•  
  •  
  •  
  •  
Index   ವಚನ - 474    Search  
 
ಭಕ್ತನ ಪ್ರಸಾದಿಸ್ಥಲ - ದಾಸೋಹ
ಜನ್ಮ ಜನ್ಮಕ್ಕೆ ಹೋಗಲೀಯದೆ, 'ಸೋಹಂ' ಎಂದೆನಿಸದೆ, 'ದಾಸೋಹಂ' ಎಂದೆನಿಸಯ್ಯಾ. ಲಿಂಗಜಂಗಮದ ಪ್ರಸಾದವ ತೋರಿ ಬದುಕಿಸಯ್ಯಾ. ಕೂಡಲಸಂಗಮದೇವಾ.
Transliteration Janma janmakke hōgalīyade, 'sōṣaṁ' endenisade, 'dāsōṣam' endenisayya. Liṅgajaṅgamada prasādava tōri badukisayyā. Kūḍalasaṅgamadēvā.
Manuscript
English Translation 2 Let me not stray from birth to birth, Let me not say that I am He: Let me say rather, Thy slave am I Show me the grace of Liṅga and Jaṅgama O Kūḍala Saṅgama Lord. And give me life! Translated by: L M A Menezes, S M Angadi
Hindi Translation मुझे जन्मजन्मांतर में जाने न दो मुझसे ‘सोम’ न कहलाकर दासोम् कहलाओ लिंग जंगम प्रसाद दिखाकर जीने दो कूडलसंगदेव ॥ Translated by: Banakara K Gowdappa
Telugu Translation జన్మజన్మల బడనట్లు; సోహంబనిపింపక దాసోహం బనిపింపుమయ్యా; లింగ జంగమ ప్రసాదము చూపి బ్రతికింపుమయ్యా! కూడల సంగమ దేవయ్యా! Translated by: Dr. Badala Ramaiah
Tamil Translation பல பிறவிகளுக்குச் செல்லவியலாதவாறு “ஸோஹம்“ என்று எண்ணாதவாறு “தாஸோஹம்“ என்று எண்ணும் ஐயனே இலிங்க ஜங்கம பிராசதத்தைக் காட்டி வாழச் செய்வாய் ஐயனே கூடல சங்கம தேவனே. Translated by: Smt. Kalyani Venkataraman, Chennai
Marathi Translation जन्म जन्मांतरी, न घालिता माते न सोहं शब्दा ते, उच्चारु दे दासोहं दासोहं सदा मी म्हणावे लिंग जंगम भावे, वर्तावे कूडलसंगमदेवा ! जंगम सेवेत प्रसाद सेवीत, राही नित्य अर्थ - महात्मा बसवेश्वर मोठ्या आत्मविश्वासाने आपल्या वचनात म्हणतात की, जन्म जन्मांतरीच्या फेऱ्यातून मुक्त व्हायचे असेल तर स्वतःस सोहम् म्हणजे परमेश्वर मीच आहे. असा दुराभिमान बाळगू नकोस. त्याऐवजी दासोहम् म्हणजे दररोजचे शिल्लक (उरलेले उत्पन्न ) गुरू-लिंग-जंगम प्रसाद सेवेप्रित्यर्थं खर्ची घालून सदैव समर्पण भावाने जगल्यास आत्मतृप्ती होईल. आणि आत्मतृप्तीतच मुक्ती आहे. असे त्यांचे ठाम मत आहे. Translated by Rajendra Jirobe, Published by V B Patil, Hirabaug, Chembur, Mumbai, 1983 जन्म जन्मात येऊ देवू नका, सोऽहं म्हणवू नका. `दासोहं` असे म्हणवावे. लिंग जंगमाचा प्रसाद देऊन जगवावे कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ; ದಾಸೋಹ = ; ಪ್ರಸಾದ = ; ಸೋಹಮ್ = ;
ಕನ್ನಡ ವ್ಯಾಖ್ಯಾನ ನಾನು ಶಿವನಲ್ಲ. ಶಿವನ ದಾಸನೂ ಅಲ್ಲ-ಶಿವ ಶರಣರ ದಾಸ ಎಂಬ ಭಾವನೆ ನನ್ನಲ್ಲಿ ನೆಲೆಯೂರುವಂತಾಗಲಿ ಎಂದು ಬಸವಣ್ಣನವರು ಪ್ರಾರ್ಥಿಸುತ್ತಿರುವರು. ಶಿವೋಹಂ ಎಂಬ ಮಾತಿನ ಮೊನೆಯಲ್ಲಿ ಅಹಂಕಾರವು ಪ್ರಖರವಾಗಿಯೇ ಇರುವುದರಿಂದ-ಆ ಮಾತು ನನಗೆ ಬೇಡ. ನನ್ನಲ್ಲಿರುವ ಆ ಅಹಂಕಾರದ ನಿಶಿತಧಾರೆಯನ್ನು ಗಾರುಮಾಡುವ ಶಿವಶರಣರ ದಾಸ ನಾನು ಎಂಬ ಮಾತೇ ನನಗೆ ಮಂತ್ರವಾಗಲಿ. ಲಿಂಗಸ್ವರೂಪಿಯಾದ ಜಂಗಮದ ಪ್ರಸಾದ ನನಗೆ ಲಭಿಸಿ-ಆ ಮಂತ್ರ ನನಗೆ ಸಿದ್ಧಿಸಲಿ-ಎನ್ನುತ್ತ ಬಸವಣ್ಣನವರು ಶಿವನನ್ನು ಕುರಿತು-“(ಶಿವನಾಗಿ ನೀನು ಬದುಕು) ನಿನ್ನ ಶರಣರ ದಾಸನಾಗಿ ಬದುಕಲು ನನ್ನನ್ನು ಬಿಡು” ಎಂಬಂತೆ ಪ್ರಾರ್ಥಿಸುತ್ತಿರುವರು. ವಿಚ್ಛಿದ್ರಕಾರಕವಾದ ಅಹಂಕಾರ ನಿರಸನವಾಗಲು ಕೈಂಕರ್ಯವೇ ಮಾರ್ಗವೆಂದು ಬಗೆದು-ಸೇವೆಯಲ್ಲೇ ತಮ್ಮ ಸರ್ವಜ್ಞತೆಯನ್ನೂ ಸರ್ವಶಕ್ತಿಯನ್ನೂ ಸರ್ವವ್ಯಾಪಕತೆಯನ್ನೂ ಕಂಡುಕೊಂಡ ಮಹಾದಾರ್ಶನಿಕರು ಬಸವಣ್ಣನವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು