•  
  •  
  •  
  •  
Index   ವಚನ - 459    Search  
 
ಭಕ್ತನ ಪ್ರಸಾದಿಸ್ಥಲ - ತ್ರಿವಿಧ ದಾಸೋಹ
ಅಯ್ಯಾ, ನಿಮ್ಮ ಶರಣರ ದಾಸೋಹಕ್ಕೆ ಎನ್ನ ತನುಮನಧನವಲಸದಂತೆ ಮಾಡಯ್ಯಾ, ತನು ದಾಸೋಹಕ್ಕುಬ್ಬುವಂತೆ ಮಾಡು, ಮನ ದಾಸೋಹಕ್ಕೆ ಲೀಯವಹಂತೆ ಮಾಡು, ಧನ ದಾಸೋಹಕ್ಕೆ ಸವೆದು ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ ಆಡಿ, ಹಾಡಿ, ನೋಡಿ, ಕೂಡಿ, ಭಾವಿಸಿ, ಸುಖಿಸಿ, ಪರಿಣಾಮಿಸುವಂತೆ ಮಾಡು, ಕೂಡಲಸಂಗಮದೇವಾ.
Transliteration Ayyā, nim'ma śaraṇara dāsōhakke enna tanumanadhanavalasadante māḍayya, tanu dāsōhakkubbuvante māḍu, mana dāsōhakke līyavahante māḍu, dhana dāsōhakke savedu nim'ma śaraṇara prasādadalli nirantara āḍi, hāḍi, nōḍi, kūḍi, bhāvisi, sukhisi, pariṇāmisuvante māḍu, kūḍalasaṅgamadēvā.
Manuscript
English Translation 2 Let not, O Lord, my body, mind and wealth Slacken in service of Thy Śaraṇās ! Make Thou my body thrill To service; make my mind Be charmed by it; And,for it,make my wealth to waste. Make me to sing and dance,to gaze and love, Yearn and rejoice,and be at peace Within Thy Śaraṇās' grace, O Kūḍala Saṅgama Lord! Translated by: L M A Menezes, S M Angadi
Hindi Translation स्वामी, तव शरणों के ‘दासोह’ में मेरा तन, मन, धन घटने न दो दासोह से तन को पुलकित होने दो; दासोह में मन लीन होने दो; दासोहार्थ धन का व्यय होने दो; कूडलसंगमदेव तव शरणों के प्रसाद में मुझे निरंतर खेलते, नाचते, गाते, देखते, मिलते, आनंद उठाते तृप्त रहने दो ॥ Translated by: Banakara K Gowdappa
Telugu Translation అయ్యా నీవారి దాసోహమునకు వలసినట్లు నా తనుమన ధనములు సేయుమయ్యా తనువు దాసోహమునకు పొంగునట్లు సేయుమయ్యా మనసు దాసోహమునకు లొంగునట్లు సేయుమయ్యా ధనము దాసోహమునకు తరుగునట్లు సేయుమయ్యా సదా నీ శరణుల ప్రసాదమున ఆడి, పాడి, కూడి అనుభవించి సుఖించి పక్వమగునట్లు సేయుమయ్యా సంగమదేవా! Translated by: Dr. Badala Ramaiah
Tamil Translation ஐயனே உம் அடியாரின் திருவமுதிற்கு உடல், மனம், செல்வத்தில் சோர்வுறாது இருக்கச் செய்வாய் ஐயனே உடல், திருவமுதிற்குப் பூரிக்குமாறு செய்வாய் மனம், திருவமுதில் ஒன்றுமாறு செய்வாய் செல்வம், திருவமுதிற்குக் கரைந்து, உம்அடியாரின் திருவமுதில் எப்பொழுதும் ஆடிப்பாடி, நோக்கி கூடி உணர்ந்து இன்புற்று நன்மை ஆகுமாறு செய்வாய் கூடல சங்கமதேவனே. Translated by: Smt. Kalyani Venkataraman, Chennai
Marathi Translation शिवशरण दासोहात तन मन धन लावावे आळसी न तेथे व्हावे कवणे काळी तन फुलूनिया जावे मन तल्लीन ते व्हावे धन दासोही वेचावे हेचि अनमोल शरण शेष प्रसादार्थ शरण चरण धरी नित्य समाधान हसता गाता स्थिरविते सत्य शूद्र वैभवे भोगिता सदा राहो संग स्वहिता सेवि शेष प्रसादा त्या कुडलसंगमदेव अर्थ - शिवशरणांच्या दासोहासाठी माझे तन, मन व धन अर्पणात आळशीपणा येऊ देवू नको. दासोह करताना तन माझे फुलून हर्षित व्हावे. मन त्यात तल्लीन व्हावे. संपूर्ण धन खर्ची पडावे आणि शिवशरणांचा शेष प्रसाद मिळविण्यासाठी मी सदैव गात, हसत, खेळत असावे. त्यातच सुखी समाधानी व्हावे असाच अनुग्रह कर देवा! Translated by Rajendra Jirobe, Published by V B Patil, Hirabaug, Chembur, Mumbai, 1983 देवा, तुमच्या शरणाच्या दासोहात तन-मन-धनाला आळशी होऊ देवू नये देवा. तनू दासोहात उत्साही करावे देवा. मन दासोहात तल्लीन करावे देवा. धन दासोहात समर्पित करावे देवा. तुमच्या शरणांच्या प्रसादामध्ये निरंतर बोलत, गात, पहात, मिळून, मिसळून, भोगत, आनंदी करावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಸದ = ; ತನು = ; ದಾಸೋಹ = ; ಪರಿಣಾಯಿಸು = ; ಪ್ರಸಾದ = ; ಲೀಯವ = ;
ಕನ್ನಡ ವ್ಯಾಖ್ಯಾನ ತನು-ಮನ-ಧನವನ್ನು ಕ್ರಮವಾಗಿ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕೆಂಬ ಒಂದು ದಾಸೋಹಾಚರಣೆ ಪ್ರಸಿದ್ಧವಾಗಿದೆ. ಅದರ ಪ್ರಕಾರ ತನು ಗುರುವಿಗೇ ಮೀಸಲು. ಮನ ಲಿಂಗಕ್ಕೇ ಮೀಸಲು, ಧನ ಜಂಗಮಕ್ಕೇ ಮೀಸಲು (ಇನ್ನಾರಿಗೂ ಅಲ್ಲ) ಎಂಬ ಒಂದು ತಪ್ಪು ಕಲ್ಪನೆಯೂ ಪ್ರಚಾರದಲ್ಲಿದೆ, ಅದನ್ನು ತಿದ್ದುವ ಒಂದು ಮಹತ್ತರವಾದ ವಚನವಿದು. ಭಕ್ತ-ಶರಣ-ಜಂಗಮವೆಂಬ ಧಾರ್ಮಿಕ ಸಾಮಾಜಿಕ ಶ್ರೇಣಿಯಲ್ಲಿ-ಶರಣಸಂಬಂಧವಾಗಿಯೂ ಭಕ್ತನು ಮಾಡಬೇಕಾದ ಒಂದು ದಾಸೋಹವಿಧಿ ಈ ವಚನದಲ್ಲಿ ಅಡಕವಾಗಿದೆ. ಭಕ್ತನು ಆ ಶರಣರಿಗೂ ತನ್ನ ತನು ಮನ ಧನ ಮೂರನ್ನು ಕೊಟ್ಟು ಅವರನ್ನು ಉಪಚರಿಸಬೇಕೆಂಬುದು ಈ ವಚನದ ಪರಮಾರ್ಥ. ಮತ್ತು ಆ ಶರಣದಾಸೋಹದಲ್ಲಿ ಭಕ್ತನು ಉತ್ಸಾಹಿಸಬೇಕು. ಮನಮಗ್ನನಾಗಬೇಕು, ಆ ಶರಣರ ಪ್ರಸಾದವನ್ನು ಪಡೆದು ನಿತ್ಯಸುಖಿಯಾಗಿರಬೇಕೆಂದೂ ಒಂದು ಹೆಚ್ಚಿನ ಎಚ್ಚರಿಕೆಯನ್ನೂ ಈ ವಚನದ ಮೂಲಕ ತಿಳಿಸಲಾಗಿದೆ. ಭಕ್ತನು ತನ್ನ ಮನೆಗೆ ಬಂದ ಒಬ್ಬ ಸಹಭಕ್ತನಿಗೂ ಭೃತ್ಯಾಚಾರ ಮಾಡಬೇಕೆಂದು 247ನೇ ವಚನದಲ್ಲಿ ಹೇಳಿರುವುದನ್ನು ಗಮನಿಸಿದರೆ-ಭಕ್ತನು ಶರಣನಿಗೆ ಮಾಡುವ ಈ ಕೈಂಕರ್ಯ ಅತಿಶಯವಾದುದೇನೂ ಅಲ್ಲ. ವಿ : ಗುರುದಾಸೋಹ ಲಿಂಗದಾಸೋಹ ಜಂಗಮದಾಸೋಹವೆಂದು ಇರುವುದು-ಮೂರು ವಿಧ(ದಾಸೋಹ)ವೇ ಅಲ್ಲ-ಶರಣದಾಸೋಹವೆಂಬುದೂ ಒಂದಿದೆಯೆಂದೂ, ಈ ಯಾವ ದಾಸೋಹವನ್ನೇ ಆಗಲಿ ತನು-ಮನ-ಧನಪೂರ್ವಕವಾಗಿ ಮಾಡಬೇಕೆಂದೂ ಈ ವಚನಸಂದರ್ಭದಲ್ಲೇ ತಿಳಿಯಬರುವುದು ಕೂಡ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು