•  
  •  
  •  
  •  
Index   ವಚನ - 454    Search  
 
ಭಕ್ತನ ಮಾಹೇಶ್ವರಸ್ಥಲ - ಶರಣರ ಸಂಗ
ಲಿಂಗಾಂಗಿಗಳಲ್ಲದವರ, ಶರಣಸಂಗವಿಲ್ಲದವರ ಕಂಡರೆ ನಾಚುವೆ, ಅವರ ನುಡಿ ಎನಗೆ ಸಮನಿಸದಯ್ಯಾ, ಕೂಡಲಸಂಗಮದೇವಾ, ಅಲ್ಲಿ ನೀವಿಲ್ಲದ ಕಾರಣ.
Transliteration Liṅgāṅgigaḷalladavara, śaraṇasaṅgavilladavara kaṇḍare nācuve, avara nuḍi enage samanisadayya, kūḍalasaṅgamadēvā, alli nīvillada kāraṇa.
Manuscript
English Translation 2 I blush to see Such as do not wear The Liṅga on their body, nor have Association with the Śaraṇās. Their speech is not agreeable To me, O Kūḍala Saṅgama Lord, For Thou art absent thence! Translated by: L M A Menezes, S M Angadi
Hindi Translation जो लिंगधारी नहीं हैं और शरण-संगी नहीं हैं उन्हें देखकर लज्जित होता हूँ। उनकी बातें मुझे नहीं भातीं क्योंकि तुम वहाँ नहीं हो कूडलसंगमदेव ॥ Translated by: Banakara K Gowdappa
Telugu Translation లింగాంగులు గానివారల శరణుసంగులు గానివారల చూచిన సిగ్గగు వారి పల్కులు సరిపడవయ్యా కూడల సంగమదేవ! నీవట లేని కారణమున Translated by: Dr. Badala Ramaiah
Tamil Translation இலிங்கம் தரிக்காதவரை, அடியார் தொடர்பற்றவரைக் காணின் நாணுவேன் அவர்களின் சொல் எனக்குப் பொருந்தாது ஐயனே அங்கு நீ இல்லாததால் கூடல சங்கமதேவனே. Translated by: Smt. Kalyani Venkataraman, Chennai
Marathi Translation नाही जो लिंगागी, नाही शरणसंगी कोण तया अंगी, गुण ऐसा तयासि पाहता, मज वाटे लज्जा उभारुनि भुजा, सांगती हे त्यांचा शब्द मज, कासया रुचेना सांगतो कारण, तुम्हा लागी कूडलसंगमदेवा! नससि तू तेथे अनुभवास येते, हेचि मुख्य अर्थ - ज्यानी इष्टलिंग धारण केलेले नाही, जे कधीही शरण संगतीत राहत नाहीत वा येत नाहीत अशांच्या अंगी सद्गुणांचा अभाव असतो म्हणून त्यांची भेट होताच मला लज्जा वाटते. म्हणून मी त्यांचे मुखावलोकनही करीत नाही. मला त्यांचे बोलणे देखील मुळीच रूचत नाही. कारण हे कूडलसंगमदेवा! (परमेश्वरा) मला तू तेथे दिसत नाहीस. Translated by Rajendra Jirobe, Published by V B Patil, Hirabaug, Chembur, Mumbai, 1983 लिंगांगी नसलेल्यांना, शरणसंगी नसलेल्यांना पाहून मनास लाज वाटते. त्यांची वाणी मला आवडली नाही. कूडलसंगमदेव तेथे नाही म्हणून Translated by Shalini Sreeshaila Doddamani
ಶಬ್ದಾರ್ಥಗಳು ಸಂಗ = ; ಸಮನಿಸು = ;
ಕನ್ನಡ ವ್ಯಾಖ್ಯಾನ ಲಿಂಗಧಾರಿಗಳಾಗಿ ಶಿವಭಕ್ತರೆನಿಸಿದವರಿಗೆ ಶರಣಸಂಗವನ್ನು ಒಂದು ಅವಶ್ಯಕ ಆಚಾರವೆಂಬುದಾಗಿ ಬಸವಣ್ಣನವರು ಹೇಳಿರುವರು. ಆ ಭಕ್ತರಿಗೆ ಶಿವಧರ್ಮದ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ಕೊಟ್ಟು ಅವರನ್ನು ಧರ್ಮಕಾರ್ಯಗಳಲ್ಲಿ ಭಾಗಿಗಳನ್ನಾಗಿ ಮಾಡುತ್ತಿದ್ದವರು ಆ ಶರಣರೇ ಆಗಿದ್ದರು. ಹೀಗಿರುವಲ್ಲಿ ಲಿಂಗಧಾರಿಗಳಾಗದೆ ಮತ್ತು ಶರಣರ ಮೂಲಕ ಧರ್ಮವಿವರವನ್ನರಿಯದೆ ಭವದಲ್ಲಿ ಸಂಭ್ರಮಿಸುವವರ ವಾದ-ವಿವಾದ ಬಸವಣ್ಣನವರಿಗೆ ಸಮ್ಮತವಾಗುತ್ತಿರಲಿಲ್ಲವೆಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು