•  
  •  
  •  
  •  
Index   ವಚನ - 470    Search  
 
ಭಕ್ತನ ಪ್ರಸಾದಿಸ್ಥಲ - ಭಕ್ತಿಮಾರ್ಗ
ಪಾತಕ ಮಹಾಪಾತಕವ ಮಾಡಿದವನು ಸದ್ಭಕ್ತರ ಮನೆಗೆ ಹೋಗಿ, ಅವರೊಕ್ಕ ಪ್ರಸಾದವನಾಯ್ದುಂಡರೆ, ಸಕಲ ಬ್ರಹ್ಮಹತ್ಯಾದಿ ಪಾತಕ ಪರಿಹಾರವು, ಒಮ್ಮೆ ಬೇಡಿಕೊಂಡುಂಡರೆ, 'ಪಾತಕೇ ಸಮನ:ಪ್ರಾಪ್ತೇ| ಶಿವಭಕ್ತಗೃಹಂ ವ್ರಜೇತ್ ಯಾಚಯೇದನ್ನಮಮೃತಂ| ತದಲಾಭೇ ಜಲಂ ಪಿಬೇತ್' ಇದು ಕಾರಣ, ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರಿಗೆ ʼನಮೋ ನಮಃʼ ಎಂಬೆನು.
Transliteration Pātaka mahāpātakava māḍidavanu sadbhaktara manege hōgi, avarokka prasādavanāyduṇḍare, sakala brahmahatyādi pātaka parihāravu, om'me bēḍikoṇḍare, 'pātakē samana: Prāptē| śivabhaktagr̥haṁ vrajēt yācayēdannamamr̥taṁ| tadalābhē jalaṁ pibēt' idu kāraṇa, kūḍalasaṅgamadēvā, nim'ma sadbhaktarige ʼnamō sūcakaʼ embenu.
Manuscript
English Translation 2 For one who has commited sin- A venial or a mortal sin-to go To a true bhakta's house, To gather what he's served and eat; That is atonement for sacrilege! If he should take and eat but once- 'If the heart is sunk, in sin, One ought to visit a Śiva-bhakta's house And beg for holy food; and, failing this, Drink water!'... Therefore, O Kūḍala Saṅgama Lord, I say 'Hail, Oh hail' To Thy true devotees! Translated by: L M A Menezes, S M Angadi
Hindi Translation पातकी या महापातकी यदि सद्भक्तों के घर जाकर उनसे क्षिप्त पसाद चुनकर खा ले, तो सकल ब्रह्महत्यादि पातक दूर होंगे पातके समनुप्राप्ते शिवभक्त गृहं व्रजेत् याचयेदन्नममृतं तदलाभे जलं पिबेत् अतः तव सद्भक्तों से नमो नमः कहता हूँ कूडलसंगमदेव ॥ Translated by: Banakara K Gowdappa
Telugu Translation రౌరవాది నరకము సేయువాడు సద్భక్తుల యిల్లుజేరి వారి చేతి ప్రసాదమందిన బ్రహ్మహత్యాది సకల పాపములు బోవు ఒకసారి వేడి గైకొన్న ‘‘పాత కే సుమనః ప్రాప్తే శివభక్త గృహం వ్రజేత్ యాచయే దన్న మమృతం తద లాభే జలంపిభేత్ ‘‘ కాన సంగమదేవా! నీ సద్భక్తులకు నమో నమో అందు. Translated by: Dr. Badala Ramaiah
Tamil Translation மிகப்பெரும் பாவத்தைச் செய்தவன் அடியாரின் இல்லத்திற்குச் சென்று அவருடைய பிரசாதத்தை உண்டால் அனைத்து அந்தணக் கொலை போன்ற பாவச் செயல்களின் கழுவாயாம் ஒருமுறை வேண்டி உண்ணின் ஐயனே “பாதகேஷு மன:ப்ராப்தே சிவபக்தக்ருஹம் வ்ரேஜேத் யாசயேதன்னமம்ருதம் ததலாபே ஜலம் பிபேத் எனவே கூடலசங்கமதேவனே உன் மேன்மையான அடியார்களுக்கு நமோ, நமோ என்பேன். Translated by: Smt. Kalyani Venkataraman, Chennai
Marathi Translation महापातकीही, होई पाप रहित सद्भक्त प्रसादात, बळ ऐसे ब्रह्महत्यारीच्या, पापाचा परीहार सेविता एक बार, मागूनिया ""पातके समनुप्राप्ते शिवभक्तग्रहं व्रजेत्। याचेयेदन्नममृतं तदलाभे जलं पिवेत् ॥"" कूडलसंगमदेवा ! सद्भक्तांच्या भावा नमो नमो निघावा, शब्द तोंडी अर्थ - महापातकी असो वा ब्रह्महत्त्यारा असो जर तो शिवशरणांच्या घरचे अन्न प्रसाद म्हणून सेवन केल्यास त्याची अनेक पापे धुतली जातील. शरणांचा उरला सुरला-प्रसाद मागून खाल्ला तरीही त्याच्या पापाचा परिहार होईल. म्हणून हे कूडलसंगमदेवा! (परशिवलिंगा) तुझ्या सद्भक्तांना पाहतांच न कळत माझ्या तोंडून ""नमो नमो अशी वाणी बाहेर पडते आणि मी नतमस्तक होतो. Translated by Rajendra Jirobe, Published by V B Patil, Hirabaug, Chembur, Mumbai, 1983 पातकी महापातकीने सद्भक्ताच्या घरी जाऊन त्यांनी दिलेला प्रसाद सेवन केला तर सकल ब्रह्महत्यादि पातक परिहार होईल. एकदाच मागून खाल्ले तरीही पातके समनुप्राप्ते शिवभक्तगृहं व्रजेतः। याचयेदन्नममृतं तदलामे जलं पिबेत। म्हणून कूडलसंगमदेवा तुमच्या सद्भक्तांना नमो नमो म्हणतो. Translated by Shalini Sreeshaila Doddamani
ಶಬ್ದಾರ್ಥಗಳು ಪಾತಾಕ = ; ಪಿಬೇತ್ = ; ಪ್ರಸಾದ = ; ಪ್ರಾಪ್ತ = ; ಬ್ರಹ್ಮಹತ್ಯ = ; ವ್ರಜೇತ್ = ;
ಕನ್ನಡ ವ್ಯಾಖ್ಯಾನ ಪಾತಕ-ಮಹಾಪಾತಕವೇನಾದರೂ ತನ್ನಿಂದಾಯಿತೆನಿಸಿದರೆ ಶಿವಭಕ್ತರ ಮನೆಗೆ ಹೋಗಿ ಅವರು ಚೆಲ್ಲಿದ ಅಥವಾ ಬಿಟ್ಟ ಪ್ರಸಾದವನ್ನು ಆಯ್ದುಕೊಂಡು ಉಣ್ಣಬೇಕು-ಮಾಡಿದ ಪಾಪಕ್ಕೆಲ್ಲಾ ಪ್ರಾಯಶ್ಚಿತ್ತವಾಗುವುದು. ಶಿವಭಕ್ತರ ಮನೆಯ ಅನ್ನಾಹಾರ ಸಿಗದಿದ್ದರೆ ಅವರ ಮನೆಯ ನೀರನ್ನಾದರೂ ಕುಡಿದರೆ ಸಾಕು ಸರ್ವಪಾಪ ಪರಿಹಾರ, ಮನಸ್ಸು ನಿರ್ಮಲ. ಆದ್ದರಿಂದ ಶಿವಭಕ್ತರಿಗೆ ನಮಸ್ಕಾರ. ನೋಡಿ ವಚನ 450.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು