ಭಕ್ತನ ಮಾಹೇಶ್ವರಸ್ಥಲ - ಶರಣರು
ಕೂಪವರಿಗೆ ಹೇಳುವೆನು ಕುಳಸ್ಥಳಂಗಳೆಲ್ಲವನು;
ಕೂರದವರಿಗೆ ಹೇಳಿ ನಾನೇವೆನು ಶಿವನೆ?
ಕರಲ ಭೂಮಿಯಲ್ಲಿ ಕರೆಹ ವೃಷ್ಟಿಯ ತೆರನಂತೆ
ಅವರೆತ್ತ ಬಲ್ಲರು ಎನ್ನ ಸುಖ-ದುಃಖವ?
ಅಂಗತವಿಲ್ಲದ ಸಂಗವು ಅಳಲಿಲ್ಲದ ಹುಯ್ಯಲಂತೆ
ಇದು ಕಾರಣ, ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ ಬಾಯ್ದೆರೆಯನು.
Transliteration Kūpavarige hēḷuvenu kulasthaḷaṅgaḷellavanu;
kūradavarige hēḷi nānēnu śivane?
Karala bhūmiyalli kareha vr̥ṣṭiya teranante
avaretta ballaru enna sukha-duḥkhava?
Aṅgatavillada saṅgavu aḷalillada huyyalante
idu kāraṇa, kūḍalasaṅgamadēvā,
nim'ma śaraṇarigallade bāydereyenu.
Manuscript
English Translation 2 To such as love do I recount
My weal and woe:
But,God, why should I tell
To such as do not love ?
Like rainfall on a brackish soil,
How can they know my weal and woe ?
The kinship that's not soaked in us
Is like a painless wail !
Therefore, O KudalaSangama Lord,
Save for Thy Śaraṇaś, my lips are shut.
Translated by: L M A Menezes, S M Angadi
Hindi Translation प्रिय जनो को समस्त कुल-स्थलों का विवरण दूँगा
हे शिव, अप्रिय जनों से कहकर क्या करूँगा?
क्षार भूमि पर गिरी वृष्टि की भाँति
वे कैसे जानेंगे मेरे सुख-दुःख को?
स्नेह-हीन संग दुःखहीन विलाप की भाँति है।
अतः कूडलसंगमदेव तव शरणों के यहाँ छोड
अन्यत्र मुँह नहीं खोलूँगा ॥
Translated by: Banakara K Gowdappa
Telugu Translation ఐనవారికి చెప్పెద కులస్తంబులన్నియు
కానివారికి చెప్ప ఏమి ఫలమయ్యా శివా!
చవిటి భూముల బడు వానబోలె
వారెట్లు తెలియగలరు నా సుఖదుఃఖములు?
అంగములేని సంగము ఆర్తి లేని అరపువోలె
కూడల సంగమదేవా! నీ శరణులకు దప్ప
నోర్విప్పనయ్యా!
Translated by: Dr. Badala Ramaiah
Tamil Translation நயவோருக்கு மனிதன், தலம் குறித்துக் கூறுவேன்
நயவாதோருக்குக் கூறி என்ன ஆவேன் சிவனே?
வறண்ட நிலத்தில் பொழிந்த மழையனைய
அவர் என் இன்ப துன்பத்தை எங்ஙனமறிவர்?
பொருத்தமற்ற தொடர்பு, அழுகையற்ற விம்மலனையதாம்
எனவே கூடல சங்கமதேவனே, உம்
அடியார்க்கின்றி வாய் திறவேன் ஐயனே.
Translated by: Smt. Kalyani Venkataraman, Chennai
Marathi Translation
सांगू कुलस्थल, आस्थेवाईकाना
काय अनास्थाना, सांगूनिया
ओसाडी वर्षावे, वायाचि ते व्हावे
तैसिची जाणावे, वचन ते
तया काय माझे, कळे सुख दुःख
म्हणूनिया मुख, उघडिना
पोटी नसता दुःख, रडुनिया दावी
कैसि निपजावी, आर्द्रता ती
वांझेपरी जाणा, रडणे तयाचे
प्रेम तेथे कैचे, उपजेल ?
संगहिना पोटी, कैसा ईशभाव
अस्वाभाविकत्व, निश्चित ते
कूडलसंगमदेवा! तव शरणावीण
वाचा न शिणवीन, कदा काळी
अर्थ - आस्थेने ऐकणाऱ्याना पवित्र मूलस्थानांचे रहस्य उलगडून सांगेन. आस्थाच नाही अशाना कितीही सांगून काय उपयोग ? उलट दोघांचाही वेळ वाया घालविणे होय. जसे नापीक जमीनीत कितीही वर्षाव झाल्यास कसले पीक येईल? अथवा अंतरंगातच मुळी दुःख नाही अशांचे ते रडणे कसले? त्यात दिखाऊपणा असतो. ज्यांच्यात आस्था नाही त्यांचे ऐकणंही वरवरचे असते. म्हणून हे कूडलसंगमदेवा ! (परमेश्वरा) शिवशरणाव्यतिरिक्त मी माझे तोंड कुणापुढेही उघडणारे नाही. कारण एकमेव तेच मूलस्थानाचे रहस्य आस्थेने ऐकत असतात. आणि माझे सुख-दुःखही तेच समजू शकतात.
Translated by Rajendra Jirobe, Published by V B Patil, Hirabaug, Chembur, Mumbai, 1983
बरोबर बसणाऱ्यांना कुलस्थलाचे रहस्य सांगतो.
न बसणाऱ्यांना काय सांगू देवा?
मुरमाड भूमीवर पाऊस पडल्याप्रमाणे
ते मम सुख दुःख काय समजून घेणार?
समरसताहीन संग, दुःखाविना रडणे आहे.
म्हणून कूडलसंगमदेवा तुमच्या
शरणाविना कोणालाही मागत नाही.
Translated by Shalini Sreeshaila Doddamani
ಶಬ್ದಾರ್ಥಗಳು ಅಂಗತ = ಮೈಗೂಡಿದ ಅಳವಟ್ಟ; ಕರಲ = ; ಕುಳಸ್ಥಳ = ; ಕೂಪ = ; ವೃಷ್ಟಿ = ; ಸಂಗ = ; ಹುಯ್ಯಲು = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು-ತಮ್ಮ ಕಷ್ಟಸುಖಗಳೇನಿದ್ದರೂ ಅವನ್ನೆಲ್ಲ ತಮ್ಮನ್ನು ಪ್ರೀತಿಸುವ ಶರಣರಲ್ಲಿ ಮಾತ್ರ ಹೇಳಿಕೊಳ್ಳುವುದಾಗಿ ನಿರ್ಣಯಿಸುತ್ತಿರುವರು. ಬಸವಣ್ಣನವರ ಈ ನಿರ್ಣಯ ಸಾಧುವಾದುದೇ ಆಗಿದೆ. ಸಹಾನುಭೂತಿಯಿಲ್ಲದವರಲ್ಲಿ ನಮ್ಮ ತಾಪತ್ರಯಗಳನ್ನು ತೋಡಿಕೊಂಡರೆ-ಅದು ಕಲ್ಲುಭೂಮಿಯ ಮೇಲೆ ಸುರಿದ ಮಳೆಯಂತೆ-ಎಲ್ಲಾ ಜಾರಿಹೋಗುವುದೇ ಹೊರತು ಒಳಗಿಳಿಯುವುದಿಲ್ಲ. ನಮ್ಮ ಸುಖವನ್ನು ಹೇಳಿಕೊಂಡಾಗ ಅವರು ಸುಖಪಟ್ಟಂತೆ ನಟಿಸುವರು-ವಾಸ್ತವವಾಗಿ ನಮ್ಮ ದುಃಖ ಅವರಿಗೆ ಸುಖದಾಯಕವಾಗಿ ನಮ್ಮ ಸುಖ ಅವರಿಗೆ ದುಃಖದಾಯಕವೇ ಆಗಿರುವುದು.
ಇದಕ್ಕೆ ಕ್ರಮವಾಗಿ ಎರಡು ನಿದರ್ಶನಗಳನ್ನು ಈ ವಚನದಲ್ಲಿ ಕೊಡಲಾಗಿದೆ : ಅಂಗಾತ ಮಲಗದ ಹೆಣ್ಣಿನೊಡನೆ ಬಲಾತ್ಕಾರವಾಗಿ ಸಂಗಮಾಡಿದರೆ ಸುಖವಿಲ್ಲ-ಹಾಗೆಯೇ ತೆರೆದ ಮನಸ್ಸಿಂದ ಕೇಳದವರಿಗೆ ನಮ್ಮ ಸುಖವನ್ನು ಹೇಳಿಕೊಂಡರೆ ಅವರಿಗೆ ಸುಖವಾಗುವುದಿಲ್ಲ ಮತ್ತು ಕೇವಲ ಆಟಕ್ಕೆ ಅಳುವವರಲ್ಲಿ ನಮ್ಮ ದುಃಖವನ್ನು ಹೇಳಿಕೊಂಡರೆ ಅವರಿಗೆ ದುಃಖವಾಗುವುದಿಲ್ಲ. ಸ್ಪಂದನ-ಪ್ರತಿಸ್ಪಂದನ ಇಲ್ಲದೆಡೆ ಎಲ್ಲವೂ ವ್ಯರ್ಥವಾಗುವುದು.
ಆದ್ದರಿಂದ ತಮ್ಮನ್ನು ಪ್ರೀತಿಸದ ಸಂಪ್ರದಾಯಸ್ಥರೊಡನೆ ತಮ್ಮ ಜೀವನಾದರ್ಶಗಳನ್ನೂ, ಅವನ್ನು ನೆರವೇರಿಸುವಲ್ಲಿ ತಮಗಿರುವ ಅಡ್ಡಿ ಆತಂಕಗಳನ್ನು ಪ್ರಸ್ತಾಪಮಾಡುವುದಿಲ್ಲವೆನ್ನುತ್ತಿರುವರು ಬಸವಣ್ಣನವರು. ಅವರು ಇದೇ ಶಿವಧರ್ಮದ ಸಂಪ್ರದಾಯಸ್ಥರೊಡನೆ ಇಟ್ಟುಕೊಳ್ಳಬಯಸಿದ ಮಧುರ ಸಂಪರ್ಕವನ್ನು ಪಡೆಯಲಾರದೆ ಹತಾಶರಾಗಿ ಈ ವಚನವನ್ನು ಹಾಡಿರುವಂತಿದೆ.
ಕೂಪರು : ಪ್ರಿಯರು, ಕುಳಸ್ಥಳ : ಕುಲ ಮತ್ತು ಊರು, ಕೂರದವರು : ಪ್ರೀತಿಸದವರು, ಅಂಗತ : ಅಂಗಾತ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು