•  
  •  
  •  
  •  
Index   ವಚನ - 475    Search  
 
ಭಕ್ತನ ಪ್ರಸಾದಿಸ್ಥಲ - ಶರಣರ ಸಂಗ
ಕರ್ತರು ನಿಮ್ಮ ಗಣಂಗಳು ಎನ್ನ ತೊತ್ತುಮಾಡಿ ಸಲಹಿದ ಸುಖವು ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯದಂತುಟಲ್ಲಾ- ಕೇಳಿರಯ್ಯಾ, ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು!
Transliteration Kartaru nim'ma gaṇaṅgaḷu enna tottumāḍi salahida sukhavu sālōkya, sāmipya, sārūpya, sāyujyadantuṭallā- kēḷirayya, kūḍalasaṅgana śaraṇaru tam'ma okkudanikki salahida sukhavu!
Manuscript
English Translation 2 My joy in that Thy Śaraṇās Have fostered me, As masters do their slaves, Is not as is the joy Of sālōkya,sāmipya,sārūpya,sāyujjya: Here me, my joy Is that Kūḍala Saṅga''s Śaraṇās Have fostered me on what is left Out of their offerings! Translated by: L M A Menezes, S M Angadi
Hindi Translation मेरे कर्ता तव प्रमथों ने भृत्य समझ मुझे पाला वह सुख सालोक्य, सामिप्य, सारुप्य तथा सायुज्यवत् नहीं है सुनिए कूडलसंग के शरणों के भुक्तावशेष से पालित वह सुख ॥ Translated by: Banakara K Gowdappa
Telugu Translation కర్తలు నీ గణములు నన్ను దాసునిజేసి సాకిన సుఖము సాలోక్య సామీప్య సారూప్య సాయుజ్యములకు సరిరాదు వినవయ్యా సంగని శరణులు ప్రసాదమిచ్చి పెంచెడి సుఖము నే నేమందునయ్యా? Translated by: Dr. Badala Ramaiah
Tamil Translation உடையர், உம் கணங்கள், என்னைத் தொண்டனாகச் செய்து உதவிய இன்பமானது ஸாலோக்கியம், ஸாமிப்யம், ஸாரூப்யம், ஸாயுஜ்யம் என்னுமிவற்றைப் போல அல்ல ஐயனே, கேளாய கூடலசங்கனின் அடியார், தம் பிரசாதத்தை அளித்து அருளும் இன்பம்! பக்தனின் பிராணலிங்கித்தலம் Translated by: Smt. Kalyani Venkataraman, Chennai
Marathi Translation कर्ता आहेत तुमचे शरण, मला सेवक करुन माझे पालन पोषणा करण्यातील सुख, सालोक्य, सामिप्य, सारुप्य, सायुज्याप्रमाणे नाही. ऐका देवा, कूडलसंगाच्या शरणांचे आपला शेष प्रसाद देवून पाळण्याचे सुख वेगळे आहे. Translated by Shalini Sreeshaila Doddamani
ಶಬ್ದಾರ್ಥಗಳು ಅಂತುಟ = ಹಾಗೆ; ಒಕುದ = ; ಕರ್ತ = ; ಗಣಂಗಳು = ; ತೊತ್ತು = ; ಸಲಹು = ; ಸಾಮಿಪ್ಯ = ; ಸಾಯುಜ್ಯ = ; ಸಾರೂಪ್ಯ = ; ಸಾಲೋಕ್ಯ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರಿಗೆ ಶಿವನು ಒಂದು ತಾತ್ವಿಕ ಸತ್ಯವಷ್ಟೆ-ಅವರಿಗೆ ಗಟ್ಟಿಮುಟ್ಟಾದ ಸತ್ಯಗಳೆಂದರೆ (ಭಕ್ತ-ಜಂಗಮ ಮತ್ತು) ಶರಣರಷ್ಟೆ-ಎಂಬುದಾಗಿ 444ನೇ ವಚನದ ವ್ಯಾಖ್ಯಾನದಲ್ಲಿ ನಿರ್ಣಯಿಸಲಾಗಿದೆ. ಅದೇ ನಿರ್ಣಯಕ್ಕೆ ಒತ್ತನ್ನು ಕೊಡುವುದು ಈ ವಚನ ಕೂಡ. ಅವರ ಮಾತು ಇದು : ಗಣಂ(ಶರಣರು)ಗಳೇ ನನಗೆ ಒಡೆಯರು, ಅವರೇ ನನ್ನನ್ನು ತಮ್ಮ ಗುಲಾಮನನ್ನಾಗಿ ಮಾಡಿಕೊಂಡು ಸಲಹುತ್ತಿರುವರು. ಹೀಗೆ ಶರಣರಿಗೆ ಗುಲಾಮನಾಗಿರುವುದರಿಂದ ಯಾವ ಆನಂದ ನನ್ನದಾಗಿದೆಯೋ-ಆ ಆನಂದವು-ನಾನು ಕೈಲಾಸಕ್ಕೆ ಹೋಗಿ ಸಾಕ್ಷಾತ್ ಶಿವನನ್ನು ಕಣ್ಣಿಂದ ಕಂಡರೂ, ಅವನ ಸಮೀಪದಲ್ಲಿಯೇ ಇದ್ದರೂ, ಅವನ ರೂಪವನ್ನೇ ಧರಿಸಿ ಅವನಂತೆಯೇ ಆದರೂ, ಅವನಲ್ಲಿಯೇ ಲೀನವಾದರೂ-ನನಗಾಗುವುದಿಲ್ಲ. ಶಿವಶರಣರು ನನ್ನನ್ನು ವಾತ್ಸಲ್ಯದಿಂದ ಬಳಿಗೆ ಕರೆದು ತಮ್ಮ ಪ್ರಸಾದದ ತುತ್ತನ್ನಿಕ್ಕಿದಾಗ ನನಗಾಗುವ ಶಿವಾನಂದ ಮತ್ತಾವುದರಿಂದಲೂ ಆಗುವುದಿಲ್ಲ-ಎನ್ನುವರು ಬಸವಣ್ಣನವರು. ಕಾಣದ ಶಿವನನ್ನು ಕಂಡೆನೆಂಬುದರಲ್ಲಿ ಅವರಿಗೆ ಅದ್ಭುತವಿಲ್ಲ-ಕಂಡ ಶರಣರನ್ನು ವಿನಯದಿಂದ ಕಂಡು-ಅವರ ಇರಾದೆಯಂತೆ ಲೋಕಸೇವೆ ಮಾಡಿ-ಅವರ ಪ್ರಸಾದಕ್ಕೆ ಪಾತ್ರನಾಗುವುದೇ ಅದ್ಭುತಕ್ಕೆ ಅದ್ಭುತ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು