•  
  •  
  •  
  •  
Index   ವಚನ - 452    Search  
 
ಭಕ್ತನ ಮಾಹೇಶ್ವರಸ್ಥಲ - ಭವಿಭಕ್ತ
ಶ್ರೀವಿಭೂತಿ ರುದ್ರಾಕ್ಷಿಯಿದ್ದವರ ಲಿಂಗವೆಂಬೆ; ಇಲ್ಲದವರ ಭವಿಯೆಂಬೆ, ಕೂಡಲಸಂಗಮದೇವಾ,ಸದ್ಭಕ್ತರ ನೀನೆಂಬೆ.
Transliteration ಶ್ರೀವಿಭೂತಿರುದ್ರಾಕ್ಷಿಯಿದ್ದವರ ಲಿಂಗವೆಂಬೆ; ಇಲ್ಲದವರ ಭವಿಯೆಂಬೆ, ಕೂಡಲಸಂಗಮದೇವಾ,ಸದ್ಭಕ್ತರ ನೀನೆಂಬೆ.
Manuscript
English Translation 2 I hold them God who wear The holy beads and Ash, And worldlings those who have them not ; And those who are Thy real devotees, O KudalaSangama Lord, I hold them as Thyself. Translated by: L M A Menezes, S M Angadi
Hindi Translation विभूति-रुद्राक्षधारियों को लिंगदेव मानूँगा जो इनसे रहित हैं उन्हें ‘भवि’ मानूँगा; कूडलसंगमदेव सद्भक्तों को तुम ही मानूँगा ॥ Translated by: Banakara K Gowdappa
Telugu Translation శ్రీ విభూతి రుద్రాక్షల కలవారినే శివుడందు లేనివారల భవుడందు సంగమదేవా సద్భక్తులే నీవని తలతు Translated by: Dr. Badala Ramaiah
Tamil Translation திருநீறு உருத்திராக்கம் உள்ளவரை இலிங்கமென்பேன், அற்றோரை நெறியிலி என்பேன் கூடலசங்கமதேவனே, மேலான பக்தர்களை நீ என்பேன் Translated by: Smt. Kalyani Venkataraman, Chennai
Marathi Translation श्रीविभूती, भाळी, अंगी ने रुद्राक्ष शरणाची ती साक्ष, एकमेव सद्भक्ता पाहता, दिससी तूच त्यात तेचि संग सहित, वाटताती याविण ते मज, भवि वाटतात कूडलसंगमनाथ, जाणतसे अर्थ - कपाली त्रिपुंड भस्म, गळ्यात रुद्राक्ष व इष्टलिंग धारीयानाच मी साक्षात शिवस्वरुप समजतो. या चिन्हाशिवाय इतराना मी भोगवादी भवी समजतो. हे कूडलसंगमदेवा! (परमेश्वरा) तुझ्या सद्भभक्तात मला सदैव तूच दिसतोस. कारण लिंगभक्ताश्च जंगम म्हणून भाळी विभूती भस्म आणि गळ्यात इष्टलिंग, रुद्राक्ष पाहता अशाना ज्ञानजंगममूर्ति पर शिवलिंगच समजतो. Translated by Rajendra Jirobe, Published by V B Patil, Hirabaug, Chembur, Mumbai, 1983 श्रीविभूती, रुद्राक्षाने युक्त असणाऱ्यांना लिंग म्हणतो, हे नसणाऱ्यांना भवी म्हणतो. कूडलसंगमदेवा सद्भक्तांना तुमचे रुप म्हणतो. Translated by Shalini Sreeshaila Doddamani
ಶಬ್ದಾರ್ಥಗಳು ಭವಿ = ;
ಕನ್ನಡ ವ್ಯಾಖ್ಯಾನ ಲಿಂಗಧಾರಣೆ ಮಾಡಿದವರು ಸದ್ಭಕ್ತರು ಮತ್ತು ಅವರು ಸಾಕ್ಷಾತ್ ಶಿವ ಅಭವ ಸ್ವರೂಪಿಗಳು-ಉಳಿದವರು ಭವಿಗಳು ಎಂಬುದು ಒಂದು ಅಭಿಜ್ಞಾನವಾದ. ಎಲ್ಲ ಮತಗಳಲ್ಲಿಯೂ ಈ ವಿವೇಚನೆ ಇದ್ದದ್ದೆ. ಶಿವಧರ್ಮಕ್ಕೆ ಸೇರಿದವರನ್ನು ಭವಿ ಎನ್ನುವ ಈ ರೂಢಿ ಬಹಳ ಹಳೆಯದು. ಕೆಲವು ಪ್ರಮಥ(ಶರಣ)ರು ಬಿಜ್ಜಳನನ್ನು ಭವಿಯೆಂದು ಕರೆದು-ಅವನ ಆಶ್ರಯದಲ್ಲಿ ಇದ್ದುದಕ್ಕಾಗಿ ಆ ಬಸವಣ್ಣನವರನ್ನೇ ಖಂಡಿಸಿದ್ದುಂಟು. ಆದರೆ ಬಸವಣ್ಣನವರು ಆ ವಾದವನ್ನು ಒಪ್ಪಲಿಲ್ಲ-ಶಿವಕಾರ್ಯ ನಿರ್ವಹಣೆಗಾಗಿ ತಾವು ಭವಿಯೆನಿಸಿಕೊಂಡ ಯಾರ ಬಳಿಯಲ್ಲಾದರೂ ಕೆಲಸಕ್ಕಿರಲು ಸಿದ್ಧರೆಂದು ಹೇಳಿಕೊಂಡಿದ್ದರು (ನೋಡಿ ವಚನ-712). ಆದ್ದರಿಂದ ಬಸವಣ್ಣನವರ ಅಭಿಪ್ರಾಯದಲ್ಲಿ ಭವಿಗಳೆಂದರೆ ದೂರೀಕರಿಸಲ್ಪಡಬೇಕಾದವರೆಂದಲ್ಲ, ದ್ವೇಷಿಸಲ್ಪಡಬೇಕಾದವರೆಂದಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು