•  
  •  
  •  
  •  
Index   ವಚನ - 482    Search  
 
ಭಕ್ತನ ಪ್ರಾಣಲಿಂಗಿ ಸ್ಥಲ - ಶರಣಾಗತಿ
ಎನ್ನಾಪತ್ತು-ಸುಖ-ದುಃಖ ನೀನೇ, ಕಂಡಯ್ಯಾ; ಮತ್ತಾರೂ ಇಲ್ಲ: ಹರಹರಾ, ನೀನೇ ಕಂಡಯ್ಯಾ! ಎನ್ನ ಮಾತಾಪಿತರೂ ನೀನೇ ಕಂಡಯ್ಯಾ, ಕೂಡಲಸಂಗಮದೇವಾ.
Transliteration Enna āpattu-sukha-duḥkha nīnē, kaṇḍayyā; mattārū illa: Haraharā, nīnē kaṇḍayyā! Enna mātāpitarū nīne kaṇḍayya, kūḍasaṅgamadēvā.
Manuscript
English Translation 2 Look, Lord: Thou art my fortune-weal and woe! There is none else: Thou only art! My father and my mother Thou, O Kūḍala Saṅgama Lord! Translated by: L M A Menezes, S M Angadi
Hindi Translation मेरी आपदा, सुख-दुःख तुम ही हो और कोई नहीं, हर हर, तुम ही हो देव मेरे माता-पिता तुम ही हो कूडलसंगमदेव ॥ Translated by: Banakara K Gowdappa
Telugu Translation నా యాపత్సుఖ దుఃఖంబులు నీవేనయ్యా నా మాతాపితలు నీవేనయ్యా ఇక నా కెవ్వరూ లేరు లేరయ్యా హరహరా! కూడల సంగమదేవా! Translated by: Dr. Badala Ramaiah
Tamil Translation என் ஆபத்து, இன்ப துன்பம் நீயே காண் ஐயனே வேறு எவருமில்லை, சிவனே, சிவனே, நீயே காண் ஐயனே என் தாய் தந்தையும் நீயே காண் ஐயனே கூடல சங்கம தேவனே. Translated by: Smt. Kalyani Venkataraman, Chennai
Marathi Translation माता पिता बंधू माझे सोयरे धायरे हर हर तुम्ही एक कूडलसंगमदेवा माझी सुखदुःखे देवा संकटे आपत्ती हर हर तुम्ही एक कूडलसंगमदेवा अर्थ - हे कूडलसंगमदेवा ! माझी सुख दुःखे व माझा कर्ता हर्ता तूच आहेस. तसेच हरण करणारा तूच आहेस. तुझ्या शिवाय या जगात माझे कोणी नाही. म्हणून माझ्या सर्व समस्या तुझ्याच आहेत. असे समजून चिंतारहित होऊन मी माझे कर्तव्य करीत राहीन. Translated by Rajendra Jirobe, Published by V B Patil, Hirabaug, Chembur, Mumbai, 1983 माझे संकट, सुख दुःख तुम्हीच पहा. कोणी नाही, हरहरा तुम्हीच पहा देवा. माझे मातापिता तुम्हीच पहा देवा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಆಪತ್ತು = ಕಷ್ಟ; ಹರ = ;
ಕನ್ನಡ ವ್ಯಾಖ್ಯಾನ 8-10 ವರ್ಷದ ಬಾಲಕ ಬಸವಣ್ಣನವರು ಸ್ವಜನರೇ ತಮ್ಮನ್ನು ಕೊಲ್ಲುವರೆಂದು ತಿಳಿದಾಗ-ಮನೆ ಬಿಟ್ಟು ಓಡುತ್ತ-ದಾರಿಯಲ್ಲಿ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಯನ್ನು ಈಸಿ ದಾಟಿ-ಬೆನ್ನಟ್ಟಿ ಬರುತ್ತಿದ್ದ ಅಗ್ರಹಾರದ ಆ ಮಹಾಜನರಿಂದ ಪಾರಾದರು. ಕೂಡಲಸಂಗಮವನ್ನು ಸೇರಿ ಅಲ್ಲಿ ಈಶಾನದೇವರ ರಕ್ಷಣೆ ಪಡೆದರು. ಆಮೇಲೆ ಸಂಗಮೇಶ್ವರಲಿಂಗದ ಅರ್ಚಕರಾಗಿ ನೇಮಕವಾದ ಅವರು ಪೂಜಿಸುತ್ತ ಮಾಡಿದ ಒಂದು ಸ್ತೋತ್ರವಿರಬೇಕು ಈ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು