•  
  •  
  •  
  •  
Index   ವಚನ - 481    Search  
 
ಭಕ್ತನ ಪ್ರಾಣಲಿಂಗಿ ಸ್ಥಲ - ಶರಣಾಗತಿ
ತಂದೆ ನೀನು, ತಾಯಿ ನೀನು; ಬಂಧು ನೀನು ಬಳಗ ನೀನು; ನೀನಲ್ಲದೆ ಮತ್ತಾರೂ ಇಲ್ಲಯ್ಯಾ! ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು!
Transliteration Tande nīnu, tāyi nīnu; bandhu nīnu baḷaga nīnu; nīnallade mattārū illayya! Kūḍalasaṅgamadēvā, hālalladdu, nīraladdu!
Manuscript
Music Courtesy: Vachana Sumana ℗ 2021 - Singer: Srinivasa and Nandini, Pebble Productions Music Publisher: Pebble Productions, Provided to YouTube by DMRS Ltd, Released on: 2008-07-15
English Translation 2 My father Thou, my mother too; Thou also all my kith and kin... Save Thou no kinderd is to me! O Kūḍala Saṅgama Lord, Do with me as thou please! Translated by: L M A Menezes, S M Angadi
Hindi Translation पिता तुम हो, माता तुम हो बंधु तुम हो, बाँधव तुम हो तुम्हारे सिवा मेरा कोई नहीं है; कूडलसंगमदेव मुझे दूध में डुबाओ या पानी में ॥ Translated by: Banakara K Gowdappa
Telugu Translation తల్లి వీవు; తండ్రి వీవు బంధువీవు; బలగమీవు నీవే దప్ప నిక యెవ్వరూ నాకు లేరయ్యా పాల ముంచినా నీట ముంచినా నీవే గతి నాకు సంగమదేవా! Translated by: Dr. Badala Ramaiah
Tamil Translation தந்தை நீ, தாய் நீ உறவினன் நீ, என் சுற்றத்தார் நீ நீரின்றி வேறு எவரும் இல்லை ஐயனே கூடல சங்கமதேவனே வாழ வைப்பாய், மடிய வைப்பாய் Translated by: Smt. Kalyani Venkataraman, Chennai
Marathi Translation तूच माझी माय तूच माझा बाप बंधूबांधव व्याप, तूच माझा तुझ्याविण कर्ता, अन्य नसे कोणी तुझिया चरणी लीन राहो कूडलसंगमदेवा! सुख अथवा दुःख दुग्ध पाणी देख, सम माते अर्थ – हे कूडलसंगमदेवा! तूच माझा माता, पिता, बंधू, आप्त नि सखा आहेस. तुझ्याशिवाय मला कोणीही नाही तू मला सुखात ठेव, दु:खात ठेव. त्याची मला खंत नाही. तू मला ज्या स्थितीत ठेवशील त्या स्थितीत समाधानाने राहीन. कारण माझे सर्वस्व तूच असल्याकारणारणाने सुख- दुःख मला समान आहेत. दुधाचे पाण्याचे नाते व गोत्र हे सर्व फोल आहे. कोणीही कुणाचा नाही. हा सर्व खेळ आहे त्या परमपित्याचा. Translated by Rajendra Jirobe, Published by V B Patil, Hirabaug, Chembur, Mumbai, 1983 पिता तुम्ही, माता तुम्ही, बंधू तुम्ही, बांधव तुम्ही, तुमच्याविना मला कोणी नाही देवा. कूडलसंगमदेवा, दूधात बुडवा नाही तर पाण्यात बुडवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ದೇವರೇ ಸರ್ವಸ್ವವು ಇದು ದೇವರಲ್ಲಿ ಮಾಡಿಕೊಂಡ ಭಕ್ತನ ಆತ್ಮಾರ್ಪಣಭಾವವನ್ನು ಪ್ರತಿ ಬಿಂಬಿಸುತ್ತದೆ. ಭಕ್ತನಾದವನು ತನ್ನನ್ನೇ ದೇವರಿಗೆ ಸಮರ್ಪಿಸಿಕೊಂಡಾಗ ಅವನಿಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ ದೇವರೇ. ನೀನಲ್ಲದೆ ಮತ್ತಾರೂ ಇಲ್ಲವಯ್ಯಾ, ಭಕ್ತನಿಗೆ ದೇವರನ್ನು ಬಿಟ್ಟರೆ ಅವನ ಸಂರಕ್ಷಕರನ್ನುವವರಾರೂ ಇಲ್ಲ. ದೇವರು ತನ್ನನ್ನು ಹಾಲಲ್ಲಾದರೂ ಅದ್ದಲಿ, ನೀರಲ್ಲಾದರೂ ಅದ್ದಲಿ ಎಂದು ಭಕ್ತ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ತನ್ನ ಆಪತ್ತು ಸುಖ-ದುಃಖಗಳ ಚಿಂತೆ ದೇವರದೇ ಹೊರತು ಭಕ್ತನದಲ್ಲ. ಹಾಗಾದಾಗ ಭಕ್ತನು ತಾಯಿಯ ರಕ್ಷಣೆಯಲ್ಲಿರುವ ಬೆಕ್ಕಿನ ಮರಿಯಂತೆ ನಿಶ್ಚಿಂತೆಯಿಂದ ಇರಬಹುದು. ಎಂದರೆ : ಬೆಕ್ಕಿನ ಮರಿ ನಡೆಯಲಾರದಷ್ಟು ಚಿಕ್ಕದಾಗಿ ಇನ್ನೂ ಕಣ್ಣು ಬಿಡದೆ ಇರುವಾಗ ಅದನ್ನು ಒಂದು ಕಡೆಯಿಂದ ಮತ್ತೊಂದು ಸುರಕ್ಷಿತ ಸ್ಥಳಕ್ಕೆ ತಾಯಿ ಬೆಕ್ಕೇ ಸಾಗಿಸುತ್ತಿರುತ್ತದೆ. ಆಗ ತನ್ನ ಮರಿಯನ್ನು ತಾನೇ ಅಪಾಯವಾಗದಂತೆ ಎಚ್ಚರಿಕೆಯಿಂದ ಕಚ್ಚಿಕೊಂಡು ಎಲ್ಲಿಯೂ ಎತ್ತಿಹಾಕದಂತೆ ನಡೆದು, ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಜೋಪಾನ ಮಾಡುತ್ತದೆ. ಆದರೆ ಕೋತಿಯ ಮರಿಯು ಚಿಕ್ಕದಾಗಿದ್ದಾಗ ಅದು ತನ್ನ ತಾಯಿಯ ಮೈಗೆ ಅಂಟಿಕೊಂಡು (ಅದರ ಶರೀರವನ್ನು ತಬ್ಬಿಕೊಂಡು) ಒಂದು ಕಡೆಯಿಂದ ಮತ್ತೊಂದುಕಡೆಗೆ ಹೋಗಬೇಕಾಗುತ್ತದೆ. ಎಂದರೆ ಮರಿಯು ತಾಯಿಯ ಶರೀರವನ್ನು ತಾನೇ ಬಿಗಿಯಾಗಿ ಹಿಡಿದುಕೊಂಡಿರುತ್ತದೆ. ಬೀಳದಂತೆ ಎಚ್ಚರಿಕೆವಹಿಸಬೇಕಾದ ಹೊಣೆ ಮರಿಯದೇ ಹೊರತು ತಾಯಿಯದಲ್ಲ. ಆದರೆ ಬೆಕ್ಕಿನ ಮರಿಯ ಹೊಣೆ ಏನೇನೂ ಇಲ್ಲ. ಅದಕ್ಕೆ ಬೇಕಾದ ಸಕಲ ರಕ್ಷಣಾ ವ್ಯವಸ್ಥೆಯನ್ನು ತಾಯಿ ಬೆಕ್ಕೇ ಮಾಡುತ್ತಿರುತ್ತದೆ. ‘ಹಾಲಲ್ಲಾದರೂ ಅದ್ದು ನೀರಲ್ಲಾದರೂ ಅದ್ದು’ ಎಂದು ದೇವರನ್ನು ಸಂಪೂರ್ಣವಾಗಿ ನಂಬಿರುವ ಭಕ್ತನು ನಿಶ್ಚಿಂತನಾಗಿದ್ದು ದೇವರ ರಕ್ಷಣೆಯಲ್ಲಿ ಕ್ಷೇಮವಾಗಿರಬಹುದು. - ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-367 

  Sun 10 Sep 2023  

 ಜಗತ್ತಿನಲ್ಲಿರುವ ಪ್ರತಿಯೊಂದು ಸಕಲ ಜೀವಿಗಳಿಗೂ ಜೀವ ನೀನು, ಶಕ್ತಿ ನೀನು
ಕೂಡಲಸಂಗಮದೇವ.
  ನಟರಾಜ T. S D.B.Halli