ಅಂಗೈಯೊಳಗಣ ಲಿಂಗವ ನೋಡುತ್ತ,
ಕಂಗಳು ಕಡೆಗೋಡಿವರಿವುತ್ತ ಸುರಿಯುತ್ತ ಎಂದಿಪ್ಪೆನೊ?
ನೋಟವೇ ಪ್ರಾಣವಾಗಿ ಎಂದಿಪ್ಪೆನೊ?
ಕೂಟವೇ ಪ್ರಾಣವಾಗಿ ಎಂದಿಪ್ಪೆನೊ
ಎನ್ನಂಗವಿಕಾರದ ಸಂಗವಳಿದು,
ಕೂಡಲಸಂಗಯ್ಯಾ, ಲಿಂಗಯ್ಯಾ, ʼಲಿಂಗ ಲಿಂಗ ಲಿಂಗʼವೆನ್ನುತ್ತಾ?
Transliteration Aṅgaiyoḷagaṇa liṅgava nōḍutta,
kaṅgaḷu kaḍegōḍivarivutta suriyutta endippenō?
Nōṭavē prāṇavāgi endippeno?
Kūṭavē prāṇavāgi endippeno
ennaṅgavikārada saṅgavaḷidu,
kūḍalasaṅgayya, liṅgayya, `liṅgaliṅgaliṅga’vennuttā?
Manuscript
English Translation 2 Oh, when shall I be
Gazing upon the Liṅga on the palm
And overflowing tears of joy
Shall pour down from my eyes?
When shall I have
My gaze become as breath;
When shall I have
My love become as breath;
Leaving the company
Of the passions of my flesh,
And saying, Kūḍala Saṅgama Lord,
O Liṅga Lord, O Liṅga, Liṅga, Liṅga?
Translated by: L M A Menezes, S M Angadi
Hindi Translation करस्थल का लिंग देखते
नेत्रों से आनंदाश्रु बरसाते कब रहूँगा?
कब दर्शन को ही प्राण मानूँगा?
कब मिलन को ही प्राण मानूँगा?
अपने अंग विकार का संग नष्ट कर
कब कूडलसंगमेश, लिंगदेव, लिंगप्रभु कहूँगा?
Translated by: Banakara K Gowdappa
Telugu Translation అరచేత శివలింగము జూచుచు
మొరవలె పార కన్గొలకుల నెప్పుడుందునో!
చూపులే ప్రాణమై యెప్పుడుందునో
కూటమియే ప్రాణమై యెప్పుడుందునో!
ఈ యంగవికారపు సంగ మడగ
సంగయ్యా! శివయ్యా ! శివా! శివా
శివా యనుచు నేనెప్పుడుందునో!
Translated by: Dr. Badala Ramaiah
Tamil Translation அங்கையிலுள்ள லிங்கத்தைக் கண்டவாறு
கண்களின் கடைக்கோடியில் வழியுமாறு என்றிருப்பேன்?
நோட்டமே உயிராகி என்றிருப்பேன்?
இணைதலே உயிராகி என்றிருப்பேன்?
உடல் மாறுபாடுகளின் தொடர்பின்றி
கூடல சங்கய்யனே, இலிங்கய்யனே
இலிங்கமே, இலிங்கமே என்று கூறியவாறு
என்று இருப்பேன் ஐயனே
Translated by: Smt. Kalyani Venkataraman, Chennai
Marathi Translation
तळहातीचे लिंग, पाहता पाहता
वाहतील कधी नाथा, आनंदाधु
कधी होईल माझी, प्राण रूप दृष्टी
लिंगैक्य सुख वृष्टी, कधी होय
अंग विकाराचा, संग सुटे कधी
तुटतील आधि-व्याधी, उपाधी त्या
कूडलसगमदेवा ! लिंग लिंगोच्चार
माझा नित्याचार, होई केव्हा
अर्थ - तळहातावर इष्टलिंग ठेऊन त्याकडे एकाग्रचित्ताने पाहत असता हे कूडलसंगमदेवा! (परशिवा) माझ्या डोळ्यातून आनंदाश्रू केव्हा वाहू लागतील? तुझ्यात समरस होण्याचा माझ्यातील हा भाव प्राणरूप कधी होईल? माझ्यातील षड्विकार केंव्हा जातील ? व माझे रोम रोम तूझे स्मरण कधी करतील ? याचाच ध्यास मला सदैव लागला आहे.
Translated by Rajendra Jirobe, Published by V B Patil, Hirabaug, Chembur, Mumbai, 1983
तळहातावरील लिंग पहात, नयनातून आनंदाश्रू वाहतील?
दृष्टीच प्राण कधी होईल? मिलनच प्राण कधी होईल ?
माझ्या अंगविकाराचा संग नष्ट होऊन
कूडलसंगमदेवा
लिंगदेव, लिंगदेवा म्हणणे कधी सुरु होईल
Translated by Shalini Sreeshaila Doddamani
ಶಬ್ದಾರ್ಥಗಳು ಕಂಗಳು = ; ಕಡೆಗೋಡಿ = ; ಕೂಟ = ; ವಿಕಾರ = ; ಸಂಗ = ;
ಕನ್ನಡ ವ್ಯಾಖ್ಯಾನ ಪದ್ಮಾಸನದಲ್ಲಿ ಬಸವಣ್ಣನವರು ಕುಳಿತಿದ್ದಾರೆ. ಅವರ ಅಂಗೈಯಲ್ಲಿ ಲಿಂಗ-ತಾವರೆಯಲ್ಲಿ ಭೃಂಗದಂತೆ ಮಿನುಗುತ್ತಿದೆ. ಆ ಲಿಂಗದ ಮೇಲೆ ಅವರ ಅರೆಮುಚ್ಚಿದ ಕಂಗಳ ದೃಷ್ಟಿ ಹೊಳೆಯುತ್ತಿದೆ. ಕಣ್ಣಂಚಿನಲ್ಲಿ ಆನಂದಬಾಷ್ಪ ಅಣಿಮುತ್ತಾಗಿ ಕೆನ್ನೆಯುದ್ದಕ್ಕೂ ಜಾರಿ-ಎದೆಯ ಮೇಲೆ ಬಿದ್ದು ನುಚ್ಚುಮುತ್ತಾಗುತ್ತಿದೆ. ಏನೊಂದರ ಪರಿವೆಯೂ ಇಲ್ಲದೆ ಬಸವಣ್ಣನವರು-ಆ ಲಿಂಗದಲ್ಲಿ ತಮ್ಮ ನಟ್ಟ ನೋಟ ತುಸು ಓಸರಿಸಿದರೂ ಪ್ರಾಣಸೂತ್ರ ಕಿತ್ತಂತಾಗಿ ಮರಳಿ ನಟ್ಟು ನೋಡುತ್ತಿರುವರು. ಆ ಶಿವಲೀನಭಾವದಲ್ಲಿ ತಾನಿಲ್ಲವಾಗಿ-ಲಿಂಗವೇ ಆಗಿರುವರು. ಎಚ್ಚತ್ತ ಮೇಲೆ ದೇಹಗುಣವೊಂದೂ ತೋರದೆ-ನಿರ್ದೇಹಿಯೆಂಬಂತೆ ಉಲ್ಲಾಸಗೊಂಡು-ಅದೇ ದಿವ್ಯಾನುಭವ ಮರಳಿ ಮರಳಿ ತಮಗಾಗಲೆಂದು ಅವರು ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವರು.
ವಿ: ಕಡೆಗೋಡಿವರಿ : ಕೆರೆತುಂಬಿ ಕೋಡಿಬಿದ್ದಂತೆ-ಕಣ್ಣೀರು ಕಣ್ಣಂಚಿನಿಂದ ಸುರಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು