ಭಕ್ತನ ಪ್ರಸಾದಿಸ್ಥಲ - ಭಕ್ತಿ
ಬಿಡದೆ ಬಾಯಗಲ ಎಂಜಲ ಕಾಯ್ದಿಪ್ಪೆನು: ಕಿಂಕರನು;
ಕಿಂಕರರ ಮನೆಯಲ್ಲಿ ಕಿಂಕಿಲವನು ಆನು ಹಾರುತಿಪ್ಪೆನು,
ನಮ್ಮ ಕೂಡಲಸಂಗನ ಶರಣರ ಒಕ್ಕುದ ಮಿಕ್ಕುದನುಂಬ
ಕಿಂಕರ ನಾನು!
Transliteration Biḍade bāyagala en̄jala kāydippenu: Kiṅkaranu;
kiṅkarara maneyalli kiṅkilavanu ānu hāruttippenu,
nam'ma kūḍalasaṅgana śaraṇara okkuda mikkudanumba
kiṅkara nānu!
Manuscript
English Translation 2 Invariably I wait for crumbs
Out of their mouths: a servant I:
Eager to be a drudge
In servants' house.
I am a servant' feeding on
What our Lord Kūḍala Saṅga's Śaraṇās
Leave of their offerings!
Translated by: L M A Menezes, S M Angadi
Hindi Translation सदा द्वार पर भुक्तशेष का प्रतीक्षा करता हूँ
किंकर हूँ
किंकरों के घरों में सेवाकांक्षी हूँ
मम कूडलसंग के शरणों का शेष प्रसाद
खानेवाला किंकर हूँ कूडलसंगमदेव ॥
Translated by: Banakara K Gowdappa
Telugu Translation నోటిఎంగిలి విడక కాచుకొని యుంటి
కింకరుడ నేను; కింకరుల యింటి సందడిలో
ఎగిరెగిరి గంతులవైతు; మా కూడల సంగని
శరణులు తిని మిగిలినది తిను కింకరుడ నేను.
Translated by: Dr. Badala Ramaiah
Tamil Translation இடையறாது வாசலில் மிச்சிலிற்குக் காத்திருப்பேன்
பணியாட்களின் இல்லத்தில் தொண்டன்
நான்மகிழ்வேன். நம் கூடல சங்கனின் அடியார்தம்
பிரசாதத்தை உண்ணும் சேவகன் நான் ஐயனே.
Translated by: Smt. Kalyani Venkataraman, Chennai
Marathi Translation
सदैव दारात उष्ट्याची राखण करणारा सेवक मी.
सेवकाच्या घरी सेवक होण्याची इच्छा करतो मी.
आमच्या कूडलसंगाच्या शरणांचा
शेषप्रसाद सेवन करणारा सेवक मी.
Translated by Shalini Sreeshaila Doddamani
ಶಬ್ದಾರ್ಥಗಳು ಅಂಬು = ನೀರು; ಆಗಮ = ತಂತ್ರಶಾಸ್ತ್ರ, ವೇದ; ಒಕ್ಕುದ = ; ಡಿಂಗರಿಗ = ; ತೊತ್ತು = ; ಬಂಟ = ; ವಂಗ = ;
ಕನ್ನಡ ವ್ಯಾಖ್ಯಾನ ಶರಣರು ಉಂಡು ತಮ್ಮ ಮನೆಯ ಬಾಗಿಲಲ್ಲಿ ಎಸೆದ ಎಂಜಲನ್ನು ತಿಂದು ಬದುಕಿರುವ ಚಾಕರಿಯಾಳು ತಾವಾಗಬೇಕೆಂಬಂತೆ ಬಸವಣ್ಣನವರು ಕನಸು ಕಾಣುತ್ತಿರುವರು. ಅದಾಗದಿದ್ದರೆ ಆ ಶರಣರ ಕಿಂಕರರ ಮನೆಯಲ್ಲಿ, ಅದೂ ಆಗದಿದ್ದರೆ ಆ ಕಿಂಕರರ ಮನೆಯಲ್ಲಿ ಕೈಂಕರ್ಯ ಸಿಕ್ಕಿದರೆಯೂ ಸಾಕೆಂದು ಬಸವಣ್ಣನವರು ನಿರಂತರ ಹಂಬಲಿಸುತ್ತಿರುವರು.
ವಿ: ಬಾಗಿಲ ಎಂಬುದಕ್ಕೆ “ಬಾಯಗಲ” ಎಂಬ ಪಾಠಾಂತರ ಪ್ರಚುರವಿದ್ದು ಅದು ಕ್ಲಿಷ್ಟವಾದುದರಿಂದ ಪ್ರಾಚೀನ ಪಾಠವಿರಬೇಕೆಂಬ ಬ್ರಾಂತಿಯನ್ನು ಹುಟ್ಟಿಸಿದರೂ, ಸರಳವಾದ “ಬಾಗಿಲ” ಎಂಬ ಪಾಠವೇ ಮೂಲ ಪಾಠವೆನಿಸುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು