•  
  •  
  •  
  •  
Index   ವಚನ - 473    Search  
 
ಭಕ್ತನ ಪ್ರಸಾದಿಸ್ಥಲ - ಆತ್ಮಶುದ್ಧಿ
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ: ಅವರೊಕ್ಕುದನುಂಡು, ಮಿಕ್ಕುದ ಕಾಯ್ದುಕೊಂಡಿಪ್ಪ ಕಾರಣ ಕಾಲ ಮುಟ್ಟಲಮ್ಮವು; ಕಲ್ಪಿತ ತೊಡೆಯಿತ್ತು; ಎನ್ನ ಭವಬಂಧನ ಹಿಂಗಿತ್ತು; ಕರ್ಮ ನಿರ್ಮಳವಾಯಿತ್ತು! ಅವರ ತೊತ್ತಿನ ತೊತ್ತಿನ ಮರುದೊತ್ತಿನ ಮಗನೆಂದು ಕೂಡಲಸಂಗಮದೇವ `ಇತ್ತ ಬಾ' ಎಂದೆತ್ತಿಕೊಂಡನು!
Transliteration Dāsiya vargadallippenu śivaśaraṇara maneyalli: Avarokkudanuṇḍu, mikkuda kāydukoṇḍippa kāraṇa kāla muṭṭalam'mavu; kalpita toḍeyittu; enna bhavabandhana hiṅgittu; karma nirmalavāgittu! Avara tottina tottina marudottina maganendu kūḍalasaṅgamadēva `itta bā' endettikoṇḍanu!
Manuscript
English Translation 2 In Śivaśaraṇās ' house, I am As if a servant-maid: Because I eat what they will spare, By saving their remains, I am beyond the touch of death; The veil of fiction is effaced; My bonds of birth are torn; All I have done of good or ill Is cleansed away! As a servant's servant's servant's son, Lord Kūḍala Saṅgama said, 'Come here' And picked me up! Translated by: L M A Menezes, S M Angadi
Hindi Translation दासी-वर्ग में हूँ शिवशरणों के घरों में उनका त्यक्त प्रसाद खाकर शेष की रक्षा करने के कारण मृत्यु स्पर्श नहीं कर सकती कृत्रिमता नष्ट हुई मेरा भव-बंधन दूर हुआ, कर्म निर्मल हुआ। उनके दास के दास-दास का पुत्र समझ कूडलसंगमदेव ने मुझे निकट बुलाकर उठा लिया ॥ Translated by: Banakara K Gowdappa
Telugu Translation పనికత్తె వరుసనుంటి; శివశరణుల యింట వారు తిన్నది తినుచు; మిగిలినదానికై వేచియుంటి కారణమేమన కాలుడు ముటవెఱచు ప్రారబ్ద మణగారు; భవబంధములు తెగు కర్మ నిర్మలమగు; వారి తొత్తుకు తొత్తు తొత్తు కొడుకునన; సంగడు ఇటు రారాయని నన్నెత్తుకొనునయ్యా! Translated by: Dr. Badala Ramaiah
Tamil Translation சிவனடியார்களின் இல்லத்தில் பணியாளனின் வகையிலிருப்பேன் அவருடைய பிரசாதத்தை உண்டு எஞ்சியதைக் காத்துக் கொண்டிருப்பேன் காலம் தொடுவதில்லை, தலையெழுத்தும் அகன்றது. பிறவிப் பிணைப்பு அகன்றது, வினை தூய்மையாயிற்று அவருடைய தொண்டனின், தொண்டனின், தொண்டனின் மகனென்று கூடலசங்கமதேவன், இங்குவா என்று அழைத்துக் கொண்டனன். Translated by: Smt. Kalyani Venkataraman, Chennai
Marathi Translation शरणांच्या घरातील सेवक वर्गात मी आहे. त्यांनी दिलेले खाऊन, शेषप्रसाद राखण केल्याने काल स्पर्श मला झाला नाही, कल्पित नष्ट झाले. भव बंधन तुटले, कर्म निर्मळ झाले. त्यांच्या सेवकाच्या सेवकाच्या नातूच्या सेवकाचा पुत्र म्हणून कूडलसंगमदेवाने `इकडे ये` म्हणून उचलून घेतले. Translated by Shalini Sreeshaila Doddamani
ಶಬ್ದಾರ್ಥಗಳು ಒಕ್ಕುದ = ; ಕಲ್ಪಿತ = ; ತೊತ್ತು = ; ದಾಸಿ = ; ನಿರ್ಮಲ = ; ಪಡಿ = ; ಭವಬಂಧನ = ;
ಕನ್ನಡ ವ್ಯಾಖ್ಯಾನ ಶರಣರ ಮನೆಯಲ್ಲಿ ಎಸೆದ ಎಂಜಲನ್ನು ತಿನ್ನುವಷ್ಟು ತಿಂದು-ಮಿಕ್ಕುದನ್ನು ಇನ್ನೊಂದು ಸಲಕ್ಕೆಂದು ಜೋಪಾನವಾಗಿ ರಕ್ಷಿಸಿಟ್ಟುಕೊಂಡಿರುವ (ಆ ಶರಣರ ಮನೆಯ) ಗುಲಾಮರ ಸಾಲಿನಲ್ಲಿ ಬಸವಣ್ಣನವರು ತಮ್ಮನ್ನು ನಿಲ್ಲಿಸಿಕೊಂಡಿರುವ ಒಂದು ಅಪರೂಪದ ಚಿತ್ರ ಈ ವಚನದಲ್ಲಿದೆ. ಶರಣರ ಪ್ರಸಾದಮಹಿಮೆಯಿಂದಲೇ ಸಾವನ್ನೂ ಪಾಪದ ಇತರ ದುಷ್ಪಲಗಳನ್ನೂ-ಇವೆಲ್ಲಕ್ಕೂ ಮೂಲಕಾರಣವಾದ ಕರ್ಮವನ್ನೂ-ಇಡಿಯಾಗಿ ಈ ಭವಬಂಧನವನ್ನೆಲ್ಲ ತಾವು ಅತಿಕ್ರಮಿಸಿ ನಿಂತಿರುವುದಾಗಿ ಬಸವಣ್ಣನವರು ಕೃತಕೃತ್ಯಭಾವವನ್ನು ಸೂಸುತ್ತಿರುವರು. ಹೀಗೆ ತಾವು ಶರಣರ ಮನೆಯ ನಾಲ್ಕನೆಯ ದರ್ಜೆಯ ಗುಲಾಮನಾಗಿ ಆ ಶರಣರ ಪ್ರೀತಿಗೆ ಪಾತ್ರವಾದುದರಿಂದಲೇ ತಮ್ಮನ್ನು ಶಿವನು ಇತ್ತಬಾರೆಂದು ಮುದ್ದುಗರೆದು ಎತ್ತಿಕೊಂಡನೆಂದೂ-ಎಲ್ಲವೂ ಶುಭಾಂತವಾಯಿತೆಂದೂ ಬೆರಕೆಯಿಲ್ಲದ ಅಚ್ಚ ಆನಂದದಲ್ಲಿ ಲೀನವಾಗಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು