•  
  •  
  •  
  •  
Index   ವಚನ - 460    Search  
 
ಭಕ್ತನ ಪ್ರಸಾದಿಸ್ಥಲ - ನಂಬಿಕೆ
ಹಾರುವ ಹಾರುವನಪ್ಪೆ, ಸದ್ಭಕ್ತರೆನ್ನುವರೆಂದು; ಹಾರುವ ಹಾರುವನಪ್ಪೆ, ಶರಣರು ಎನ್ನುವರೆನ್ನುವರೆಂದು, ಕೂಡಲಸಂಗನ ಶರಣರು ತಮ್ಮೊಕ್ಕುದನಿಕ್ಕಿ ಸಲಹುವರಾಗಿ.
Transliteration Hāruva hāruvanappe, sadbhaktarennavarennavarendu; hāruva hāruvanappe, śaraṇaru ennuvarennuvarendu, kūḍalasaṅgana śaraṇaru tam'mokkudanikki salahuvarāgi.
Manuscript
English Translation 2 Beacause the real devotees are mine, Are mine, I long and long for them; Because the Śaraṇās are mine, Are mine, I long and long for them. For Kūḍala Saṅga 's Śaraṇās Saved me,by offering Out of their offerings. Translated by: L M A Menezes, S M Angadi
Hindi Translation सद्भक्त मेरे हैं समझ मैं उनकी प्रतीक्षा करता हूँ; शरण मेरे हैं, मेरे ही हैं समझ मैं उनकी प्रतीक्षा करता हूँ; क्योंकि कूडलसंगमेश के शरण निज शेष प्रसाद देकर पालते हैं ॥ Translated by: Banakara K Gowdappa
Telugu Translation ఎగయు పాఱుడ నగుదు సద్భక్తులు నా వాడు నా వాడన ఎగిరెగిరి పడుచుందు శరణులు నన్ను నా వాడు నా వాడన కూడల సంగని శరణులు తమ ప్రసాదమిచ్చి బ్రతికింతురని యుందు Translated by: Dr. Badala Ramaiah
Tamil Translation மகிழ்ந்தாடுவேன், நான் மகிழ்ந்தாடுவேன் மேலான பக்தர்கள் என்னவ, ரென்னவர் என்று மகிழ்ந்தாடுவேன், நான் மகிழ்ந்தாடுவேன் அடியார் என்னவ, ரென்னவர் என்று கூடல சங்கனின் அடியார் பிரசாதமீந்து அருள்வர் ஐயனே. Translated by: Smt. Kalyani Venkataraman, Chennai
Marathi Translation मी इच्छा करतो सद्भक्त आमचे आहेत म्हणून मी इच्छा करतो शरण आमचे आहेत, आमचे आहेत म्हणून कूडलसंगाचे शरण शेषप्रसाद देवून पालन करतात. Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಸಲಹು = ;
ಕನ್ನಡ ವ್ಯಾಖ್ಯಾನ “ಹಾರುವನಪ್ಪೆ ನಾನು” ಎಂದರೆ-ನಾನು ಬ್ರಾಹ್ಮಣ ನಿಜವೆಂದರ್ಥ. ಪಾರ್ ಅಥವಾ ಹಾರು ಎಂಬ ಧಾತುರೂಪವನ್ನು ಹಿಡಿದು ಹೇಳುವುದಾದರೆ-(ಶರಣರನ್ನು ನನ್ನವರೆಂದು) ಹಾರೈಸುವವನು ನಾನು ಎಂದು ಇನ್ನೊಂದರ್ಥ. ಹುಟ್ಟಿನಿಂದ ಬ್ರಾಹ್ಮಣರೇ ಆದ ಬಸವಣ್ಣನವರು ಶರಣರನ್ನು ತನ್ನವರೆಂದೇ ನೋಡುವೆನೆಂದೂ, ಅದಕ್ಕೆ ಕಾರಣ-ಅವರು ತಮಗೆ ಪ್ರಸಾದವಿಕ್ಕಿ ಕಾಲದಿಂದ ಸಲಹಿದವರು ಅವರೇ ಆಗಿರುವರೆಂದೂ ಬಿನ್ನೈಸಿಕೊಳ್ಳುತ್ತಿರುವರು. ಬಸವಣ್ಣನವರು ತಮ್ಮ ಬ್ರಾಹ್ಮಣ್ಯವನ್ನು-ಲಿಂಗಧಾರಣೆ ಮಾಡಿಕೊಂಡು-ನಿರಾಕರಿಸಿಕೊಂಡರು. ಆದರೂ ತಮ್ಮನ್ನು ಮರಳಿ ಬ್ರಾಹ್ಮಣರೆಂದೇ ಹೆಸರಿಸುತ್ತಿದ್ದ ಸಂಪ್ರದಾಯಸ್ಥರನ್ನು ಕುರಿತು ಛೇಡಿಸಿ ಹೇಳುತ್ತಿರುವ ಮಾತಿದು. ಪರಬ್ರಹ್ಮಸ್ವರೂಪಿಗಳಾದ ಶರಣರನ್ನು ಬಸವಣ್ಣನವರು ಸದಾಕಾಲ ನಿರೀಕ್ಷಿಸುತ್ತಿರುವುದರಿಂದ ತಾವೀಗ ನಿಜವಾಗಿಯೂ ಬ್ರಾಹ್ಮಣ ಪದಕ್ಕೆ ಅರ್ಹರಾಗಿರುವುದಾಗಿ ಸರಸವಾಡುತ್ತಲೂ ಇರುವರೆನಿಸುವುದು. (ಬ್ರಾಹ್ಮಣನೆಂದರೆ ಬ್ರಹ್ಮವನ್ನು ತಿಳಿದವನೆಂದರ್ಥ) ಮತ್ತು ಯಾವನಾಗಲಿ ಬ್ರಾಹ್ಮಣನಾದವನು ಆ ಬ್ರಾಹ್ಮಣ ಶಬ್ದಕ್ಕೆ ಅರ್ಹನಾಗಬೇಕಾದರೆ-ಶರಣರನ್ನೂ ತಿಳಿದವನಾಗಿರಬೇಕು ಎಂಬುದು ಬಸವಣ್ಣನವರ ಆ ತಮ್ಮ ಸರಸದ ವ್ಯಂಗಾರ್ಥವಿದ್ದಿರಲೂಬಹುದು. ಬಸವಣ್ಣನವರು ಬ್ರಾಹ್ಮಣ ಮತ್ತು ಬ್ರಾಹ್ಮಣ್ಯವನ್ನು ಕುರಿತಂತೆ ಅತ್ಯಂತ ಆಧುನಿಕ ವಿಮರ್ಶಕರೇ ಹೊರತು-ತಿಳಿಗೇಡಿ ದೂಷಕರಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು