ಭಕ್ತನ ಪ್ರಾಣಲಿಂಗಿ ಸ್ಥಲ - ವಿಭೂತಿ
ಹೊರಗೆ ಹೂಸಿ ಏವೆನಯ್ಯಾ,
ಒಳಗೆ ಶುದ್ಧವಾಗದನ್ನಕ್ಕ?
ಮಣಿಯ ಕಟ್ಟಿ ಏವೆನಯ್ಯಾ.
ಮನ ಮುಟ್ಟದನ್ನಕ್ಕ?
ನೂರನೋದಿ ಏವೆನಯ್ಯಾ,
ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?
Transliteration Horage hūsi ēvenayyā,
oḷage śud'dhavāgadannakka?
Maṇiya kaṭṭi ēvenayyā.
Mana muṭṭadannakka?
Nūranōdi ēvenayyā,
nam'ma kūḍasaṅgamadēvara manamuṭṭi neneyadannakka?
Manuscript
English Translation 2 Unless I am pure within,
How should I fare
By smearing my outside?
Unless my heart is touched,
How should I fare
By wearing beads?
Unless I love
Lord Kūḍala Saṅgama
With heartfelt love,
How Should I fare
Reading a thousand books?
Translated by: L M A Menezes, S M Angadi
Hindi Translation अंतःशुद्धि न होने तक
बाह्य को पोतकर क्या करूँगा?
मनोगत न होने तक
मणियाँ बाँधकर क्या करूँगा?
मम कूडलसंगमदेव का मनसा स्मरण न करने तक
सैकडों पुस्तकें पढकर क्या करूँगा?
Translated by: Banakara K Gowdappa
Telugu Translation పై పై బూతల ఫలమేమయ్యా
లోన శుచి లేనంతదాక!
మణులు గట్ట ఫలము లేదయ్యా
మది ముట్టనందాక?
నూఱు చదువ ఫలమేమయ్యా?
మా కూడల సంగమదేవుని మదిముట్ట తలచనందాక?
Translated by: Dr. Badala Ramaiah
Tamil Translation புறத்திலே பூசி என்ன செய்வது ஐயனே?
அகத்திலே தூய்மை இல்லாத பொழுது
மணியைக் கட்டி என்ன செய்வது ஐயனே?
மனம் நிறையாத வரையில்
நம் கூடல சங்கமதேவனை மனம் நிறைந்து
நினையாதவரையில் ஐயனே!
Translated by: Smt. Kalyani Venkataraman, Chennai
Marathi Translation
हृदय शुद्ध नाही, भाळी भस्म लावी
काय ते प्रभावी, भक्ती होय
मनापासुनिया, न करी शिवस्मरण
ते रुद्राक्ष धारण, दंभाचार
कूडलसंगमदेव न करी तव स्मरण
कोटी ग्रंथ पठण, काय कीजे ?
अर्थ - परमेश्वराची भक्ती तन, मन व धन-संपत्ती अर्पणानेच केली जावू शकते. हाच अंतरंग शुद्ध करून घेण्याचा मार्ग होय. आणि अशा तऱ्हेने ज्यांचे अंतरंग शुद्ध नाही त्यांनी कपाळावर विभूति भस्म लावून काय उपयोग ? आणि अशानी गळ्यात रुद्राक्ष माळा घालूनही व्यर्थ होय. नव्हे तो त्यांचा निव्वळ दंभाचार होय. हे कूडलसंगमदेवा ! ( परशिव ) तुझे स्मरण न करणारे कोटी ग्रंथ वाचून काय उपयोग ? अशांचे पठणही व्यर्थ आणि अशांचे जीवनहि व्यर्थ होय.
Translated by Rajendra Jirobe, Published by V B Patil, Hirabaug, Chembur, Mumbai, 1983
बाहेर विभूती लावून काय लाभ, आत शुध्द नसेल तर?
रुद्राक्ष धारण करुन काय लाभ,
मन स्मरण करीत नसेल तर
शेकडो ग्रंथ वाचून काय लाभ?
आमच्या कूडलसंगमदेवाचे स्मरण मनाने करेपर्यंत ?
Translated by Shalini Sreeshaila Doddamani
ಶಬ್ದಾರ್ಥಗಳು ಏವೆನಯ್ಯ = ; ನೆನೆ = ; ಮಣಿ = ; ಹೂಸಿ = ;
ಕನ್ನಡ ವ್ಯಾಖ್ಯಾನ ಅಂತರಂಗ ಶುದ್ಧವಿದ್ದವರೇ ಮೈಗೆ ವಿಭೂತಿ ಧರಿಸಬೇಕು-ಇಲ್ಲದಿದ್ದರದು ಸ್ಮಶಾನಕ್ಕೆ ಸೂಚನೆಯಾಗುವುದು, ಒಳ್ಳೆಯದು ಮನಸ್ಸಿಗೆ ಥಟ್ಟನೆ ತಟ್ಟುವುದಾದರೆ ರುದ್ರಾಕ್ಷಿಯನ್ನು ಕಟ್ಟಬೇಕು-ಇಲ್ಲದಿದ್ದರದು ಮರಗಟ್ಟಿದ ಹೃದಯಕ್ಕೆ ಸೂಚನೆಯಾಗುವುದು, ದೇವರನ್ನು ಮನಃಪೂರ್ವಕವಾಗಿ ನೆನೆಯುವುದಾದರೆ ದೇವರನ್ನು ಕುರಿತ ನೂರು ಗ್ರಂಥಗಳನ್ನು ಓದಬೇಕು-ಇಲ್ಲದಿದ್ದರದು ಬರಲಿರುವ ಕಾಲವ್ಯಾಘ್ರನಿಗೆ ಕೊಟ್ಟ ಕರೆಯಾಗುವುದು. ಅಂತರಂಗ ಶುದ್ದಿ-ಅರಿವು ಶಿವಧ್ಯಾನವಿದ್ದರೆ ಪೂಸು-ಕಟ್ಟು-ಓದು. ಇಲ್ಲಿದಿದ್ದರೆ ನಾಸ್ತಿಕರೆಲ್ಲರಂತೆ ಸುಮ್ಮನಿರು-ಭಕ್ತರಂತೆ ನಟಿಸಬೇಡ-ಎಂದು ತಮಗೆ ತಾವೇ ಎಚ್ಚರಿಸಿಕೊಳ್ಳುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು