•  
  •  
  •  
  •  
Index   ವಚನ - 479    Search  
 
ಭಕ್ತನ ಪ್ರಾಣಲಿಂಗಿ ಸ್ಥಲ - ಮೂಢತೆ
ಅಷ್ಟದಳ ಕಮಲವ ಸುತ್ತುವ ಜೀವಾತ್ಮನ ಮೆಟ್ಟಿದ ದಳವನರಿಯದೆ, ಆನು ಭಕ್ತನೆಂತೆಂಬೆ ಆನು ಶರಣನೆಂತೆಂಬೆ ಆನು ಲಿಂಗೈಕ್ಯನೆಂತೆಂಬೆ, ಕೂಡಲಸಂಗಮದೇವಾ, ಎನ್ನ ಮನ ಸಮಾಧಾನವಾಗದನ್ನಕ್ಕ?
Transliteration Aṣṭadaḷa kamalava suttuva jīvātmana meṭṭida daḷavanariyade, ānu bhaktanentembe ānu śaraṇanentembe ānu liṅgaikyanentembe, kūḍalasaṅgamadēvā, enna mana sumanavāgadannakka?
Manuscript
Music Courtesy:
English Translation 2 In ignorance of the power That has trampled on my soul Which round the eight-leaved lotus flits, How can I claim to be A devotee? How can I claim to be A Śaraṇa ? How can I claim The consubstantial unity With God, unless, O Kūḍala Saṅgama Lord, My spirit is serene? Translated by: L M A Menezes, S M Angadi
Hindi Translation अष्टदल कमल का परिक्रामक जीवात्मा को कुचले हुए दल को न जानने पर अपने को भक्त कैसे कहूँ? अपने को शरण कैसे कहूँ? अपने को “लिंगैक्य” कैसे कहूँ? मेरा मन शांत न होने तक कूडलसंगमदेव। Translated by: Banakara K Gowdappa
Telugu Translation అష్టదళకమలము జుట్టుచు జీవాత్ముడు దొక్కెడి దళము తెలియకున్న నేనెట్టి భక్తుడయ్యా? నేనెట్టి శరణుడయ్యా లింగై క్యుడగుట నే నెట్ల య్యా? సంగా నా మది కుదుటబడకుండెనేని Translated by: Dr. Badala Ramaiah
Tamil Translation எட்டு தள தாமரையைச் சுற்றும் ஜீவான்மாவை அடையும் தளத்தை அறியாமல் நான் எங்ஙனம் பக்தனாவேன்? நான் எங்ஙனம் சரணனாவேன்? நான் இலிங்கத்துடனொன்றியவனாவேன்? கூடல சங்கம தேவனே, எம்மனம் அமைதியை எய்தும் வரையில் ஐயனே. Translated by: Smt. Kalyani Venkataraman, Chennai
Marathi Translation अष्टदल कमळाभोवती फिरतो जीवात्मा कोणत्या दलावर आपण विराजमान आहे हे जाणत नाही. मी कसला भक्त ? मी कसला शरण ? मी कसला लिंगैक्य ? कूडलसंगमदेवा माझ्या मनाचे समाधान होईपर्यंत ? Translated by Shalini Sreeshaila Doddamani
ಶಬ್ದಾರ್ಥಗಳು ಎಂತೆಂಬೆ = ; ಜೀವಾತ್ಮ = ;
ಕನ್ನಡ ವ್ಯಾಖ್ಯಾನ ಅಯ್ಯ, ಜೀವನು ಕರ್ಮವಶದಿಂದ ಈ ತನುಮಧ್ಯ ಕಮಲದಲ್ಲಿ ಸುಳಿದಾಡುವಾಗ-ಅವನಿಗೆ ಮನವೇ ರಥ, ಅದನ್ನು ಅವನು ಏರಿ-ದಿಕ್ಕಿಗೊಂದೊಂದರಂತೆ ಇರುವ ಆ ಕಮಲ ದಳಗಳ ಮೇಲೆ ಸಂಚರಿಸಿದಂತೆಲ್ಲಾ-ಆಯಾ ದಳಕ್ಕೆ ನಿಯುಕ್ತವಾದ ಫಲಗಳನ್ನು ಅನುಭವಿಸುತ್ತಿರುವನು. ಈ ಮುಂದಿನ ವೇದವಾಕ್ಯವನ್ನು ಗಮನಿಸು-“ಪೂರ್ವೇ ಭುಕ್ತಿಃ, ಕ್ಷುಧಾಗ್ನೇಯೇ, ಯಾಮೇ ಕೋಪಸ್ತು, ನೈರುತೇ | ಪಾಪಧೀ:, ವಾರುಣೇ ಲೀಲಾ, ವಾಯವ್ಯೇ ಗಮನಂ ತಥಾ | ಉತ್ತರೇ ಸುರತಂ ಚೈವ ಧನದಾನಂ ತಥಾಪರೇ” (2-4-3). ಹೀಗೆ ಜೀವನು ಮನದ ರಥವೇರಿ ಹೃದಯಪದ್ಮದ ಒಂದು ದಳದಿಂದ ಇನ್ನೊಂದು ದಳಕ್ಕೆ ಅಲೆಯುತ್ತಿದ್ದರೆ ಅಲ್ಲಲ್ಲಿಗೆ ಭುಕ್ತಿ ಕ್ಷುಧೆ ಕೋಪ ಪಾಪ ಲೀಲೆ ಗಮನ ಸುರತ ಧನದಾನ ಎಂಬ ಕರ್ಮಗಳನ್ನು ಅನುಭವಿಸುತ್ತಲೇ ಇರುವನು (2 4 4). ಹೀಗೆ ಈ ಕರ್ಮದ ದಳಗಳ ಮೇಲೆ ಸಂಚರಿಸುವುದನ್ನು ಬಿಟ್ಟು, ಅದೇ ಕಮಲದ ನಡುವಲಯ (ಕರ್ಣಿಕಾ)ಕ್ಕೆ ಕಾಲಿಟ್ಟು ನಿಂತರೆ-ಆ ಒಡನೆಯೇ ಅವನಿಗೆ ವಿರತಿ ಮತ್ತು ಜ್ಞಾನ ಉಂಟಾಗುವುದೆಂಬುದು ಶ್ರುತಿಸಿದ್ಧವಾದ ಮಾತು (2-4-5) ನೋಡಿ ನಿಜಗುಣ ಶಿವಯೋಗಿಯ ಅನುಭವಸಾರದ ಸರಳಾನುವಾದ ಡಾ. ಎಲ್. ಬಸವರಾಜು ಅವರಿಂದ. ಯೋಗಶಾಸ್ತ್ರದ ಪ್ರಕಾರ ಹೃದಯಸ್ಥಾನದಲ್ಲಿರುವುದು ಅನಾಹತ ಚಕ್ರ. ಆ ಸ್ಥಾನದ ಕಮಲದ ಹನ್ನೆರಡು ದಳಗಳಲ್ಲಿ ಎಂಟು ದಳ ಅಧೋಮುಖವಾಗಿರುವುದು. ಇನ್ನು ನಾಲ್ಕು ದಳ ಊರ್ಧ್ವಮುಖವಾಗಿರುವುದು. ಅಧೋಮುಖದಲ್ಲಿ ಜೀವನೂ ಊರ್ಧ್ವಮುಖದಲ್ಲಿ ಈಶ್ವರನೂ ಇರುವರೆಂಬುದು ಇನ್ನೊಂದು ಕಲ್ಪನೆ-“ದ್ವೌ ಸುಪರ್ಣೌ ಶರೀರೇಸ್ಮಿನ್ ಜೇವೇಶಾಖ್ಯೌ ಸಹಸ್ಥಿತೌ | ತಯೋರ್ಜೀವಃ ಫಲಂ ಭುಂಕ್ತೇ ಕರ್ಮಣೋ ನ ಮಹೇಶ್ವರಃ.” ಈ ಮುಂತಾದ ಯೋಗ ವಿಚಾರವನ್ನು ತಿಳಿಯದೆ ಯಾವನೂ ಭಕ್ತನೆನಿಸಲಾರ. ಮುಂದೆ ಶರಣನೆನಿಸಲಾರ. ಅಲ್ಲಿಂದ ಮುಂದೆ ಲಿಂಗೈಕ್ಯನೆನಿಸಲಾರ. ಈ ಭಕ್ತ-ಶರಣ-ಲಿಂಗೈಕ್ಯವೆಂಬ ಅಧಿಮಾನಸಸ್ಥಿತಿಗೇರಲು-ಮೂಲತಃ ಈ ಅಧೋಮನ ಊರ್ಧ್ವಮುಖವಾಗಿ ಸದಾಚಾರದಲ್ಲಿ ಪ್ರವೇಶಿಸಿ ಸಮಧಾತುಸ್ಥಿತಿಗೆ ಬರಬೇಕೆಂಬುದು ಈ ವಚನದ ಅಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು