ಭಕ್ತನ ಪ್ರಸಾದಿಸ್ಥಲ - ಅಸಹಾಯಕತೆ
ಅಹುದೆಂದರಿಯೆ, ಆಗದೆಂದರಿಯೆ,
ಆದಿಯ ಪಥವ ತೋರಲರಿಯೆ,
ಸತ್ಯವನರಿಯೆ, ಸಹಜವನರಿಯೆ,
ಸಜ್ಜನ ಶುದ್ಧವ ಮುನ್ನವೇ ಅರಿಯೆ!
ನಿಮ್ಮ ಶರಣರ ಒಕ್ಕುದನುಂಡಿಪ್ಪೆ,
ಕೂಡಲಸಂಗಮದೇವಾ.
Transliteration Ahudendariye, āgadendariye,
ādiyapathava tōralariye,
satyavanariye, sahajavanariye,
sajjana śud'dhava munnavē ariye!
Nim'ma śaraṇara okkudanuṇḍippe,
kūḍalasaṅgamadēvā.
Manuscript
English Translation 2 I do not know
Whether I should say Yes or No;
Nor have the wisdom to point out
The primal path.
I do not know the Truth, nor know
What,in Itself, is just Itself;
Nor any more what good is and what pure!
I but subsist
On what Thy Śaraṇās spare for me,
O Kūḍala Saṅgama Lord!
Translated by: L M A Menezes, S M Angadi
Hindi Translation नहीं जानता, होगा कि नहीं;
आदि-पथ दिखाना नहीं जानता;
न सत्य जानता हूँ, न स्वाभाविकता;
सज्जन-शुद्धि पहले ही नहीं जानता
तव शरणों का शेष प्रसाद खाकर रहता हूँ
कूडलसंगमदेव ॥
Translated by: Banakara K Gowdappa
Telugu Translation ఔనో, కాదో తెలియ! ఆదిపథమేదో చూప దెలియ;
సత్యమేమో సహజమేమో తెలియ
సజనుల శుచి ముందే తెలియ
నీ శరణులు తిని మిగిలినదానితో
బ్రతికెదనయ్యాజి
Translated by: Dr. Badala Ramaiah
Tamil Translation ஆகும் என அறியேன், ஆகாது என அறியேன்
ஆதி வழியைக் காட்டலறியேன்
உண்மையை அறியேன், இயல்பை அறியேன்
நன்னெறி, தூய்மையை அறியேன்
உம் அடியாரின் திருவமுதை உண்டு
வாழ்வேன் கூடல சங்கமதேவனே.
Translated by: Smt. Kalyani Venkataraman, Chennai
Marathi Translation
होईल हे जाणत नाही, होणार नाही हे जाणत नाही.
आदिपथ दाखविणे जाणत नाही.
सत्य जाणत नाही, सहज जाणत नाही.
सज्जन शुध्द आधीच जाणत नाही.
तुमच्या शरणांचा शेषप्रसाद खात राहतो कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಪಥ = ; ಹೊಕ್ಕುದ = ;
ಕನ್ನಡ ವ್ಯಾಖ್ಯಾನ ವಿಧಿನಿಷೇಧಗಳನ್ನಾಗಲಿ, ಅನಾದಿಕಾಲದಿಂದಲೂ ನಡೆದುಬಂದ ಪದ್ಧತಿಯನ್ನಾಗಲಿ, ಸತ್ತೆಂದರೇನೆಂಬುದನ್ನಾಗಲಿ-ಅದರಿಂದ ಹೊಮ್ಮಿದ ಬ್ರಹ್ಮಾಂಡ-(ಸಹಜ)ಪಿಂಡಾಂಡವನ್ನಾಗಲಿ, ನಿಷ್ಠೆನೇಮವನ್ನಾಗಲಿ ನಾನು ತಿಳಿಯೆ. ನನಗೆ ತಿಳಿದಿರುವುದು-ಶರಣರು ಉಂಡು ಬಿಟ್ಟುದನ್ನು ಉಣ್ಣುವುದೊಂದೇ-ಎನ್ನುತ್ತ ಬಸವಣ್ಣನವರು ಸಿದ್ಧಾಂತಗಳ ಶಾಸ್ತ್ರಗಳ ಚರ್ಚೆಯನ್ನು ಶುಷ್ಕವೆಂದು ಅಲ್ಲಗಳೆಯುತ್ತ-ಭಕ್ತಿಭಾವವನ್ನು ಮಾತ್ರ ಸಾರವತ್ತಾದುದೆಂದು ಹೇಳುತ್ತಿರುವರು.
ಅಹುದು<ಅಪ್ಪುದು : ವಿಧಿ, ಆಗದು : ನಿಷೇಧ, ಆದಿಪಥ : ಧರ್ಮಸಿದ್ಧಾಂತಗಳ ಉಗಮ, ಸತ್ಯ : ಸತ್, ಪರಬ್ರಹ್ಮ, ಸಹಜ : ನಾದಬಿಂದುಕಳೆ, ಸಜ್ಜನ ಶುದ್ಧ : ನೇಮನಿಷ್ಠೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು