ಭಕ್ತನ ಪ್ರಾಣಲಿಂಗಿ ಸ್ಥಲ - ಶರಣಾಗತಿ
ನಾ ನಿಮ್ಮ ನೆನೆವನು: ನೀವೆನ್ನನರಿಯಿರಿ;
ನಾ ನಿಮ್ಮನೋಲೈಸುವೆನು; ನೀವೆನ್ನ ಕಾಣಿರಿ.
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ?
ಕೂಡಲಸಂಗಮದೇವಾ,
ಎನಗೆ ನೀನೇ ಪ್ರಾಣ ಗತಿ-ಮತಿ ನೋಡಯ್ಯಾ!
Transliteration Nā nim'ma nenevanu: Nīvennanayiri;
nā nim'manōlaisuvenu; nīvenna kāṇiri.
Nānentu badukuvenentu jīvisuvenayyā?
Kūḍalasaṅgamadēvā,
enage nīnē prāṇa gati-mati nōḍayyā!
Manuscript
English Translation 2 I call upon Thee, but Thou know'st me not;
I drudge for Thee: Thou see'st me not...
How can I live, Lord, how survive?
Thou only, Kūḍala Saṅgama Lord,
Art to me life, art ground and goal!
Translated by: L M A Menezes, S M Angadi
Hindi Translation मैं तव स्मरण करता हूँ
तुम मुझे नहीं जानते।
मैं तव सेवा करता हूँ
तुम मुझे नहीं देखते ।
कैसे निर्वाह करुँ कैसे जीऊँ?
मेरे प्राण, गति, मति तुम ही हो
कूडलसंगमदेव॥
Translated by: Banakara K Gowdappa
Telugu Translation నేనేమో నిన్ను దలతు
నీవుమాత్రము నన్ను చూడవు
ఇక బ్రతుకు దెట్లయ్య? నే జీవించుటెట్ల య్య?
నాకు నీవే గతి మతి ప్రాణమయ్యా.
Translated by: Dr. Badala Ramaiah
Tamil Translation நான் உம்மை நினைவேன். நீர் என்னை அறியீர்
நான் உமக்குத் தொண்டு புரிவேன் நீர் என்னைக் காணீர்
நான் எப்படி வாழ்வேன், எப்படி வாழ்வேன்
ஐயனே, கூடல சங்கம தேவனே.
Translated by: Smt. Kalyani Venkataraman, Chennai
Marathi Translation
मी तुमचे स्मरण करतो, तुम्ही मला ओळखत नाही.
मी तुमची सेवा करतो. तुम्ही मला पहात नाही.
मी कसा जीवंत राहू? मी कसा जगू देवा?
कूडलसंगमदेवा, मला तुम्ही प्राण, गती, मती आहे पहा.
Translated by Shalini Sreeshaila Doddamani
ಶಬ್ದಾರ್ಥಗಳು ಓಲೈಸು = ; ಗತಿ = ; ಮತಿ = ;
ಕನ್ನಡ ವ್ಯಾಖ್ಯಾನ ಅನಾಥಳಾದವಳೊಬ್ಬಳು ತ್ರಿಲೋಕಸುಂದರಾಂಗನೊಬ್ಬನನ್ನು ಒಲಿದಿರುವಳೆಂದು ಭಾವಿಸೋಣ. ಅವಳು ಒಲಿದಿರುವುದು ಆತನಿಗೆ ತಿಳಿಯದೆಂದೂ ಭಾವಿಸೋಣ. ಆತ ಕಣ್ಮುಂದೆ ಸುಳಿದಾಗ ಪ್ರಾಣ ಕುತ್ತಿಗೆಗೆ ಬಂದಂತಾಗಿ ಅವಳಿಗೆ ಮಾತೂ ಹೊರಡದಾಗುತ್ತದೆ. ಆತ ಕಣ್ಮರೆಯಾದರೆ ಆಕೆ ಮೊರೆಯಿಡುತ್ತಾಳೆ-“ನಾ ನಿಮ್ಮ ನೆನೆವೆನು ನೀವೆನ್ನನರಿಯಿರಿ...ನಾನೆಂತು ಬದುಕುವೆನೆಂತು ಜೀವಿಸುವೆ”ನೆಂದು. ಅವಳ ಸ್ಥಿತಿಯಲ್ಲಿ ಬಸವಣ್ಣನವರಿದ್ದಾರೆ-ಅವಳ ಪ್ರಿಯತಮನ ಸ್ಥಾನದಲ್ಲಿ ಕೂಡಲಸಂಗಮದೇವರಿದ್ದಾರೆ. ಹೇಗೆ ತಾನೇ ಬಸವಣ್ಣನವರು ಬದುಕಿರಬಲ್ಲರು ? ಒಂದು ಗಂಡನ್ನು ಒಲಿಸುವುದಿಷ್ಟಾದರೆ-ಶಿವನನ್ನು ಒಲಿಸುವುದು ಸುಲಭವೆ-ಅವನ ಕೃಪೆಯಾಗದಿದ್ದರೆ ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು