•  
  •  
  •  
  •  
Index   ವಚನ - 483    Search  
 
ಎನ್ನ ಜನ್ಮವ ತೊಡೆದ ನೀ ಧರ್ಮಿ, ಎನ್ನ ಜನ್ಮವನತಿಗಳೆದ ನೀಧರ್ಮಿ. ಎನ್ನ ಭವಬಂಧನವ ನಿಕರಿಸಿದೆಯಾಗಿ, ಶಿವನೇ ಗತಿಮತಿಯೆಂದು ನಂಬಿದೆನಯ್ಯಾ. ಎನ್ನ ಅಷ್ಟಮದಂಗಳ ಸುಟ್ಟುರುಹಿದೆಯಾಗಿ, ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ: ಸೃಷ್ಟಿಪ್ರತಿಪಾಲಕಾ, ನಿಮ್ಮ ನಂಬಿದೆ, ಕರುಣಿಸು, ಕೂಡಲಸಂಗಮದೇವಾ.
Transliteration Enna janmava toḍeda nī dharmi, enna janmavanatigaḷeda nīdharmi. Enna bhavabandhanava niścarisideyāgi, śivane gatimatiyendu nambidenayyā. Enna aṣṭamadaṅgaḷa suttuhideyāgi, kaṭṭugradinda nim'ma śrīcaraṇava kaṇḍe: Sr̥ṣṭipratipālakā, nim'ma nambike, karuṇisu, kūḍalasaṅgamadēvā.
Manuscript
English Translation 2 Compassionate one, effacer of my births, Compassionate one, destroyer of my births, When My life’s bondage ceased to be, Lord, I believed you are indeed Śiva – my ground and goal. Because you burnt my eightfold pride, I found your gracious feet with confidence Lord of Creation, I believe in you: Have mercy upon me, KudalaSangama Lord! Translated by: L M A Menezes, S M Angadi
Hindi Translation मम जन्म मिटानेवाले दयालु तुम हो, मम जन्म दूर करनेवाले दयालु तुम हो, तुमने मम भव-बंधन नष्ट किया, अतः मम विश्वास है, शिव ही मेरी गति-मति है। तुमने मम अष्टमदों को जला दिया अतः उग्र व्रत द्वारा भवदीय श्रीचरणों के दर्शन किये हे सृष्टिपालक तुम पर मेरा विश्वास है कृपा करो कूडलसंगमदेव ॥ Translated by: Banakara K Gowdappa
Telugu Translation జన్మ తొలచుమో స్వామీ! నా జన్మ నడగింపుమో దయామయా! నా భవబంధముల సడలింపుమో శివా! నీవే గతి మతియని నమ్మి తినయ్యా నా యష్టమదముల కాల్చి బూదిసేసి కట్టుగ్ర నియత నీచరణాల చూపుమా సృష్టి ప్రతిపాలక నిన్ను నమ్మితి కరుణింపుమో కూడల సంగమదేవా! Translated by: Dr. Badala Ramaiah
Tamil Translation என் பிறவியைத் துடைத்த நீ தர்மி என் பிறவியைக் களைந்த நீ தர்மி என் பிறவிப் பிணைப்பை அகற்றினை சிவனே கதி, மதி என்று நம்பினேன் ஐயனே என் எண்மதங்களைச் சுட்டு உருக்கியதால் மிக உக்கிரத்துடன் உம் திருவடிகளைக் கண்டேன் உலகைக் காப்பவனே, உம்மை நம்பினேன் அருள்வாய், கூடல சங்கமதேவனே. Translated by: Smt. Kalyani Venkataraman, Chennai
Marathi Translation माझ्या पूर्वजन्माचे भवबंधन नष्ट करणारे धर्मी. पूर्वजन्म बंधन तिरस्कारणारे सद्धर्मी. माझे भवबंधन धिक्कारल्याने शिवालाच गती मती मानले. माझे अष्ट मद जाळल्याने, माझ्या उग्र आचरणामुळे आपले श्रीदर्शन मज घडले. सृष्टी प्रतीपालक तुमच्यावर विश्वास ठेवला कृपा करावी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅತಿಗಳೆ = ಕಡೆಗಣಿಸು; ಅರುಹಿ = ತಿಳಿಸಿ; ಅಷ್ಟಮದ = ಎಂಟು ಮದಗಳು; ಉಗ್ರ = ; ಗತಿ = ; ತೋಡೆದ = ; ಧರ್ಮಿ = ; ನಿಃಕರಿಸು = ; ಭವಬಂಧನ = ; ಮತಿ = ;
ಕನ್ನಡ ವ್ಯಾಖ್ಯಾನ ಶಿವನು ತಮ್ಮ ಈ ಬ್ರಾಹ್ಮಣಜನ್ಮವನ್ನು ಬಿಡಿಸಿದಾಗ-ಬರಲಿರುವ ಜನ್ಮಾಂತರಗಳೂ ನೀಗಿ-ಇಡಿಯಾಗಿ ಅನಾದಿಕಾಲದಿಂದ ತೊಡರಿದ್ದ ಭವಬಂಧನವೆಲ್ಲ ಬಿಡುಗಡೆಯಾದಂಥ ಮುಕ್ತಭಾವ ಬಸವಣ್ಣನವರಿಗೆ ಬಂದಿತು. ಅಂದಿನಿಂದ-“ಎನ್ನ ಭವಬಂಧನವ ನೀಕರಿಸಿದೆಯಾಗಿ ಶಿವ ನೀ ಗತಿ”ಯೆಂದು ನಂಬಿದರು. ಬಸವಣ್ಣನವರು ಶಿವಧರ್ಮಕ್ಕೆ ಸೇರಲಾದರೂ ಇದ್ದ ಕಾರಣವೆಂದರೆ-ಅಲ್ಲಿ ಕುಲಮದಕ್ಕೆ ಆಸ್ಪದವಿಲ್ಲ. ಹಾಗೆಯೇ ಧನಮದ ವಿದ್ಯಾಮದ ಮುಂತಾದ ಸೊಕ್ಕಿನಿಂದ ಜನರನ್ನು ಶೋಷಿಸುವುದಿರಲಿಲ್ಲ. ಈ ಧರ್ಮವೊಂದು ಜನಪದರ ಧರ್ಮವಾಗಿ-ಆ ಜನಪದರಿಗಾಗಿಯೇ ಮಾದಾರಚೆನ್ನಯ್ಯ ಮುಂತಾದ ದಲಿತರು ಜನಪದ ಜಗದ್ಗುರುಗಳಾಗಿ ದುಡಿದರು. ಇಂಥ ಧರ್ಮದ ಪ್ರಭಾವಕ್ಕೆ ತಾವು ಒಳಗಾದುದರಿಂದ ತಮ್ಮಲ್ಲಿದ್ದ ಕುಲಮದ ಮುಂತಾದ ಹಲವು ಮದಗಳು ಲೋಕಪ್ರೇಮವಾಗಿ ಪರಿವರ್ತನೆಗೊಂಡವೆಂದು ಸಂತೋಷದಿಂದ ತಮ್ಮ ಕೃತಕೃತ್ಯತೆಯನ್ನು ಬಸವಣ್ಣನವರು ಈ ವಚನದಲ್ಲಿ ನಿವೇದಿಸಿಕೊಂಡಿರುವರು. ವಿ: ಕುಲಂ ಛಲಂ ಧನಂ ಚೈವ ರೂಪ ಯೌವನ ಮೇವ ಚ | ವಿದ್ಯಾ ರಾಜ್ಯಂ ತಪಶ್ಚೈವ ಏತೇ ಚಾಷ್ಟ ಮದಾ ಸ್ಮೃತಾಃ ||

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು