ಭಕ್ತನ ಪ್ರಸಾದಿಸ್ಥಲ - ದೇವರು
ಪಾದೋದಕವ ಕೊಂಬೆ; ಪ್ರಸಾದವ ಕೊಂಬೆ;
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ!
ರಾತ್ರಿಯಲೊತ್ತೆಯ ಕೊಂಬ ಪಾತಕ ಸೂಳೆಯಂತೆ,
ಬರಿಯ ಮಾತಿಂಗೊಲೆವನೆ ನಮ್ಮ ಕೂಡಲಸಂಗಮದೇವ?
Transliteration Pādōdakava kombe; prasādava kombe;
arthaprāṇābhimāna nim'madembe!
Rātriyalotteya komba pātaka sūḷeyante,
bariya mātiṅgolevane nam'ma kūḍalasaṅgamadēva?
Manuscript
English Translation 2 I drink the water we wash your feet with,
I eat the food of worship,
and I say it's yours, everything, goods, life, honour:
he's really the whore who takes every last bit
of her night's wages,
and will take no words
for payment,
he, my lord of the meeting rivers!
Translated by: A K Ramanujan
Book Name: Speaking Of Siva
Publisher: Penguin Books
----------------------------------
I take the water from Thy feet;
I take the offering Thou hast blest;
I say
My honour, life and wealth are Thine;
Will our Lord Kūḍala Saṅgama
Love me for empty words,
Even as a worthless harlot who accepts
Her nightly fee?
Translated by: L M A Menezes, S M Angadi
Hindi Translation पादोदक लूँगा, प्रसाद लूँगा,
कहूँगा, अर्थ प्राणाभिमान तुम्हारे हैं;
रात्रि शुल्क लेनेवाली पातकी गणिका की भाँति
रिक्त बातों से प्रसन्न होंगे कूडलसंगमदेव ॥
Translated by: Banakara K Gowdappa
Telugu Translation పాదోదకము కొంటి ప్రసాదమందితి
అర్ధప్రాణాభిమానము నీదన
రాత్రికి వణముకొన్న చెడు లంజవోలె
వట్టిమాటల వలచునే
మా కూడల సంగమదేవుడు.
Translated by: Dr. Badala Ramaiah
Tamil Translation திருவடித் திருநீர், பிரசாதத்தைக் கொள்வேன்
பொருள், உயிர், அபிமானம் உம்மது என்பேன்
இரவில் பணம் பெற்றுப் பாவச்செயல் புரியும்
பரத்தையனைய வெற்றுப் பேச்சிற்கு
அருள்வனோ நம் கூடல சங்கமதேவன்?
Translated by: Smt. Kalyani Venkataraman, Chennai
Marathi Translation
पादोदक घेईन, प्रसाद घेईन,
अर्थ, प्राण, अभिमान तुमचाच आहे म्हणेन.
रात्री भाड्याने आणलेल्या पातकी
व्यभिचारीणीप्रमाणे पोकळ शब्दांनी
प्रसन्न होतील आमचे कूडलसंगमदेव ?
Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಹೆಂಡರು ಮಕ್ಕಳಲ್ಲಿ ಇರುವ ಮಮತೆ; ಅರ್ಥ = ಹಣ; ಒತ್ತೆಯ = ; ಪಾತಕ = ; ಪಾದೋದಕ = ; ಪ್ರಸಾದ = ;
ಕನ್ನಡ ವ್ಯಾಖ್ಯಾನ ಚೆಲುವು ಹರೆಯವಿರುವ ಸೂಳೆ ಹಗಲಿನಲ್ಲಿ ತನ್ನ ಪ್ರದರ್ಶನ ಮಾಡಿಕೊಂಡು-ಮೆಚ್ಚಿದ ವಿಟರಿಗೆ-ರಾತ್ರಿಬಾರೆಂದು ಒತ್ತೆಯನ್ನು ಸ್ವೀಕರಿಸಿ ಒಪ್ಪಂದಮಾಡಿಕೊಳ್ಳುವಳು. ಅವಳಲ್ಲಿ ವಿಟನೊಡನೆ ಸುಖಿಸುವ ಕಾತರವಿರುವುದಲ್ಲದೆ-ಮುಚ್ಚುಮರೆ ವಂಚನೆಯೇನೂ ಇರುವುದಿಲ್ಲ.
ಆದರೆ ಯೌವನವೆಲ್ಲ ಇಮರಿ, ಚೆಲುವೆಲ್ಲಾ ಮಾಸಿಹೋದ ಮುದಿಪಾಪಿಸೂಳೆಯೊಬ್ಬಳು ಹಗಲು ಯಾರ ಕಣ್ಣಿಗೂ ಬೀಳದೆ-ಕತ್ತಲಾದೊಡನೆಯೇ ಮುಖಕ್ಕೆ ಬಣ್ಣ ಬಳಿದುಕೊಂಡು, ಬಟ್ಟೆ ತುರುಕಿ ಎದೆಯನ್ನು ಕಟ್ಟಿಕೊಂಡು-ಪರದೇಶಿಗಳನ್ನು ನಾನೊಬ್ಬ ಯೌವನಸ್ಥಳೆಂಬಂತೆ ನಂಬಿಸಿ ಹಣವನ್ನು ಸುಲಿಯುವಳು. ಅವನು ಅವಳನ್ನು ಮುಟ್ಟಲು ಬಂದರೆ ಮೈಗೊಡದೆ ಬರಿಯ ಶೃಂಗಾರದ ಮಾತುಗಳನ್ನಾಡಿ ಕಾಲಕಳೆದು ಪಾರಾಗಲಿಚ್ಛಿಸುವಳು.
ಇಂಥ ಸೂಳೆಗೆ ಬರಿಯ ಮಾತಿನ ಭಕ್ತನನ್ನು ಹೋಲಿಸಿರುವರು ಬಸವಣ್ಣನವರು.
ಆ ವಂಚಕಭಕ್ತನು ಪಾದೋದಕ ಕುಡಿದು ಪ್ರಸಾದ ತಿನ್ನುತ್ತಾನೆ, ಅರ್ಥ ಪ್ರಾಣ ಅಭಿಮಾನ ಏನೆಲ್ಲಾ ನಿಮ್ಮದೇ ಎನ್ನುತ್ತಾನೆ ಶರಣರಿಗೆ. ಆದರೆ ಅವನು ಒಂದನ್ನೂ ಮುಟ್ಟಗೊಡುವುದಿಲ್ಲ. ಇಂಥ ಶಿವಭಕ್ತರಿಗೆ ಎಂದಿಗೂ ಶಿವನು ಮೋಸ ಹೋಗುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು