•  
  •  
  •  
  •  
Index   ವಚನ - 467    Search  
 
ಭಕ್ತನ ಪ್ರಸಾದಿಸ್ಥಲ - ನಂಬಿಕೆ
ತೊತ್ತಿಂಗೇಕೆ ಲಕ್ಷಣ? ಬಂಟಂಗೇಕೆ ಆಚಾರ? ಆಗಮವೇಕೆ ಡಿಂಗರಿಗಂಗೆ, ಒಕ್ಕುದನುಂಬುವಂಗಯ್ಯಾ? ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ.
Transliteration Tottigēke lakṣaṇa? Baṇṭaṅgēke ācāra? Āgamavēke ḍiṅgarigaṅge, okkudanumbuvaṅgayyā? Kūḍalasaṅgamadēvā nim'ma nambudācāravayyā.
Manuscript
English Translation 2 What needs a drudge good looks? What needs a braggart virtuous deeds? What needs a drudge who feeds Of what is left of offerings, To read the Āgamas? O Kūḍala Saṅgama Lord, But to belive in Thee Is virtue enough! Translated by: L M A Menezes, S M Angadi
Hindi Translation दास को शुभ-लक्षण क्यों? दास को आचार क्यों? दास को आगम क्यों? अवशिष्ट प्रसाद के भोक्ता को? तुम पर श्रद्धा रखना ही मेरा आचार है कूडलसंगमदेव ॥ Translated by: Banakara K Gowdappa
Telugu Translation తొత్తు కేటికి లక్షణము? భటున కేటికి ఆచారము? డిరగరికేటికి ఆగమమయ్యా? భుక్త శేషము తినువానికి కూడలసంగమ దేవా నిను నమ్ముటే ఆచారమయ్యా! Translated by: Dr. Badala Ramaiah
Tamil Translation தொண்டனுக்கு இலட்சணம் எதற்கோ? சேவகனுக்கு ஆசாரம் எதற்கோ? சேவகனுக்கு ஆகமம் எதற்கோ? பிரசாதத்தை உண்பவனுக்கு ஐயனே கூடல சங்கமதேவனே, உம்மை நம்புவதே ஆசாரம் ஐயனே. Translated by: Smt. Kalyani Venkataraman, Chennai
Marathi Translation पोटार्थीचे कोण, पाहतो लक्षण दिले तें भक्षण, करीतसे शिपायाचा कोण, पाहतो आचार आज्ञेचा विचार, तथा थोर उष्टावळापाई, फिरे दारोदार आगम विचार, तथा काय कूडलसंगमदेवा! भक्त एकमेव श्रद्धाचि सर्वस्व, तो आचार अर्थ - ज्याप्रमाणे पोटार्थीना लक्षणाची गरज नसते. तसेच शिपायाचा आचार आज्ञेचे पालन करणे. उष्टावळ खाणाऱ्यांना आगम-निगमाच्या गोष्ठी कशाला? तसेच हे कूडलसंगमदेवाची! तुझ्या भक्तासाठी विश्वासच आचार होय. Translated by Rajendra Jirobe, Published by V B Patil, Hirabaug, Chembur, Mumbai, 1983 दासीला लक्षणाची आवश्यकताआहे? सैनिकाला आचाराची आवश्यकता आहे का? सेवकाची आवश्यकता सेवकाला आहे का? शेषप्रसाद खाणाऱ्यांना कूडलसंगमदेवा तुमच्यावर विश्वास ठेवणे हाच आचार आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರ ಕಾಲದ ಸೇವಕವರ್ಗವನ್ನು ತೊತ್ತು-ಬಂಟ-ಡಿಂಗರಿಗ ಎಂದು ಮೂರು ಪಂಗಡವಾಗಿ ವಿಂಗಡಿಸಿರುವುದನ್ನು ಈ ವಚನದಲ್ಲಿ ಕಾಣಬಹುದು. ತೊತ್ತು ಎಂದರೆ ಗುಲಾಮ-ಅವನಿಗೆ ಅಥವಾ ಅವಳಿಗೆ ಸಿಂಗಾರವಾಗಿರಲು ಸಾಧ್ಯವಿರಲಿಲ್ಲ. ಅವರು ತಲೆ ಬೋಳಿಸಿಕೊಂಡಿರಬೇಕಾಗಿತ್ತು. ಬಂಟನೆಂದರೆ ತೊತ್ತಿಗಿಂತಲೂ ಮೇಲಾದ ಒಬ್ಬ ಸೇವಕ. ಅವನು ಯಜಮಾನನ ಕೆಲಸಗಳನ್ನು ಹೋರಾಟ ಮಾಡಿಯಾದರೂ ನೆರವೇರಿಸಿಕೊಡಬೇಕಾಗಿತ್ತು. ಅವನಿಗೆ ಆಚಾರವನ್ನು ನಿಯತವಾಗಿ ಮಾಡಲಾಗುತ್ತಿರಲಿಲ್ಲ. ಇವರಿಬ್ಬರಿಗಿಂತಲೂ ಕೀಳಾಗಿ ಸ್ವಾಮಿಯ ಮನೆಯ ಬಾಗಿಲನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದವನು ಡಿಂಗರಿಗ. ಇವನಿಗೆ ಪೂಜಾದಿಗಳನ್ನು ಆಗಮಾನುಸಾರವಾಗಿ ಮಾಡಲಾಗುತ್ತಿರಲಿಲ್ಲ. ಆದರೇನು ಈ ತೊತ್ತು ಬಂಟ ಡಿಂಗರಿಗರು ಶಿವಶರಣರ ಮನೆಯಲ್ಲಿ ಸೇವೆ ಮಾಡುತ್ತ ಅವರು ಬಿಟ್ಟ ಅನ್ನಪ್ರಸಾದವನ್ನು ಉಂಡುಕೊಂಡಿದ್ದರೆ ಸಾಕು ದೇವರೊಲಿಯುವನು ಮುಕ್ತಿ ದೊರೆಯುವುದೆಂಬುದು ಬಸವಣ್ಣನವರು ಅವರಿಗೆ ಕೊಟ್ಟ ಆಶ್ವಾಸನೆ. ಈ ತೊತ್ತು ಮುಂತಾದ ದಲಿತರನ್ನು ಶಿವಧರ್ಮೇತರವೈದಿಕರು ಮನೆಗೆ ಸೇರಿಸುತ್ತಿರಲಿಲ್ಲ. ಅವರಿಗೆ ಉದ್ಯೋಗವನ್ನು ಕೊಡುತ್ತಿರಲಿಲ್ಲ. ಹೀಗಾಗಿ ದಲಿತರ ಮಾನಮರ್ಯಾದೆ ಸೊನ್ನೆಯಾಗಿ, ನಿತ್ಯಜೀವನ ದುರ್ಭರವಾಗಿತ್ತು. ಆಗ ಶಿವಶರಣರು ಅವರನ್ನು ತಮ್ಮ ಮನೆಗೆಲಸಕ್ಕೆ ನೇಮಿಸಿಕೊಂಡರು. ಈ ರೀತಿಯ ಔದಾರ್ಯ ಕ್ರಿ.ಶ. 1930 ರಷ್ಟು ಇತ್ತೀಚೆಗೂ ಭಾರತದಲ್ಲಿ ಸಾಧ್ಯವಿರಲಿಲ್ಲವೆಂಬುದು ಡಾ. ಅಂಬೇಡ್ಕರರ ಜೀವನಚರಿತ್ರೆಯಿಂದ ತಿಳಿದುಬರುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು