•  
  •  
  •  
  •  
Index   ವಚನ - 487    Search  
 
ಭಕ್ತನ ಶರಣಸ್ಥಲ - ಪೂಜೆ
ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು, ಹಾಡಿ ನಾಲಿಗೆ ದಣಿಯದು: ಇನ್ನೇವೆನಿನ್ನೇವೆ? ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೆವೆ? ಕೂಡಲಸಂಗಮದೇವ ಕೇಳಯ್ಯಾ, ನಿಮ್ಮುದರವ ಬಗಿದಾನು ಹೋಗುವ ಭರವೆನಗೆ.
Transliteration Āḍi kālu daṇiyavu, nōḍi kaṇṇu daṇiyavu, hāḍi nālige daṇiyadu: Innēveninnēve? Nā nim'ma kaiyāre pūjisi manadaṇiyadinnēveninnēve? Kūḍalasaṅgamadēvā kēḷayya, nim'mudarava bagidanu hōguva bharavenage.
Manuscript
Music Courtesy: Provided to YouTube by Super Cassettes Industries Limited Manave Ninna Jananada, Bellava Thinda Kodagadanthe · Puttru Narsinha Nayak Vachana Vaibhava ℗ Super Cassettes Industries Limited Released on: 2001-02-09 Auto-generated by YouTube.
English Translation 2 Feet will dance, eyes will see, tongue will sing, and not find content. What else, what else shall I do? I worship with my hands, the heart is not content. What else shall I do? Listen, my lord, it isn't enough. I have it in me to cleave thy belly and enter thee O lord of the meeting rivers !

Translated by: A K Ramanujan
Book Name: Speaking Of Siva
Publisher: Penguin Books
----------------------------------
My legs tire not with dancing, My eyes tire not with gazing, My tongue tires not with singing: What else, what else? My heart tires not with worshipping Thee with full hands: What else, what else? Hark unto me, Kūḍala Saṅgama Lord, What I'd love most to do Is burst Thy belly and enter it! Translated by: L M A Menezes, S M Angadi

Hindi Translation नृत्य कर पैर नहीं थकते, दर्शन कर नेत्र नहीं थकते, गाकर जिह्ना नहीं थकती, क्या करूँ क्या करूँ? स्वहस्त से पूजा कर मन नहीं थकता, क्या करूँ क्या करूँ? सुनो कूडलसंगमदेव तव उदर चीरकर समा जाने की आतुरता है मुझे ॥ Translated by: Banakara K Gowdappa
Telugu Translation ఆడి కాళ్లు దనీయవు; చూచి కన్నులు దనియవు పాడి నాలుక దనియదు; ఏమందు నేమందు? నిను చేతులారా పూజించి మది దనియదు. ఏమందు నేమందునయ్యా, సంగయ్యా నీ పొట్ట చీల్చికొనిపోవుచుండె నా సంబరము వినవయ్యా! Translated by: Dr. Badala Ramaiah
Tamil Translation ஆடி கால் தணியாது, நோக்கிக் கண் தணியாது பாடி நாக்கு தணியாது. என் செய்வேன், என் செய்வேன் நான் உம்மைக் கை நிறைந்து பூசித்து மனம் நிறைய இன்னும் என் செய்வேன்? கூடல சங்கம தேவனே, கேளாய் ஐயனே உம் வயிற்றைக் கிழித்து உட்புகும் வேகம் என்னுடையதையனே. Translated by: Smt. Kalyani Venkataraman, Chennai
Marathi Translation खेळता खेळता, थकती न पाय नयना अपाय, थकवा न ये गीत गाता जिव्हे , कधी न ये थकवा काय करु देवा ऐसे झाले आनावर झाली, माझी ही इंद्रिये मन मिलनीये, चैतन्य ते आपुल्या हाताने, तुझी करी पूजा तल्लीन सहज, न ये थकवा कूडलसंगमदेव ! रिघो तुझे पोटी उल्हासाची दाटी, थोर झाली अर्थ - हे कूडलसंगमदेवा (परशिवा) तुझ्या स्मरणात बेभान होऊन कितीही खेळत राहिलो तरी माझे पाय थकले नाहीत. तुला पाहून माझे नयन थकले नाहीत. तुझे गुणगाण करुन माझी जिव्हा थकली नाही. तुझे स्मरण करुन माझे मन थकले नाही. तुझी पूजा करुन माझे हात थकले नाहीत. आणि आतील उत्साह देखील कमी झाला नाही. आता यापुढे काय करु? काहीच सुचेनासे झाले आहे. हे कूडलसंगमदेवा! (परशिवा) तुझ्या पोटात शिरून राहावे एवढा अदम्य उत्साह माझ्यात निर्माण झाला आहे. हे पाहून माझा मीच धन्य झालो असे वाटते. Translated by Rajendra Jirobe, Published by V B Patil, Hirabaug, Chembur, Mumbai, 1983 खेळून पाय दमत नाही, पाहून नयन थकत नाही. गाऊन जीभ थकत नाही, आता काय करु, काय करु? मी तुमची आपल्या हाताने पूजा करुन मन थकत नाही. आता काय करु? आता काय करु? कूडलसंगमदेवा ऐका, आपले उदर चिरुन घुसून जाण्याचा उत्साह माझ्यात आहे. Translated by Shalini Sreeshaila Doddamani
ಶಬ್ದಾರ್ಥಗಳು ಉದರ = ; ದಣಿವು = ; ಭರ = ; ಹೊಗು = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ಶಿವಪೂಜೆಗೆ ಮುನ್ನವೋ ಆಮೇಲೆಯೋ ಅಥವಾ ಆಗುವಾಗಲೇಯೋ ಕುಣಿಯುತ್ತಿದ್ದರು, ಹಾಡುತ್ತಿದ್ದರು, ಕುಣಿಯುತ್ತ ಹಾಡುತ್ತಿದ್ದರು. ಬಹುಶಃ ಲಿಂಗವನ್ನು ಕೈಯಲ್ಲಿಟ್ಟುಕೊಂಡೇ ಅದರತ್ತ ದೃಷ್ಟಿಯಾಡಿಸುತ್ತ ಹಾಡುತ್ತ ಕುಣಿಯುತ್ತಿದ್ದರು. ಆದರೆ ಅವರಿಗೆ ಅದೇನು ಭಕ್ತಿಯುನ್ಮಾದವೋ ಶಿವತನ್ಮಯವೋ ಕುಣಿದಷ್ಟೂ ಕಾಲು ಚಿಗಿಯುತ್ತಿತ್ತು. ಹಾಡಿದಷ್ಟೂ ನಾಲಗೆ ನನೆಕೊನೆವೋಗುತ್ತಿತ್ತು. ಕುಣಿದು ಮೈದಣಿಯದು, ಪೂಜಿಸಿ ಮನದಣಿಯದು-ಅವರ ಭಕ್ತಿಗೆ ಮೆಚ್ಚಿ, ಶಿವ ಪ್ರತ್ಯಕ್ಷವಾಗಿ-ಬಾ ನನ್ನ ಮುದ್ದು ಕಂದಾ ಎಂದು ಬಸವಣ್ಣನವರನ್ನು ಬಿಗಿಯಪ್ಪಿದನೆನ್ನಿ-ಅಷ್ಟರಿಂದಲೂ ತೃಪ್ತಿಯಿಲ್ಲ ಬಸವಣ್ಣನವರಿಗೆ-ಶಿವನ ಉದರವನ್ನೇ ಸೀಳಿಕೊಂಡು ಒಳಹೋಗಿ ಐಕ್ಯವಾಗುವ ಒಲುಮೆಯಾಸರ ಶಿವನ ಮೇಲವರಿಗೆ. ಇಂದ್ರಿಯಗಹ್ವರಗಳ ಒಳನುಗ್ಗಿ ಆಗುವ ಈ ಅತೀಂದ್ರಿಯ ಐಕ್ಯವೇ ಬಸವಣ್ಣನವರ ಭಕ್ತಿಯ ವಿಶ್ರಾಮಧಾಮ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು