ಭಕ್ತನ ಮಾಹೇಶ್ವರಸ್ಥಲ - ಶರಣರ ಸಂಗ
ಶ್ರೀವಿಭೂತಿಯ ಹೂಸದವರ, ಶ್ರೀರುದ್ರಾಕ್ಷಿಯ ಧರಿಸದವರ,
ನಿತ್ಯ ಲಿಂಗಾರ್ಚನೆಯ ಮಾಡದವರ,
ಜಂಗಮವೇ ಲಿಂಗವೆಂದರಿಯದವರ,
ಸದ್ಭಕ್ತರ ಸಂಗದಲ್ಲಿರದವರ ಎನಗೊಮ್ಮೆ ತೋರದಿರು.
ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು!
Transliteration Śrīvibhūtiya hūsadavara, śrīrudrākṣiya dharisidavara,
nityaliṅgārcaneya māḍadavara,
jaṅgamavē liṅgavendariyadavara,
sadbhaktara saṅgadalliradavara enagom'me tōradiru.
Kūḍalasaṅgamadēvā, sēragoḍḍi bēḍuvenu!
Manuscript
English Translation 2 I spread my mantle hem,
O Kūḍala Saṅgama Lord,
And pray you never show to me
Such as
Do not apply the sacred ash,
Nor wear the holy beads,
Nor do their daily rites,
Not know that Jaṅgama
Himself is Liṅga, nor Live
In the society of the Śaraṇās.
Translated by: L M A Menezes, S M Angadi
Hindi Translation जो विभूति धारण नहीं करते,
रुद्राक्ष-धारण नहीं करते,
नित्य लिंगार्चन नहीं करते,
जंगम को ही लिंगदेव नहीं मानते,
सदभक्तों के संग नहीं रहते
उन्हें कभी मत दिखाओ कूडलसंगमदेव
अंचल पसार प्रार्थना करता हूँ ॥
Translated by: Banakara K Gowdappa
Telugu Translation శ్రీ విభూతి దాల్పనివారల
శ్రీ రుద్రాక్షల కట్టనివారల
నిత్య లింగార్చనము చేయనివారల
జంగమమే లింగమని తెలియనివారల
సద్భక్తుల సంగము లేనివారల
ఒకసారియూ నాకు చూపకయ్యా
సంగయ్యా సెర గొడ్డి వేడెద.
Translated by: Dr. Badala Ramaiah
Tamil Translation திருநீற்றைப் பூசாதவரை
உருத்திராக்கத்தை அணியாதவரை
நாள்தோறும் இலிங்கபூசை ஆற்றாதவரை
ஜங்கமமே இலிங்கமென்று அறியாதவரை
நல்ல பக்தர்களின் தொடர்பற்றவரை
காட்டாது இருப்பாய், கூடல சங்கம தேவனே
இறைஞ்சி வேண்டுகிறேன்.
Translated by: Smt. Kalyani Venkataraman, Chennai
Marathi Translation
भाळी श्रीविभूती, लिंगार्चनी दक्ष
अंगी ते रुद्राक्ष, लक्ष एक
इष्टलिंगी यास, मानी जंगमास
तयांचा सहवास, गोड मज
लिंग भस्महीन, नको त्यांचे मुख
भोगवादी देख, भवी सर्व
कूडलसंगमदेवा ! भाव भक्ति चिन्हे
पाजिताती पान्हे, अमृताचे
अर्थ - कपाळी विभूती भस्म, गळ्यात रुद्राक्ष, आणि लिंगार्चना हे त्रिविध जो करीत नसतो तसेच जंगममूर्तीना जो साक्षात लिंगदेव मानीत नसतो अशांची मला मुळीच गरज नाही. अशांचे तोंड माझ्या दृष्टीसही पडू देऊ नकोस देवा! एवढीच तुझ्या चरणी पदर पसरून मागणी करीत आहे. कारण असले भोगवादी भवी मोक्षाचे अधिकारी मुळीच नसतात.
Translated by Rajendra Jirobe, Published by V B Patil, Hirabaug, Chembur, Mumbai, 1983
श्रीविभूती धारण न करणारे,
श्रीरुद्राक्षी न धारण करणारे,
नित्यलिंगार्चना न करणारे,
जंगमाला लिंग न मानणारे,
सद्भक्तांच्यासंगात न राहणारे
अशांचे दर्शन एकदाही करु नको
कूडलसंगमदेवा पदर पसरुन मागतो.
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಜಂಗಮ = ; ಸಂಗ = ; ಹೂಸುದ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಬಸವಣ್ಣನವರು ಶಿವಭಕ್ತರ ಸಂಬಂಧವಾಗಿ ಕೆಲವು ವಿಧೇಯಕಗಳನ್ನು ಮಾಡುತ್ತಿರುವರು : 1. ವಿಭೂತಿಯನ್ನು ಧರಿಸಬೇಕು. 2. ರುದ್ರಾಕ್ಷಿಯನ್ನು ಧರಿಸಬೇಕು. 3. ನಿತ್ಯವೂ ಲಿಂಗಾರ್ಚನೆಯನ್ನು ಮಾಡಬೇಕು. 4. ಜಂಗಮವನ್ನು ಲಿಂಗಕ್ಕೆ ಸಮಾನವಾಗಿ ಕಾಣಬೇಕು. 5. ಸದ್ಭಕ್ತ(ಶರಣ)ರ ಸಹವಾಸದಲ್ಲಿರಬೇಕು-ಎಂದು. ಈ ಪಂಚಶೀಲವಿಲ್ಲದೆ ಶಿವಭಕ್ತರಾದೆವೆಂಬವರು ತಮ್ಮ ಕಣ್ಣಿಗೆ ಬೀಳದಿರಲಿ-ಎಂದರೆ-ಶಿವಭಕ್ತರೆಲ್ಲರೂ ಈ ಸದಾಚಾರಸಂಪನ್ನರಾಗಿರಲಿ ಎಂದು ಹಾರೈಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು