ಕಾಮಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ.
ಮಿಗೆವೊಲಿದೆನಾಗಿ ಅಗಲಲಾರೆನು:
ನಗೆಮೊಗದರಸಾ, ಅವಧಾರು! ಕೂಡಲಸಂಗಮದೇವಾ,
ಬಗಿದು ಹೋಗುವೆ ನಾ ನಿಮ್ಮ ಮನವನು.
Transliteration Kāmasaṅga nis'saṅgavāgi innāva saṅgavanariyenayyā.
Mige olidenāgi agalalārenu:
Nagemogadarasa, avadhāru! Kūḍalasaṅgamadēvā,
bagidu hōguvenu nā nim'ma manavanu.
Manuscript
English Translation 2 E'er since the fellowship of Desire has ceased,
I've known no other fellowship, O Lord!
Now that I've loved Thee so, parting is hard:
Hearken to me, O King of the smiling face,
O Kūḍala Saṅgama Lord,
I'll break Thy heart and enter it!
Translated by: L M A Menezes, S M Angadi
Hindi Translation काय-संग से निस्संग हूँ और कोई संग नहीं जानता ।
मैं अधिक अनुरक्त हूँ बिछुड नहीं सकता
हसन्मुखी महाप्रभो ध्यान दो, मैं तव मन चीरकर
समा जाऊँगा कूडलसंगमदेव ॥
Translated by: Banakara K Gowdappa
Telugu Translation కామసంగము నిస్సంగమై పోవ
ఇక యే సంగమూ యెఱుగనయ్యా
కడువలచినాడ; విడనాడలేను
నగుమొగము దొరా! నను వినుము హరా!
యెద జీల్చుకొని పోదురా! కూడల సంగమదేవా!
Translated by: Dr. Badala Ramaiah
Tamil Translation உடல் தொடர்பற்று, இன்னும் வேறு எந்தத்
தொடர்பையும் அறியேன் ஐயனே
மிகவும் விரும்புவதால் அகல மாட்டேன்
முறுவல் முகம் கொண்ட அரசனே, உடையனே.
கூடல சங்கம தேவனே, உம் மனத்தை
நான் உம் மனத்தைக் கிழித்துக்
கொண்டு செல்வேன் ஐயனே.
Translated by: Smt. Kalyani Venkataraman, Chennai
Marathi Translation
निसंग मी झालो देवा
विलीन मी झालो
जानतो न अन्य काही
भक्तीभावो स्फुरलो
अन्य मज होणे नाही
तुजवीण काही ||धृ||
कामसंग निसंग होता
नसे अन्य वार्ता
तुझ्यावीण न लगे काही
तूच सर्व कर्ता
अन्य मज होणे नाही,
तुजवीण काही
हे प्रसन्न वदन प्रभो
कूडलसंगमदेवा
शिरेन मी हृदयी तुझिया
ऐक मम भावा
अन्य मज होणे नाही
तुजविण काही
अर्थ - हे प्रभो! तुझ्या भक्तीभावात स्वत:ला हरवून जात असल्याने निस्संगी झालो आहे. अर्थात विकारहित झालो मी तुझा भक्तीवेडा झाल्यामुळे आता तुझ्यापासून दूर राहणे अशक्य आहे. म्हणून तुझ्या हृदयात शिरून तुझे हृदय माझे वस्तीस्थान केले आहे.
Translated by Rajendra Jirobe, Published by V B Patil, Hirabaug, Chembur, Mumbai, 1983
काया निःसंग झाल्याने दुसरा कोणता संग जाणत नाही.
नीट समजून आपले केल्याने दूर होऊ शकत नाही.
प्रसन्नमुखी देवा ऐकावे, कूडलसंगमदेवा
चिरुन तुमच्या मनात मी घुसतो.
Translated by Shalini Sreeshaila Doddamani
ಶಬ್ದಾರ್ಥಗಳು ಅವಧಾರು = ಲಕ್ಷಕೊಡು; ಕಾಯ = ; ನಿಸ್ಸಂಗ = ; ಮಿಗೆ = ; ಸಂಗ = ;
ಕನ್ನಡ ವ್ಯಾಖ್ಯಾನ ಬಸವಣ್ಣನವರು ತಮ್ಮ ಕುಟುಂಬ ಜೀವನದ ಯಾವುದೋ ಒಂದು ಘಟ್ಟದಲ್ಲಿ ಕಾಮಸಂಗವನ್ನು ತ್ಯಜಿಸಿ ಸಂಪೂರ್ಣ ಬ್ರಹ್ಮಚರ್ಯವನ್ನು ಕೈಗೊಂಡರೆಂದು ಊಹಿಸಲು ಈ ವಚನದ-“ಕಾಮಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆ”ನೆಂಬ ಮಾತು ಆಧಾರವಾಗಬಲ್ಲುದು.
ಬರಬರುತ್ತ ಅವರ ಶಿವನೊಡತಣ ಅಧ್ಯಾತ್ಮಿಕ ಸಂಬಂಧಗಳು ಗಾಢವಾಗಿ-ಅವರಿಗೆ ತಮ್ಮ ಹೆಂಡತಿಯರಿಬ್ಬರನ್ನೂ ಕಾಮದೃಷ್ಟಿಯಿಂದ ಕಾಣುವ ಪ್ರವೃತ್ತಿಯೇ ಇಲ್ಲವಾಯಿತು. ಬದಲಾಗಿ ಶಿವನನ್ನು ಅಗಲಿ ಬದುಕಿರಲಾರೆನೆಂಬಷ್ಟು ವಿಕಳಾವಸ್ಥೆಯಲ್ಲಿ ಅವರು ಇರತೊಡಗಿದರು. ತಮ್ಮ ಧ್ಯಾನನೇತ್ರದ ಮುಂದೆ ರೂಪುಗೊಳ್ಳುತ್ತಿದ್ದ ಶಿವನ ಚೆಲುವನ್ನು ನಿಚ್ಚಳವಾಗಿ ಕಂಡ ಮೇಲೆ ಅವರಿಗೆ ಲೌಕಿಕ ರೂಪಸೀರೂಪಗಳೆಲ್ಲ ನಿಸ್ತೇಜವಾಗತೊಡಗಿದವು. ಆಗ ಅವರಿಗೆ ಬಹಿರ್ಮುಖವು ಬೇಡವಾಗಿ-ಅಂತರ್ಮುಖದಲ್ಲಿ ಸಮ್ಮುಖನೂ ಸುಮುಖನೂ ಆಗಿದ್ದ ಶಿವನ ಪ್ರೇಮಸುಮನರಾಶಿಯನ್ನು ಬಗಿದು ಅದರಲ್ಲೇ ಒಂದಾದರು.
ಆಗೀಗ ಆ ಶಿವಸಮಾಧಿಯಿಂದ ಹೊರಬರುತ್ತಿದ್ದರಾದರೂ ಅವರಿಗೆ ಆ ಹೆಂಡತಿಯರು ಜೋಡಿ ಪಾರ್ವತಿಯರಂತೆ ಕಾಣುತ್ತಿದ್ದರಾಗಬಹುದು. ಹರಿಹರನ ಪ್ರಕಾರವಾಗಿಯಾದರೋ-ಬಸವಣ್ಣನವರು ತಮ್ಮ ಸತಿ ನೀಲಲೋಚನೆ(ಮಾಯಿದೇವಿ)ಯರನ್ನಂತೂ ಒಂದು ನಿರ್ದಿಷ್ಟ ಸಂದರ್ಭದಿಂದಾಚೆಗೆ “ತಾಯಿ” ಎಂದು ಕರೆದುದಾಗಿ ತಿಳಿದು ಬರುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು