•  
  •  
  •  
  •  
Index   ವಚನ - 478    Search  
 
ಭಕ್ತನ ಪ್ರಾಣಲಿಂಗಿ ಸ್ಥಲ - ಮನೋವಿಕಾರ
ಸುಚಿತ್ತದಿಂದಲೆನ್ನ ಮನವು ನಿಮ್ಮ ನೆನೆಯಲೊಲ್ಲದು: ಎಂತಯ್ಯಾ? ಎನಗಿನ್ನಾವುದು ಗತಿ? ಎಂತಯ್ಯಾ? ಎನಗಿನ್ನಾವುದು ಮತಿ? ಎಂತಯ್ಯಾ? ಹರಹರಾ, ಕೂಡಲಸಂಗಮದೇವಾ, ಮನವ ಸಂತೈಸೆನ್ನಾ.
Transliteration Sucittadindalenna manavu nim'ma neneyalolladu: Entayyā? Enaginnāvudu gati? Entayyā? Enaginnāvudu mati? Entayyā? Haraharā, kūḍalasaṅgamadēvā, manava santaisenna.
Manuscript
English Translation 2 My mind remembers Thee not With a pure love: What shall I do? What is to be my fate: ah, what? What is to be my plight: ah, what? Great God, Kūḍala Saṅgama Lord. Shed peace upon my soul! Translated by: L M A Menezes, S M Angadi
Hindi Translation सुचित्त से तव स्मरण नहीं करता मेरा मन कैसे करूँ? मेरे लिए कौन सी गति है? कैसे करूँ? मेरे लिए कौन सी मति है? कैसे करूँ? हरहर कूडलसंगमदेव मेरे मन को सांत्वना दो ॥ Translated by: Banakara K Gowdappa
Telugu Translation మంచిగ నా మనసు నిన్ను స్మరియింపనొల్ల దెట్లయ్యా! ఇక గతి యేదయ్యా నాకు? ఇక మతి యేదయ్యా నాకు? హరహరా! మహాదేవా! నా మతి సంతృప్తి పొందింపరా! Translated by: Dr. Badala Ramaiah
Tamil Translation தூய நோக்கத்துடன் உம்மை நினைக்க விடுமோ இம்மனம்? எந்த வகையில் ஐயனே, எனக்கு இனி எது கதியோ? எந்த வகையில் ஐயனே, எனக்கு இது எது மதியோ? எந்த வகையில் ஐயனே, சிவனே, சிவனே, கூடல சங்கம தேவனே, என் மனத்தை அமைதியுறச் செய்வாய் ஐயனே. Translated by: Smt. Kalyani Venkataraman, Chennai
Marathi Translation सुचित्ताने तुमचे स्मरण करु देत नाही मन. आता कसे होणार ? मला आता गती कोणती ? आता कसे होणार ? मला आता मती कोणती ? आता कसे होणार? हरहरा कूडलसंगमदेवा, माझ्या मनाचे सांत्वन करावे. Translated by Shalini Sreeshaila Doddamani
ಶಬ್ದಾರ್ಥಗಳು ಗತಿ = ; ಮತಿ = ; ಸಂತೈಸು = ; ಸುಚಿತ್ರ = ; ಹರ = ;
ಕನ್ನಡ ವ್ಯಾಖ್ಯಾನ ದೇವರ ಧ್ಯಾನಕ್ಕೆ ಒಗ್ಗದ ತಮ್ಮ ಮನಸ್ಸಿನ ಮೊಂಡುತನವನ್ನು ಕುರಿತು ಬಸವಣ್ಣನವರು ದಿಕ್ಕು ತಪ್ಪಿರುವರು. ತಮ್ಮ ಮನಸ್ಸು ಶಿವಕ್ಕೆ ವಿಮುಖವಾದರೆ ಗತಿಯೇನೆಂದು ಚಿಂತಾಕ್ರಾಂತರಾಗಿರುವರು. ಮನಸ್ಸು ಹತೋಟಿಮೀರಿ ಹೋದಾಗ-ಅದನ್ನು ಸಮಾಧಾನಪಡಿಸಬಲ್ಲ ದೇವರಿಗಲ್ಲದೆ ಮತ್ತಾರಿಗೆ ಮೊರೆಯಿಡುವುದು ? ಆದ್ದರಿಂದ ತಮ್ಮ ಮನಸ್ಸನ್ನು ರಮಿಸಿ ತನ್ನತ್ತ ಮಾಡಿಕೊಳ್ಳೆಂದು ಬಸವಣ್ಣನವರು ಶಿವನಿಗೆ ಮೊರೆಯಿಡುತ್ತಿರುವರು. ಈ ಮನಸ್ಸು ನಮ್ಮದೆಂಬುದಾದರೂ-ಅದನ್ನು ಕೊಟ್ಟವನು ಶಿವನೇ-ಆದ್ದರಿಂದ ಅದು ದಿಕ್ಕುತಪ್ಪಿದಾಗ ಸರಿದಾರಿಗೆ ತರಬೇಕಾದವನೂ ಅವನೇ ಅಲ್ಲವೆ ? ಇರುವೊಬ್ಬ ಮಗನೂ ತಂದೆಯನ್ನು ಪುರಸ್ಕರಿಸದೆ ಮೀರಿ ನಡೆಯುತ್ತಿರುವನಾದರೆ-ತಾಯಿ ನನಗಿನ್ನೇನು ಗತಿಯೆಂದು ದೇವರಲ್ಲಿ ಮೊರೆಯಿಟ್ಟು. ಆ ಮಗನನ್ನು ತನ್ನತ್ತ ಮಾಡಿಕೊಡೆಂದೆನ್ನುವ ಧಾಟಿಯಲ್ಲಿದೆ ಈ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು