•  
  •  
  •  
  •  
Index   ವಚನ - 457    Search  
 
ಭಕ್ತನ ಮಾಹೇಶ್ವರಸ್ಥಲ - ಲಿಂಗನಿಷ್ಠೆ
ಒಡೆದೋಡು ಎನ್ನ ಮನೆಯಲಿಲ್ಲದಂತೆ ಮಾಡಯ್ಯಾ, ಕೊಡು ದೇವ, ಎನ್ನ ಕೈಯಲ್ಲೊಂದು ಕರಿಕೆಯ; `ಮೃಡದೇವಾ ಶರಣೆಂ'ದು ಭಿಕ್ಷಕ್ಕೆ ಹೋದರೆ ಅಲ್ಲಿ, `ನಡೆ ದೇವಾ' ಎಂದೆನಿಸು, ಕೂಡಲಸಂಗಮದೇವಾ!
Transliteration Oḍedoḍu enna maneyilladante māḍayya, koḍu dēva, enna kaiyallondu karikeya; `mr̥ḍadēva śaraṇeṁ'du bhikṣakke hōdare alli, `naḍe dēvā' endenisu, kūḍalasaṅgamadēvā!
Manuscript
English Translation 2 Make that not even a broken pot Be in my house; Place in my hands, O God One blade of grass. Should I go out and beg 'For God's sake!', there Make them to say, 'For God's sake!', go !', O Kūḍala Saṅgama Lord! Translated by: L M A Menezes, S M Angadi
Hindi Translation मेरे घर में फूटा ठीकरा भी न रहने दो; देव; मेरे हाथ में एक तृण दो ‘मृडदेव शरणु’ कह तो भिक्षार्थ जाऊँ तो ‘चले जाओ देव’ कहलाओ कूडलसंगमदेव ! Translated by: Banakara K Gowdappa
Telugu Translation ఓటిమూకుడు లేనట్లు నా యిల్లు సేయువయ్యా, నిల్పుమో ప్రభూ నా చేతి కొకగడ్డి పోచ భిక్షకుపోయి శివా! మహాదేవ! శరణన నడునడుమని కసరింపుమో సంగమదేవా! Translated by: Dr. Badala Ramaiah
Tamil Translation உடைந்த ஓடு என் இல்லத்தில் இல்லாதவாறு செய் ஐயனே இறைவனே, என் கையில் ஒரு கரும் கலத்தை அளிப்பாய் ஐயனே “சிவனே தஞ்சம்“ என வேண்டச் சென்றால் “அகல்வாய்” எனக் கூறச் செய்வாய் கூடல சங்கம தேவனே. Translated by: Smt. Kalyani Venkataraman, Chennai
Marathi Translation नसो घरी कवडी दमडी तसाचि मी बरवा मज तुझा मात्र दास सहज आवडता असावा नरोटी दे माझ्या हाती फिरवी शरण हा भिक्षार्थी जिथे जावो तिथे ध्वनी तो पुढे चालता हो दारोदाराची ती झिडकी तीच दर्शनाची खिडकी माझा भाव दमडी दिडकी कूडलसंगमदेवा ! अर्थ - माझ्या घरी एक फुटकी कवडी देखील राहू देऊ नकोस. आणि काहीच शिल्लक उरले नाही म्हणून भीक मागण्यासाठी आणि ते ही शरण म्हणून हाती नरोटी धरून दारोदारी निघाल्यास प्रत्येकानी मला पुढे चालता हो! येथे काही नाही ! असे म्हणून प्रत्येकानी आपल्या दारापुढून हाकलून द्यावे. असाच कठोर शब्द माझ्या कानी पडावा Translated by Rajendra Jirobe, Published by V B Patil, Hirabaug, Chembur, Mumbai, 1983 फुटकी कवडीही माझ्या घरात राहू नये असे कर देवा. द्यावे देवा, माझ्या हातात एक गवताची काडी. `मृडदेवा शरण मी आलो.` म्हणून भिक्षा मागितली तर `पुढे जा.` असे ऐकण्यासारखे करावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಒಡೆ = ; ಮೃಡ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತೀವ್ರ ವೈರಾಗ್ಯಗತಿಯನ್ನು ಬಯಸುತ್ತಿರುವರು : ಮನೆಯಲ್ಲಿ ಒಡೆದ ಮಡಕೆಯ ಒಂದು ಚೂರೂ ಇಲ್ಲದ ಕಡುಬಡತನ ಬರಲಿ, ಕೈಯಲ್ಲೊಂದು ಭಿಕ್ಷಾಪಾತ್ರೆಯಿರಲಿ, ಮೃಡದೇವಾ ಶರಣೆಂದು ಶಿವನ ಹೆಸರೆತ್ತಿ ಬೇಡಿದರೆ-ಎಲ್ಲರೂ ಅಪಹಾಸ್ಯ ಮಾಡಿ ಮುಂದೆ ನಡೆದೇವಾ ಎನ್ನಲಿ-ಆದರೂ ತಾವು ಶಿವನೆಡೆಗೆ ಮುಂದೆ ಮುಂದೆ ನಡೆಯುವ ಆಧ್ಯಾತ್ಮಿಕ ಧೃತಿ ತಮಗಾಗಲಿ ಎಂದು ಆ ಶಿವನಿಗೆ ನಿವೇದನೆ ಮಾಡಿಕೊಳ್ಳುತ್ತಿರುವರು. ಬಸವಣ್ಣನವರು ಯಾವಾಗ ಹೀಗೆ ಪರಿವ್ರಾಜಕರಾಗಿ ಮನೆ ಬಿಟ್ಟು ಹೋಗಬೇಕೆಂದು ಹಲುಬಿದರೋ ತಿಳಿಯದು. ಬಹುಶಃ ಅವರು ಗೃಹಸ್ಥರಾಗಿ ಕಲ್ಯಾಣದಲ್ಲಿದ್ದಾಗ-ಇದ್ದ ಒಬ್ಬ ಮಗನೂ ಸತ್ತಾಗ ಈ ರೀತಿ ಪರಿತಪಿಸಿರಬಹದು-ಅಥವಾ ಅವರು ಸ್ವಭಾವದಿಂದಲೇ ವಿರಾಗಶೀಲರೆನ್ನಲೂಬಹುದು. ಕರಕ : ಕಮಂಡಲು. ಈ ಪಾಠ ಕರಿಕೆಯೆನ್ನುವುದಾದರೆ-ಹುಯ್ಯಲಿಡುವವರು ಕೈಯಲ್ಲಿ ಹುಲ್ಲನ್ನು ಹಿಡಿಯುತ್ತಿದ್ದ ಒಂದು ಪ್ರಾಚೀನ ಪದ್ಧತಿಯನ್ನು ನೆನೆಯಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು