•  
  •  
  •  
  •  
Index   ವಚನ - 461    Search  
 
ಭಕ್ತನ ಪ್ರಸಾದಿಸ್ಥಲ - ಶರಣಾಗತಿ
ಒಕ್ಕುದ ಮಿಕ್ಕುದನುಂಡು ಕಿವಿಕಿವಿದಾಡುವೆ: ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು, ಕೂಡಲಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು.
Transliteration Okkuda mikkudanuṇḍu kivikividāḍuve: Śaraṇara maneya leṅgiya ḍiṅgariga nānu, kūḍalasaṅgana śaraṇara maneya bhaktiya maruḷa nānu.
Manuscript
Music Courtesy:
English Translation 2 I eat what is left of their offerings; I hold my ears and squat; I wear their cast-off rags; In the Śaraṇā's house I am A servant's servant-man; In the house of the Śaraṇās Of Kūḍala Saṅga I am A fool of piety! Translated by: L M A Menezes, S M Angadi
Hindi Translation भक्त-शेष सेवन कर कान पकड नाचता हूँ शरणों के घर के दास का दास हूँ कूडलसंग के शरणों के घर का भक्ति का बावला हूँ ॥ Translated by: Banakara K Gowdappa
Telugu Translation వారు తిని మిగిలినది నే తినుచు కంచడం చెవులప్పగించిఆడెద; శరణులయింటి దాసి దాసుడ నేను: మా శరణుల యింట వెఱ్ఱి భక్తుడ నేను, Translated by: Dr. Badala Ramaiah
Tamil Translation பிரசாதத்தை உண்டு, காதைப் பொத்தி ஆடுவேன், அடியார்தம் இல்லப்பணிமகளின் பணிமகன் நான், கூடல சங்கனின் அடியார் தம் இல்லத்தின் பக்தியில் மருளன் நான் ஐயனே. Translated by: Smt. Kalyani Venkataraman, Chennai
Marathi Translation शेषप्रसाद सेवन करुन कान धरुन राहतो. शरणांच्या घरातील दासीचा सेवक मी आहे. कूडलसंगाच्या शरणा घरच्या भक्तीसाठी वेडा मी झालो. Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಕಿವಿಕಿವಿದು = ; ಡಿಂಗರಿ = ; ಮರುಳ = ; ಲೆಂಗಿ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಬಿಜ್ಜಳನ ಚಕ್ರಾಧಿಪತ್ಯದಲ್ಲಿ ಭಂಡಾರಿಯಂಥ ಉನ್ನತ ಸ್ಥಾನದಲ್ಲಿದ್ದೂ ಶರಣರ ಮುಂದೆ ಕೈಕಟ್ಟಿ ಕುಗ್ಗಿ ನಿಲ್ಲುವುದನ್ನು ಸಂಪ್ರದಾಯಸ್ಥರು ಕೆಲವರು ಆಕ್ಷೇಪಿಸಿರಬೇಕು. ಅದಕ್ಕೆ ಉತ್ತರವಾಗಿ ಈ ವಚನವಿರುವಂತಿದೆ. ಶರಣರು ಉಂಡು ಮಿಕ್ಕುದನ್ನು ಉಣ್ಣುತ್ತೇನೆ. ಅವರ ಮುಂದೆ ಎಡಗೈಯಿಂದ ಬಲಗಿವಿಯನ್ನೂ, ಬಲಗೈಯಿಂದ ಎಡಗಿವಿಯನ್ನೂ ಹಿಡಿದು ಕೋಡಂಗಿಯಂತೆ ಕುಣಿದಾಡುತ್ತೇನೆ-ನಾನವರ ಮನೆಯ ಆಳಿನ ಕೀಳಾಳು ಮತ್ತು ಭಕ್ತಿ ತಲೆಗೇರಿದ ಹುಚ್ಚ ನಾನು-ಎನ್ನುತ್ತ ತಮ್ಮ ವಿನಯವ್ರತವನ್ನು ಸಮರ್ಥಿಸಿಕೊಳ್ಳುತ್ತಿರುವರು. ಶರಣರಿಗೆ ವಿನಯ ತೋರಿಸುವ ಭಕ್ತರನ್ನು ಕಂಡು ಲಘುವಾಗಿ ನಡೆದುಕೊಳ್ಳುವ ಜನ-ಸಿರಿವಂತರ ಸಾಮಂತರ ಕಾಲುನೆಕ್ಕುವುದೊಂದು ಗೌರವವೆಂದು ಭಾವಿಸಿರುವುದು ಹೇಯಕ್ಕೂ ಹೇಯವಾದ ವಿಷಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು