ಭಕ್ತನ ಪ್ರಸಾದಿಸ್ಥಲ - ಶರಣಾಗತಿ
ನಾನು ಹೊತ್ತ ಹುಳ್ಳೆಯ ಹೊರೆಯನಂಬಲಿಗೆ
ಕೊಂಬುವರಿಲ್ಲ ನೋಡಯ್ಯಾ.
ಆನು ನಿಮ್ಮ ಶರಣರ ಒಕ್ಕುದನುಂಡು ಬದುಕಿದೆನಯ್ಯಾ.
ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು
ಕೂಡಲಸಂಗಮದೇವಾ.
Transliteration Nānu hotta huḷḷeya horeyanambalige
kombuvarilla nōḍayya.
Ānu nim'ma śaraṇara okkudanuṇḍu badukidenayyā.
Mēruva sārida kāge hombaṇṇavappudu tappadu
kūḍalasaṅgamadēvā.
Manuscript
English Translation 2 Behold, Sir, none there be
To buy the faggot-bundle which I bear,
Even for a gruel bowl!
I've lived, O Lord, on what
Thy Śaraṇās have offered me.
A crow who's entered Mēru , must
Perforce be gilded gold,
O Kūḍala Saṅgama Lord!
Translated by: L M A Menezes, S M Angadi
Hindi Translation मुझसे ढोया ऊढ ईंधन, देखो स्वामी
काँजी देकर खरीदनेवाले नहीं है
मैं तव शरणों का शेष प्रसाद खाकर जीवित हूँ
कौए के मेरू जाने पर उसका रंग स्वर्णिम होना
अवश्यंभावी, कूडलसंगमदेव ॥
Translated by: Banakara K Gowdappa
Telugu Translation ఈ మోయు నా యొడలి బెండును
గంజికీ కొనువారు లేరయ్యా
నీ శరణుల భుక్తశేషమున
బ్రతికెదనయ్యా నేను; మేరుగిరి దాకిన
గాని బంగారు కాక దప్పదు
కూడల సంగమదేవా.
Translated by: Dr. Badala Ramaiah
Tamil Translation நான் சுமந்த சுள்ளிகளைக் கஞ்சியை
அளித்துக் கொள்பவர் இல்லை, காணாய்
நான் உம் அடியார்களின் பிரசாதத்தை
உண்டு வாழ்வேன் ஐயனே, மேருவை அடைந்த
காகம் பொன் வண்ணத்தை எய்யாதிருக்குமோ
கூடலசங்கம தேவனே.
Translated by: Smt. Kalyani Venkataraman, Chennai
Marathi Translation
मी आणलेला जळणाचा भारा आंबिल
देवूनही विकत घेणारे कोणी नाही देवा.
मी तुमच्या शरणांचा शेषप्रसाद खाऊन जगतो देवा.
मेरु पर्वताजवळ गेलेला कावळा सुवर्णमय झाल्याविना
राहणार नाही कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಂಬಲಿ = ಗಂಜಿ; ಒಕ್ಕುದ = ; ಮೇರು = ; ಹೊಂಬಣ್ಣ = ;
ಕನ್ನಡ ವ್ಯಾಖ್ಯಾನ ನಾನು ಹೊತ್ತು ತಂದ ಪುಳ್ಳೆಯ ಹೊರೆಯನ್ನು ಯಾರಾಗಲಿ ಅಂಬಲಿಗೆ ಬದಲಾಗಿಯೂ ಕೊಂಬವರಿಲ್ಲವೆಂದು ಬಸವಣ್ಣನವರು ಪರಿತಪಿಸುತ್ತಿರುವುದು ಗಮನಾರ್ಹವಾಗಿದೆ. ಈ ಮಾತಿಗೆ-ಈ ಮೂಳೆ ಚಕ್ಕಳದ ದೇಹಕ್ಕೇನೂ ಬೆಲೆಯಿಲ್ಲವೆಂಬ ಕೇವಲ ಪಾರಮಾರ್ಥಿಕ ಅರ್ಥವನ್ನು ಗ್ರಹಿಸಬೇಕೇ ? ಅಥವಾ ಬಸವಣ್ಣನವರು ಸ್ವಂತ ಜೀವನದಲ್ಲಿ ಸೌದೆ ಮಾರಿ ಜೀವಿಸುವ ಕಾಯಕವನ್ನೇನಾದರೂ ಒಂದು ಕಾಲಕ್ಕೆ ಕೈಕೊಂಡಿದ್ದರೋ?
ಅವರು 326 ನೇ ವಚನದಲ್ಲಿ ಇದೇ ಮೋಳಿಗೇ ಕಾಯಕವನ್ನು ಕುರಿತಂತೆ ಮಾತನಾಡಿರುವುದನ್ನು ಕಂಡಿದ್ದೇವೆ. ಆದ್ದರಿಂದ ಅವರು ಯಾವ ಕಾರಣದಿಂದಲೇ ಆಗಲಿ-ಕಲ್ಯಾಣದಲ್ಲೋ, ಕಲ್ಯಾಣಕ್ಕೆ ಬರುವ ಮುನ್ನ ಮತ್ತೆಲ್ಲಿಯಾದರೂ ಸೌದೆಯನ್ನು ಕಟ್ಟಿ ತಂದು ಮಾರುವ ಕಾಯಕವನ್ನು ನಡೆಸಿರಬಹುದೆಂಬುದರಲ್ಲಿ ಅಸಂಗತವೇನೂ ಇಲ್ಲ. ಆದರೆ ಈ ಕಾಯಕಕ್ಕೆ ಬದಲಾಗಿ ಶಿವಶರಣರ ಮನೆಯಲ್ಲಿ ಹಾಯಾಗಿ ಉಂಡುಕೊಂಡಿರುವುದು ಸುಲಭವೆಂದು ಬಸವಣ್ಣನವರು ಭಾವಿಸಿದ್ದರೆಂದಾಗ ಮಾತ್ರ ಅತ್ಯಂತ ಅಸಂಗತವಾಗದಿರದು.
ಈ ವಚನದಲ್ಲಿ ವ್ಯಕ್ತಪಟ್ಟಿರುವ ಮುಖ್ಯ ಭಾವನೆಯೆಂದರೆ-ಶರಣರ ಸಹವಾಸವಿಲ್ಲದ ಬಸವಣ್ಣನವರ ಸಾಹಸದ ಶ್ರಮದ ನಿರರ್ಥಕತೆ. ಒಂದು ಸಲ ಶರಣರ ಸಾನ್ನಿಧ್ಯ ಲಭಿಸಿತೆಂದರೆ ತಮ್ಮ ಆ ಶ್ರಮ ಮತ್ತು ಸಾಹಸಕ್ಕೆ ಬೆಲೆ ಬಂದೀತೆಂಬ ಶ್ರದ್ಧೆಯಿಂದ ಈ ವಚನವನ್ನು ಬಸವಣ್ಣನವರು ಹೇಳುತ್ತಿರುವರು. ಈ ಉಕ್ತಿಗೆ ಅವರು ಕೊಡುವ ಮೇರು-ಕಾಗೆಯ ನಿದರ್ಶನವೂ ಉಚಿತವಾಗಿದೆ. ಕಾಗೆಯೆಷ್ಟೇ ನಿಕೃಷ್ಟಪಕ್ಷಿಯಾದರೂ-ಅದು ಮೇರುಪರ್ವತದ ತಪ್ಪಲುಸೀಮೆಯನ್ನು ತಲುಪಿದರೂ ಸಾಕು-ಸ್ವರ್ಣಪಕ್ಷಿಯಾಗುವುದು.
ಇಡಿಯಾಗಿ ಈ ವಚನ ಬಸವಣ್ಣನವರಿಗಿರುವ ಶರಣಸಾನ್ನಿಧ್ಯಾಕಾಂಕ್ಷೆಯನ್ನೂ, ಅದರಿಂದ ತಾವು ಸಾಧಿಸಲಾಗುವ ಆಧ್ಯಾತ್ಮಿಕಸಿದ್ಧಿಯನ್ನೂ ಚಿತ್ರಿಸುತ್ತಿರುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು