•  
  •  
  •  
  •  
Index   ವಚನ - 465    Search  
 
ಭಕ್ತನ ಪ್ರಸಾದಿಸ್ಥಲ - ಶರಣರು
ಒಂದುವನರಿಯದ ಸಂದೇಹಿ ನಾನಯ್ಯಾ; ನಂಬುಗೆಯಿಲ್ಲದ ಡಂಭಕ ನಾನಯ್ಯಾ; ನಿಮ್ಮ ನಂಬಿದ ಶರಣರ ಡಿಂಗರಿಗ ನಾನಯ್ಯಾ, ಕೂಡಲಸಂಗಮದೇವಾ.
Transliteration Onduvanariyada sandēhi nānayyā; nambugeyillada ḍambaka nānayyā; nim'ma nambida śaraṇara ḍiṅgariga nānayyā, kūḍalasaṅgamadēvā.
Manuscript
English Translation 2 I am a sceptic, Lord, most ignorant Of anything; a hpocrite Devoid of faith; a drudge Of Śaraṇās who believe in Thee, O Kūḍala Saṅgama Lord! Translated by: L M A Menezes, S M Angadi
Hindi Translation अकिंचितज्ञ संदेही हूँ, विश्वासहीन दंभी हूँ; तव श्रद्धालु शरणों का दास हूँ कूडलसंगमदेव॥ Translated by: Banakara K Gowdappa
Telugu Translation ఒకటి తెలియని సందేహి నేను నమ్ముట తెలియని డాంబికుడ నేను నిన్ను నమ్మిన శరణుల డిరగరి నేను కిందకు కూడల సంగమ దేవా. Translated by: Dr. Badala Ramaiah
Tamil Translation ஏதுமறியாது ஐயம் கொள்வோன் நான் ஐயனே நம்பிக்கையற்ற பகட்டினன் நான் ஐயனே உம்மை நம்பும் அடியார்களின் தொண்டன் நான் கூடல சங்கமதேவனே. Translated by: Smt. Kalyani Venkataraman, Chennai
Marathi Translation ऐसा मी आजाण, जाणे नच काही अविश्वासी, संदेही, मीच एक तैसाचि दांभिक, सेवक शरणांचा द्वारपाल त्यांचा, कूडलसंगा अर्थ - महात्मा बसवेश्वर या वचनात स्वतःला शरणी लीन होऊन राहण्याची वृती दर्शवितात व म्हणतात की, मी अविश्वासी, संदेही आणि दांभीक असेन ! परंतु हे कूडलसंगमदेवा तुझ्यावर विश्वासून राहणाऱ्या शरणांचा मी द्वारपाल खचित आहे. या वरील उदाहरणातून महात्मा बसवेश्वर शरण चरणी लीन होण्यास लागणाऱ्या अभिमानशून्य वृत्तीचे दर्शन घडवितात. Translated by Rajendra Jirobe, Published by V B Patil, Hirabaug, Chembur, Mumbai, 1983 काही न जाणणारा संदेही मी आहे देवा. विश्वासहीन दांभिक मी आहे देवा. तुम्हाला मानणाऱ्या शरणांचा सेवक मी आहे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಡಂಬಕ = ; ಡಿಂಗರಿಗ = ; ಸಂದೇಹಿ = ;
ಕನ್ನಡ ವ್ಯಾಖ್ಯಾನ ಏನೇನೂ ಅರಿಯದ ಅಜ್ಞಾನಿಯ, ಯಾವುದರಲ್ಲೂ ನಂಬಿಕೆಯಿಲ್ಲದ ಸಂದೇಹಿಯ, ನೈಜವಿಲ್ಲದ ಡಾಂಬಿಕನ ಕುಂದುಕೊರತೆಗಳೆಲ್ಲವೂ ತೊಲಗಿ ಅವನು ಭಕ್ತನಾಗಬೇಕಾದರೆ-ಶರಣರಿಗೆ ಸೇವೆ ಮಾಡಲು ಮೊದಲು ತೊಡಗಬೇಕು. ಆ ಸೇವಾವಿನಮ್ರತೆಯಿಂದ ಕ್ರಮವಾಗಿ ಅರಿವು, ಅರಿವಿನಿಂದ ನಂಬಿಕೆ, ನಂಬಿಕೆಯಿಂದ ನಿಜಾಚರಣೆ ಸಿದ್ಧಿಸುವುದು. ಆದುದರಿಂದಲೇ ಬಸವಣ್ಣನವರು ಶರಣರ ಸೇವೆಯನ್ನು ಆಧ್ಯಾತ್ಮಿಕ ಜೀವನಪ್ರವೇಶಕ್ಕೆ ಪ್ರಮುಖ ಅರ್ಹತೆಯನ್ನಾಗಿ ನಿಗದಿಮಾಡಿರುವರು. ಅಥವಾ-ಬಸವಣ್ಣನವರು ತಮ್ಮನ್ನು ಶೂನ್ಯಸ್ಥಿತಿಗಳಿಸಿಕೊಂಡು, ಶರಣರೇ ಸರ್ವಸ್ವವೆನ್ನುತ್ತಿರುವುದೇ ಅವರ ಎಲ್ಲ ವಿಜಯಕ್ಕೆ ಮತ್ತು ಯಶಸ್ಸಿಗೆ ಕಾರಣವೆನಿಸುವುದು. ತಮಗೆ ಜ್ಞಾನ ಧರ್ಮ ಆಚಾರಗಳೇನೂ ತಿಳಿಯದು-ನಾನು ಜ್ಞಾನಿಯಂತೆ ಕಂಡರೆ ಅದು ನನ್ನ ಡಂಬಾಚಾರದ ಥಳುಕು ! ನಾನು ಶರಣರ ಒಬ್ಬ ಗುಲಾಮನಷ್ಟೆ. ಅಹಂಕಾರವನ್ನು ಈ ಮಟ್ಟಕ್ಕೆ ಇಳಿಸಿಕೊಳ್ಳುವುದೇ ಬ್ರಹ್ಮದ ಮಟ್ಟಕ್ಕೆ ಏರುವ ದಾರಿ ಮತ್ತು ಏರಿದ್ದಕ್ಕೆ ಸಾಕ್ಷಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು