ಭಕ್ತನ ಪ್ರಾಣಲಿಂಗಿ ಸ್ಥಲ - ದೇವರು
ತೊತ್ತಿಂಗೆ ಬಲ್ಲಹನೊಲಿದರೆ ಪದವಿಯ ಮಾಡದೆ ಮಾಣ್ಬನೆ?
ಜೇಡರ ದಾಸಯ್ಯಂಗೊಲಿದಾತ ಮತ್ತೊಬ್ಬ ದೇವನೆ, ಅಯ್ಯಾ?
ಮಾದಾರ ಚೆನ್ನಯ್ಯಂಗೆ, ಡೋಹಾರ ಕಕ್ಕಯ್ಯಂಗೆ,
ತೆಲುಗ ಜೊಮ್ಮಯ್ಯಂಗೆ ಒಲಿದಾತ ಮತ್ತೊಬ್ಬ ದೇವನೆ, ಅಯ್ಯಾ?
ಎನ್ನ ಮನದ ಪಂಚೇಂದ್ರಿಯ ನಿಮ್ಮತ್ತಲಾದರೆ
ತನ್ನತ್ತ ಮಾಡುವ ಕೂಡಲಸಂಗಯ್ಯ.
Transliteration Tottiṅge ballahanolidare padaviya māḍade māṇbane?
Jēḍara dāsayyaṅgolidāta mattobba dēvane, ayyā?
Mādāra cennayyaṅge, ḍ'̔ōhara kakkayyaṅge,
teluga jom'mayyaṅge olidāta mattobba dēvane, ayyā?
Enna manada pan̄cēndriya nim'mattalādare
tannatta māḍuva kūḍalasaṅgayya.
Manuscript
English Translation 2 Should a master love his slave,
He cannot fail to honour him:
Is He who loved Dāsa the weaver
Another God?
Is He who loved Cennayya the pariah
Another God? Or He that loved
Kakkayya the tanner, or
Teluga Jommayya?
If the five senses of my mind
Sway towards Thee,Lord Kūḍala Saṅga
Will draw me to Himself.
Translated by: L M A Menezes, S M Angadi
Hindi Translation सेवक पर स्वामी प्रसन्न हो
तो उसे उत्तम पद देना छोड देगा?
जुलाहा दासय्या पर प्रसन्न होनेवाला
कोई अन्य देव था ?
मातंग चन्नय्या डोम कक्कय्य
और तेलुगु जोमय्या पर
प्रसन्न होनेवाला कोई अन्य देव था?
मेरे मन के पंचेंद्रिय त्वल्लीन हो
तो कूडलसंगमदेव अपनायेंगे ॥
Translated by: Banakara K Gowdappa
Telugu Translation స్వామి మెచ్చిన తొ త్తుకు పదవి నీయకమానునే?
దేడర దాసయ్యను మెచ్చినవాడు ‘వేరొక దేవుడే!
డోహర కక్కయ్యను; మాదర చెన్నయ్యను
తెలుగు జోమ్మయ్యను వలచువాడు వేరొక్కడే?
నా మనో పంచేంద్రియములు నీకడనిల్చిన
నీ యంతవానిని చేయవే కూడల సంగమదేవా!
Translated by: Dr. Badala Ramaiah
Tamil Translation தொண்டனுக்கு உடையன் அருளின் பதவியை
அளிக்காமல் இருப்பானோ?
தாசிமய்யனுக்கு அருளியோன், வேறொரு கடவுளோ?
சக்கிலி சென்னய்யனுக்கு சண்டாளன் கக்கய்யனுக்கு
தெலுங்கு பொம்மய்யனுக்கு அருளியோன்
வேறொரு கடவுளோ ஐயனே? என் மனமும்
ஐம்புலன்களும் உங்களைச் சார்தர
அவனைப் போலச் செய்வான் கூடல சங்கமதேவன்
Translated by: Smt. Kalyani Venkataraman, Chennai
Marathi Translation
सेवकावर मालक प्रसन्न होऊन पदवी देणार नाही का?
जेडर दासिमय्यावर प्रसन्न होणारे देव दुसरे आहेत का ?
मादार चन्नय्याला, डोहर कक्कय्याला,
तेलगू जोम्मय्यला प्रसन्न झालेले देव दुसरे आहेत का देवा ?
माझ्या मनाची पंचेद्रिये तुमच्याकडे ओढून घेतली तर
कूडलसंगम त्याच्याकडे ओढून घेतील.
Translated by Shalini Sreeshaila Doddamani
ಶಬ್ದಾರ್ಥಗಳು ತೋತ್ತು = ; ಮಾಣ್ಬು = ;
ಕನ್ನಡ ವ್ಯಾಖ್ಯಾನ ಬಲ್ಲಹ<ವಲ್ಲಭನೆಂದರೆ ರಾಜ. ಆ ರಾಜನೊಲಿದರೆ ಅವನ ಗುಲಾಮನಿಗೇನು ಕೊರತೆ? ಇವನಿಗೆ ಅವನು ಬೇಕಾದ ಪದವಿಯನ್ನು ಕೊಡುವನು ಸಂಶಯವಿಲ್ಲ. ಹಾಗೆಯೇ ನನ್ನ ವಲ್ಲಭನಾದ ಶಿವನು-ಅವನ ಗುಲಾಮನಾದ ನನಗೂ ಒಲಿಯುವನು. ಹಿಂದೆ ಮಾದಾರ ಚೆನ್ನಯ್ಯನಿಗೆ ಡೋಹಾರ ಕಕ್ಕಯ್ಯನಿಗೆ ತೆಲುಗ ಜೊಮ್ಮಯ್ಯನಿಗೆ ಒಲಿದ ಶಿವನು ನನಗೆ ಒಲಿಯುವುದರಲ್ಲಿ ಸಂಶಯವೇನು ? ಆ ನನ್ನ ಅಂತರಂಗದ ರಾಜನಾದ ಶಿವನಿಗೇ ಅಲ್ಲವೆ ಮಾದಾರ ಚೆನ್ನಯ್ಯ ಮುಂತಾದವರಂತೆ ನಾನು ಗುಲಾಮನಾಗಿರುವುದು? ನನ್ನ ಬ್ರಾಹ್ಮಣಿಕೆಯನ್ನು ನಾನು ಮೊದಲೇ ನಿರಾಕರಿಸಿಕೊಂಡಿರುವೆನಲ್ಲಾ? ಮಾದಾರ ಚೆನ್ನಯ್ಯ ಮುಂತಾದ ದಲಿತರೇ ನನ್ನ ತಂದೆ ತಾತ ಮುತ್ತಾತನೆಂದು ಘೋಷಿಸಿಕೊಂಡಿರುವೆನಲ್ಲಾ ?! ಇನ್ನು ನನ್ನ ಕಣ್ಣು ನಾಲಗೆ ಕಿವಿ ಮೂಗು ಸ್ಪರ್ಶ ಎಂಬ ಪಂಚೇಂದ್ರಿಯಗಳು ಶಿವಪ್ರಪಂಚದಲ್ಲಿ ವ್ಯವಹರಿಸಿತೊಡಗಿದರೆ ಸಾಕು-ಶಿವನು ನನಗೊಲಿಯುವುದರಲ್ಲಿ ಸಂಶಯವಿಲ್ಲವೆನ್ನುತ್ತ ಬಸವಣ್ಣನವರು ಸಡಗರಪಡುತ್ತಿರುವರು.
ವಿ: ತೆಲುಗು ಜೊಮ್ಮಯ್ಯನು ಒಂದು ಕಾಲಕ್ಕೆ ಕಲ್ಯಾಣದ ಪೆರ್ಮಾಡಿ ಎಂಬ ರಾಜನ ಸಾಮಂತನಾಗಿದ್ದನು. ಆ ರಾಜನ ಹೆಂಡತಿ ಲಕುಮಾದೇವಿಯು ಶಿವಭಕ್ತೆ ಮತ್ತು ಜೊಮ್ಮಯ್ಯನ ಶಿಷ್ಯಳೇ ಆಗಿದ್ದಳು. ಈ ಜೊಮ್ಮಯ್ಯನಿಗೆ ರಾಜನು ಮೆಚ್ಚಿ ಕಲ್ಯಾಣಕ್ಕೆ ಒಂದು ಯೋಜನ ದೂರದಲ್ಲಿ ಒಂದು ಶಿವಪುರವನ್ನು ಕಟ್ಟಿಸಿಕೊಡುವನು. ಜೊಮ್ಮಯ್ಯನು ಅದೇ ಶಿವಪುರದಲ್ಲಿದ್ದಾಗ ಕೊಂಡಗುಳಿ ಕೇಶಿರಾಜನೆಂಬ ಮಹಾಶಿವಭಕ್ತನು ಅವನ ದರ್ಶನ ಪಡೆಯಲು ಅಲ್ಲಿಗೆ ಬರುವನು. ತೆಲುಗ ಜೊಮ್ಮಯ್ಯನೊಬ್ಬ ಬೇಡನೆಂಬುದನ್ನು ತಿಳಿದು ಮೊದಲಿಗೆ ಅಸಹ್ಯಪಟ್ಟನಾದರೂ-ಅವನ ಮಹಿಮೆಯನ್ನು ಕಂಡು ತಲೆಬಾಗುವನು. ಈ ಜೊಮ್ಮಯ್ಯನ ಆರಾಧ್ಯದೈವ ಭೀಮನಾಥನೆಂದು. ಆ ದೈವದ ಆ ಹೆಸರೇ ಅವನು ಬರೆದ ವಚನಗಳ ಅಂಕಿತವೂ ಆಗಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು