡ! ಕಂಚುಗಾರನೇಸು ಭಕ್ತನಾದರೆಯೂ ಕಾಳಿಕಾದೇವಿಯ ಹಂಗ ಬಿಡ! ನಾನಾವ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ, ಕೂಡಲಸಂಗಮದೇವಾ!
Transliteration Baḍahāruvanēsu bhaktanādaḍeyū nēṇina haṅga biḍa! Mālegāranēsu bhaktanādareyū bāviya bom'mana haṅga biḍa! Baṇajiganēsu bhaktanādareyū oṭṭila benakana haṅga biḍa! Kan̄cugāranēsu bhaktanādareyū kāḷikādēviya haṅga biḍa! Nānāva haṅginavanalla, nim'ma śaraṇara haṅginavanayyā, kūḍalasaṅgamadēvā!
Manuscript
English Translation 2 How long soever a devotee A poor Brahmin may have been, Does not give up regard for the holy thread; How long soever a devotee A florist may have been, He'll still desire to worship The Brahma near the well; How long soever a devotee A trader may have been, He'll not give up regard For the lump of clay by a heap How long soever a devotee A coppersmith may have been, He'll not give up regard For the goddess Kālika I have no regard for any But Thy Śaraṇās, O Kūḍala Saṅgama Lord! Translated by: L M A Menezes, S M Angadi
Hindi Translation कितना भी बडा भक्त हो दीन ब्राह्मण जनेऊ का मोह नहीं छोडता । कितना भी बडा भक्त हो फुलहारा कूपोपरिस्थ मूर्ति का मोह नहीं छोड़ता कितना भी बडा भक्त हो वणिक धान्याराशि के विनायक का मोह नहीं छोड़ता कितना भी बडा भक्त हो कंसेरा कालिका देवी का मोह नहीं छोड़ता मुझे किसी का मोह नहीं है, तव शरणों का मोह है कूडलसंगमदेव ॥ Translated by: Banakara K Gowdappa
Telugu Translation బడబాప డెంత భకుడైన విడడయ్య తాటి తగులము మాలకరి యెంత భకుడైన మఱువడయ్యా గట్టుబొమ్మకు పూజ బలిజ యెంత భక్తుడైనా వదలడయ్యా కుప్ప వెనకయ్యను కంసాలి యెంత భకుడైన కాదని విడ లేడయ్యా కాళీపూజను నీ శరణుల మఱుగు దప్ప నాకే బంధము లేదయ్యా కూడల సంగమదేవా! Translated by: Dr. Badala Ramaiah
Tamil Translation ஏழை அந்தணன் எவ்வளவு பக்தனாயினும் பூணூலின் தொடர்பை விடான் மாலை கட்டுவோன் எவ்வளவு பக்தனாயினும் வாவி பிரம்மனின் தொடர்பை விடான் வணிகன் எவ்வளவு பக்தனாயினும் பண்டக் குவியலை, கணபதியின் தொடர்பை விடான் கன்னான் எவ்வளவு பக்தனாயினும் காளிகா தேவியின் தொடர்பை விடான். பலவகை தொடர்பு எனக்கில்லை. உம் அடியாருடன் தொடர்பு உள்ளவன் ஐயனே கூடல சங்கமதேவனே. Translated by: Smt. Kalyani Venkataraman, Chennai
Marathi Translation गरीब ब्राह्मण कितीही मोठा भक्त झाला तरी जानव्याचा मोह सोडत नाही. माळी कितीही मोठा झाला तरी विहिरीतील देवतांचा मोह सोडत नाही. वाणी कितीही मोठा भक्त झाला तरी पिंडी गणेशाचा मोह सोडत नाही. सोनार कितीही मोठा भक्त झाला तरी कालिका देवीचा मोह सोडत नाही. मला कसलाही मोह नाही. तुमच्या शरणांच्या मोहात आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ನೇಣು = ; ಬಟ್ಟಿಲ = ; ಬಣಜಿಗ = ; ಬೆನಕ = ; ಹಂಗು = ;
ಕನ್ನಡ ವ್ಯಾಖ್ಯಾನ ಬೇರೆ ಬೇರೆ ಧರ್ಮದಿಂದ ಮತ್ತು (ಹಿಂದೂ ಧರ್ಮದಲ್ಲೇ) ಬೇರೆ ಬೇರೆ ಜಾತಿಯಿಂದ ಶಿವಧರ್ಮಕ್ಕೆ ಸೇರಿದವರೆಲ್ಲರೂ ಸಮಾನವಾಗಿ ಪೂಜಿಸಬೇಕಾದ್ದು ಶಿವನೊಬ್ಬನನ್ನೇ ಹೊರತು-ಪೂರ್ವಾಶ್ರಮದಲ್ಲಿ ತಾವು ಪೂಜಿಸುತ್ತಿದ್ದ ಶಿವೇತರ ದೇವತೆಗಳನ್ನಲ್ಲ. ಆದರೂ ಜನಸಾಮಾನ್ಯರು ಹೊಸದೊಂದು ಧರ್ಮಕ್ಕೆ ಸೇರಿದಾಗ-ಹಳೆಯದನ್ನು ಸಂಪೂರ್ಣವಾಗಿ ಮರೆತು, ಹೊಸದಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುವುದು. ಹೂವಾಡಿಗನು ಬಾವಿಯ ಬೊಮ್ಮನನ್ನು, ಬಣಜಿಗನು ಒಟ್ಟಿಲ ಗಣಪನನ್ನು, ಕಂಚುಗಾರನು ಕಾಳಿಕಾದೇವಿಯನ್ನು ಪೂಜಿಸುವುದನ್ನು ಬಿಟ್ಟರೆ ಏನೋ ಕೇಡಾಗುವುದೆಂದು ಭಯಪಡುವುದು ಸಹಜ. ಅವರ ಈ ಅಂತರ್ಮನಸ್ಸಿನ ಭೀತಿಗಳನ್ನು ಸಾವಧಾನದಿಂದ ನಿವಾರಿಸಬೇಕಾದುದು ಆ ಮತಾಚಾರ್ಯನ ಹೊಣೆ. ಆದರೆ ಬಸವಣ್ಣನವರು-ಬ್ರಾಹ್ಮಣನಿರಲಿ, ಹೂವಾಡಿಗ ಬಣಜಿಗ ಕಂಚುಗಾರ ಮುಂತಾದ ಹಿಂದುಳಿದ ವರ್ಗದವರನ್ನು ಕುರಿತಂತೆ-ಅವರು ಏಸು ಭಕ್ತರಾದರೆಯೂ ತಂತಮ್ಮ ಹಳೆಯ ದೇವರುಗಳನ್ನು ಬಿಡುವುದಿಲ್ಲವೆನ್ನುತ್ತ ಹತಾಶವಾಗಿ ನಿರ್ಣಯಿಸಿ ಹೇಳುತ್ತಿರುವುದು ಸುಧಾರಕನೊಬ್ಬನ ಧಾಟಿಯಲ್ಲ-ಆಗಬಾರದು. ಮತ್ತು ಬ್ರಾಹ್ಮಣರು ಶಿವಧರ್ಮಕ್ಕೆ ಸೇರಿದ ಮೇಲೆಯೂ ಹಿಂದಿನ ತಮ್ಮ ಜನ್ನಿವಾರವನ್ನು ಧರಿಸಿಯೇ ಇರುತ್ತಿದ್ದರೆಂದು ಈ ವಚನದಿಂದ ಊಹಿಸಬೇಕಾಗುವುದು. ಅಂಥ ಸಂದರ್ಭಗಳಲ್ಲಿ ಬಸವಣ್ಣನವರು ಅದನ್ನೆಲ್ಲಾ ನಿಸ್ಸಹಾಯಕರಂತೆ ಸಹಿಸಿಕೊಂಡಿದ್ದರೆನ್ನಬೇಕಾಗುವುದು. ಮತ್ತು ಆರಾಧ್ಯದೈವಗಳ ಈ ವಚನ ಸಂದರ್ಭದಲ್ಲಿ (ಯಜ್ಞೋಪವೀತವನ್ನಿರಲಿ) ಶಿವನ ಹಂಗಿನವ ನಾನು ಎಂದು ಬಸವಣ್ಣನವರು ಹೇಳಿಕೊಳ್ಳದೆ “ಶರಣರ ಹಂಗಿನವ ನಾನು” ಎಂದಿರುವುದು ಅನ್ವಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಈ ವಚನ ಬಸವಣ್ಣನವರದಲ್ಲವೆನ್ನಬೇಕಾಗಿದೆ. ಈ ವಚನ ಬಸವಣ್ಣನವರದಾಗಲಿ ಅಲ್ಲದಿರಲಿ-ಇದರಿಂದ ಒಂದು ಪ್ರಶ್ನೆ ಉದ್ಭವಿಸುತ್ತದೆ : ಇವತ್ತಿನ ವೀರಶೈವಸಮಾಜದಲ್ಲಿ ಅಂಗಧಾರಣೆಯ ಜೊತೆಗೆ ಯಜ್ಞೋಪವೀತವನ್ನೂ ಉಳಿಸಿಕೊಂಡು ಬಂದಿರುವ ಒಂದು ಪಂಗಡದವರಿದ್ದು-ಅವರು ಮೊದಲಿಗೆ ಬ್ರಾಹ್ಮಣರೇ ಆಗಿದ್ದರೇನು ? ವಿ : ಒಟ್ಟಿಲ ಬೆನಕ : ಬಣಜಿಗರು ವ್ಯಾಪಾರಕ್ಕೆ ಬಳಸುವ “ಸಬರ ಸಿಂಬೆ ಗೂಟ ಹಗ್ಗ ಕಣ್ಣಿ ಕಡತ ಬಳಪ ಮೊದಲಾದುವನ್ನು ಕುಪ್ಪೆಹಾಕಿ ಅದರ ಮೇಲಿಡುವ ಸಗಣಿಯ ಉಂಡೆ.”

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು