•  
  •  
  •  
  •  
Index   ವಚನ - 462    Search  
 
ಭಕ್ತನ ಪ್ರಸಾದಿಸ್ಥಲ - ಅನುಗ್ರಹ
ಗುರು ಲಿಂಗ ಜಂಗಮದಿಂದೆ ಪಾದೋದಕ ಪ್ರಸಾದವಾಯಿತ್ತು. ಆ ಭಾವನೆ ಮಹಾಪ್ರಸಾದವಾಗಿ- ಎನಗೆ ಬೇರೆ ಪ್ರಸಾದವೆಂಬುದಿಲ್ಲಾ, ಕೂಡಲಸಂಗಮದೇವಾ.
Transliteration Guru liṅga jaṅgamadinda pādōdaka prasādavāyittu. Ā bhāvane mahāprasādavāgi- enage bēre prasādavembudilla, kūḍalasaṅgamadēvā.
Manuscript
English Translation 2 From Guru, Liṅga and Jaṅgama , Pādōdaka and Prasāda have emerged; And since that Spirit that has made itself The Great Prasāda, I have no other Grace, O Kūḍala Saṅgama Lord! Translated by: L M A Menezes, S M Angadi
Hindi Translation गुरु लिंग जंगम से पादोदक प्रसाद बना; वही भाव महाप्रसाद बना मेरे लिए अन्य प्रसाद नहीं है कूडलसंगमदेव ॥ Translated by: Banakara K Gowdappa
Telugu Translation గురులింగ జంగమముచే పాదోదక ప్రసాదమయ్యె ఆ భావమే మహాప్రసాదమిక నాకు వేఱె ప్రసాదము లేదు కూడల సంగమదేవా! Translated by: Dr. Badala Ramaiah
Tamil Translation குரு லிங்க ஜங்கமத்தால் திருவடித் திருநீர் பிரசாதம் கிடைத்தது. அவ்வுணர்வே பெரும் பிரசாதமாகி எனக்கு வேறு பிரசாதம் என்பதில்லை கூடல சங்கமதேவனே. Translated by: Smt. Kalyani Venkataraman, Chennai
Marathi Translation गुरु लिंग जंगम संगा पादोदक प्रसाद भावचि हा झाला मज तो महाप्रसाद मजसाठी अन्य काही प्रासादक नाही कूडलसंगमदेव तुज देव असे ग्वाही अर्थ - श्रीगुरु लिंग जंगम इत्यादींच्या संगतीत मला पादोदक प्रसाद ठरले, कारण मी यासर्वात तुलाच पाहिले आहे. वरील माझा भाव मला महाप्रसाद ठरला. म्हणून हे कूडलसंगमदेवा! (परशिवलिंग) मला अन्य देवी-देवताची अथवा कसल्याही अन्य प्रसादाची आता मुळीच गरज उरली नाही. Translated by Rajendra Jirobe, Published by V B Patil, Hirabaug, Chembur, Mumbai, 1983 गुरु लिंग जंगमामुळे पादोदक प्रसाद झाला. तो अनुभावच महाप्रसाद झाल्यामुळे मला दुसरा प्रसाद नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ಪಾದೋದಕ = ; ಪ್ರಸಾದ = ;
ಕನ್ನಡ ವ್ಯಾಖ್ಯಾನ ಗುರುಲಿಂಗಜಂಗಮದ ಪಾದೋದಕಪ್ರಸಾದ ಮಾನ್ಯವೆಂಬ ಮಾತಿನಲ್ಲಿ ತಪ್ಪೇನೂ ಇಲ್ಲ. ಆದರೆ- “ಎನಗೆ ಬೇರೆ ಪ್ರಸಾದವೆಂಬುದಿಲ್ಲ”ವೆಂದಿರುವಲ್ಲಿ ಪ್ರಕ್ಷೇಪದ ಕುತಂತ್ರವಿರುವಂತಿದೆ. “ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ ಆಡಿ ಹಾಡಿ ನೋಡಿ ಕೂಡಿ ಭಾವಿಸಿ ಸುಖಿಸಿ ಪರಿಣಾಮಿಸುವಂತೆ ಮಾಡು” ಎಂದು 460ನೇ ವಚನದಲ್ಲಿ ಬಸವಣ್ಣನವರು ವ್ಯಕ್ತಪಡಿಸಿರುವ “ಶರಣ”ರ ಬಗೆಗಿನ ನಿರ್ವಿಶೇಷಮಾನ್ಯತೆಯನ್ನು ಪ್ರತಿಭಟಿಸಲೋಸುಗ ಈ ವಚನ ಪ್ರಕ್ಷಿಪ್ತವಾದಂತಿದೆ. ಶರಣರನ್ನು ಜಂಗಮರಿಗೆ (ಕಿಂಚಿದೂನ) ಸರಿಸಮಾನವಾಗಿ ಬಸವಣ್ಣನವರು ಕಂಡಿದ್ದು ಸಂಪ್ರದಾಯಸ್ಥರಿಗೆ ಹಿಡಿಸಲಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು