•  
  •  
  •  
  •  
Index   ವಚನ - 472    Search  
 
ಭಕ್ತನ ಪ್ರಸಾದಿಸ್ಥಲ - ಅನುಗ್ರಹ
ಭವಭವದಲ್ಲಿ ನಿಮ್ಮ ಜಂಗಮವೆ ಶರಣಯ್ಯಾ: ಅವರುಂಡು ಮಿಕ್ಕುದ ಉಡುಗಿ, ಒಕ್ಕು ಪ್ರಸಾದವನಾಯ್ದುಂಬ ಮರುಳ ನಾನಯ್ಯಾ. ನಮ್ಮ ಕೂಡಲಸಂಗನ ಶರಣರ ರಿಣವ ನಾ ಹಿಂಗಲಾರೆ!
Transliteration Bhavabhavadalli nim'ma jaṅgamave śaraṇayya: Avaruṇḍu mikkuda uḍugi, okku prasādavanāydumba maruḷa nānayyā. Nam'ma kūḍalasaṅgana śaraṇara riṇava nā hiṅgalāre!
Manuscript
English Translation 2 Birth after birth, O Lord, Thy Jaṅgama alone is my refuge: I am a madlingl O Lord, Who sweep up what is left Out of their eating, and Receive it as their offering! How can I pay the debt, Of our Kūḍala Saṅga's Śaraṇās ? Translated by: L M A Menezes, S M Angadi
Hindi Translation भवभव में तव जंगम ही शरण्य है उनका भुक्तावशेष साफ कर शेष प्रसाद चुन लेनेवाला बावला हूँ मम कूडलसंग के शरणों के ऋण से उऋणं नहीं हो सकता ॥ Translated by: Banakara K Gowdappa
Telugu Translation జన్మజన్మకు నీ జంగమమే నాకు శరణయ్యా వారు తిని మిగిలినదే ప్రసాదమని జవురుకొను వెంగలి నేనయ్యా మా సంగని శరణుల ఋణము నే దీర్పలేను. Translated by: Dr. Badala Ramaiah
Tamil Translation பிறவிதோறும் உம் சரணருக்குத் தஞ்சம் ஐயனே அவர் உண்டு எஞ்சியதை சேகரித்து எஞ்சிய பிரசாதமாகக் கொள்ளும் மருளன் நான் ஐயனே கூடல சங்கனின் அடியாரிடம் நான் பட்டுள்ள கடனை செரிக்கவியலுமோ? Translated by: Smt. Kalyani Venkataraman, Chennai
Marathi Translation जन्म जन्मांतरी, जंगमांची सेवा शिवशरण भावा, प्राप्त व्हाया तोचि गुरुदेव, मज उद्धरिते तथा प्रसादाते, सदा सेऊ त्यांचे उचिष्ट, सेउनिया तृप्त तेचि इष्ट आप्त, वंदनीय मज एक त्यांच्या, प्रसादाचे वेड तयाहूनि वाढ, नोहे काही कूडलसंगमदेवा! शरणांचे ते ऋण असंभव जाण, फेडणे ते अर्थ - महात्मा बसवेश्वर जंगममूर्तिना शिवशरण, सद्गुरू आणि उद्धारक समजतात. ते म्हणतात की, मी सदैव त्यांच्या शेष प्रसादाचा वेडा भुकेला आहे. हे कूडलसंगमदेवा! अशा श्रेष्ठ शरणांचे ऋण फेडणे अशक्य होय. Translated by Rajendra Jirobe, Published by V B Patil, Hirabaug, Chembur, Mumbai, 1983 भव भवान्तरात तुमचे जंगम माझे शरण आहे देवा. त्यांच्या भोजनाचा शेषप्रसाद घेणारा, . शेषप्रसाद घेणारा मुग्ध मी आहे देवा. आमच्या कूडलसंगाच्या शरणांचे ऋण मी फेडू शकत नाही. Translated by Shalini Sreeshaila Doddamani
ಶಬ್ದಾರ್ಥಗಳು ಉಡುಗಿ = ; ಋಣ = ; ಖಂಗು = ; ಜಂಗಮ = ; ಭವ = ; ಮರುಳ = ;
ಕನ್ನಡ ವ್ಯಾಖ್ಯಾನ ಜನ್ಮಜನ್ಮಾಂತರಗಳಿಂದ ತಾವು ಜಂಗಮಪ್ರಸಾದವನ್ನು ಸ್ವೀಕರಿಸುತ್ತಲೇ ಬಂದಿರುವುದಾಗಿಯೂ-ಅದರ ಪರಿಣಾಮವಾಗಿಯೇ ಇವತ್ತು ಈ ಶಿವಧರ್ಮದಲ್ಲಿ ಸೇರ್ಪಡೆಯಾಗಿ ಆ ಶರಣರ ಸಹಾಯದಿಂದ ತಾವು ಜಂಗಮಾಶೀರ್ವಾದಕ್ಕೆ ಪಾತ್ರವಾಗಿರುವುದಾಗಿಯೂ ಬಸವಣ್ಣನವರು ತಮ್ಮ ಕೃತಜ್ಞತೆಯನ್ನು ಆ ಶರಣ ಸಮೂಹದಲ್ಲಿ ವಿನಂತಿಸಿಕೊಳ್ಳುತ್ತಿರುವರು. ಈ ವಚನದಲ್ಲಿ ಬಂದಿರುವ ಮರುಳನೆಂಬ ಪದಕ್ಕೆ ಮರುಳುಶಂಕರದೇವರೆಂಬ ಅರ್ಥವಾದರೂ ಸರಿಯೆ (-ನೋಡಿ ಶೂನ್ಯಸಂಪಾದನೆ ಸಂ: ಡಾ. ಎಲ್. ಬಸವರಾಜು, ಪುಟ 86-101). ಈ ಮರುಳುಶಂಕರ ದೇವರು ಬಸವಣ್ಣನವರ ಮನೆಯ ಬಳಿಯ ಪ್ರಸಾದದ ಗುಂಡಿಯ ಬಳಿ ಅಜ್ಞಾತವಾಗಿದ್ದು ಅಲ್ಲಿ ಬಿದ್ದ ಶರಣರೆಂಜಲನ್ನು ತಿಂದು ಮಹಿಮಾನ್ವಿತನಾದೊಬ್ಬ ಗುಪ್ತ ಭಕ್ತ. ಹೀಗೆ ಉಚ್ಛಿಷ್ಟಪ್ರಸಾದ ಸ್ವೀಕರಿಸಿ ಶಿವನಿಗೆ ಪ್ರಿಯವಾದವರಿಗೆ ಶಿವಗಣ ಪ್ರಸಾದಿಗಳೆಂಬುದು ಬಿರುದು. ಈ ಮೇಲೆ ಹೇಳಿದ ಮೊದಲನೇ ಶೂನ್ಯ ಸಂಪಾದನೆಯನ್ನು ಬರೆದ ಮಹಾದೇವಯ್ಯನೂ ಒಬ್ಬ ಶಿವಗಣಪ್ರಸಾದಿಯೆಂಬುದನ್ನು ಮರೆಯಬಾರದು. ಬಸವಣ್ಣನವರು ಈ ವಚನದಲ್ಲಿ ಇಂಥ ಒಂದು ಪ್ರಸಾದಸಂದರ್ಭವನ್ನು ತಮ್ಮ ಈಪ್ಸಿತವೆಂಬಂತೆ ನೆನೆಯುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು