ವಾರವೆಂದರಿಯೆ, ದಿನವೆಂದರಿಯೆ;
ಏನೆಂದರಿಯೆನಯ್ಯಾ!
ಇರುಳೆಂದರಿಯೆ, ಹಗಲೆಂದರಿಯೆ;
ಏನೆಂದರಿಯೆನಯ್ಯಾ!
ನಿಮ್ಮುವ ಪೂಜಿಸಿ ಎನ್ನುವ ಮರೆದೆ
ಕೂಡಲಸಂಗಮದೇವಾ.
Transliteration Vāravendariye, dinavendariye;
ēnendariyenayyā!
Iruḷendariye, hagalendariye;
ēnendariyenayyā!
Nim'muva pūjisi ennuva marede
kūḍalasaṅgamadēvā.
Manuscript
English Translation 2 I do not know what week it is;
I do not know what day;
Not anything at all !
I do not know or day or night;
Nor anything at all !
Adoring Thee, I have forgot
Myself, KudalaSangama Lord !
Translated by: L M A Menezes, S M Angadi
Hindi Translation न वार जानता हूँ, न दिन
मैं कुछ नहीं जानता
न दिन जानता हूँ, न रात
मैं कुछ नहीं जानता
तव पूजा करते अपने को भूल गया
कूडलसंगमदेव ॥
Translated by: Banakara K Gowdappa
Telugu Translation దినమేదో; వారమేదో; తెలియనయ్యా
పగలేదో; రాత్రి యేదో; ఏదీ తెలియనయ్యా
నిన్ను పూజించి నన్ను నేనే తెలియనై తి
కూడలసంగమ దేవా!
Translated by: Dr. Badala Ramaiah
Tamil Translation வாரம் என்றறியேன், தினம் என்றறியேன்
என்னவென்று அறியேன் ஐயனே
இருள் என்றறியேன், பகலென்றறியேன்
என்னவென்று அறியேன் ஐயனே
உம்மைப் பூசித்து, என்னை மறந்தேன்
கூடல சங்கமதேவனே.
Translated by: Smt. Kalyani Venkataraman, Chennai
Marathi Translation
जाणतो न वार, जाणतो न दिन
राहतो मी तल्लीन, रात्रंदिन
कूडलसंगमदेवा ! तव उपासनी
देहभाव हरूनि जाय माझे
अर्थ - कूडलसंगमदेवा! (परशिवलिंगा ! ) तुझ्या उपासनेत आणि आराधनेत दिवस वार अथवा महिना कोणता हे समजलेच नाही. तसेच रात्रही कळाली नाही वा दिनही कळाला नाही. कारण तुझ्या स्मरणात आणि शरण सेवेत मी माझे देहभान विसरून जात होतो. कारण त्यात मिळत असलेले समाधान मला इतरत्र कोठेही मिळू शकले नाही.
Translated by Rajendra Jirobe, Published by V B Patil, Hirabaug, Chembur, Mumbai, 1983
वार जाणत नाही, दिवस जाणत नाही,
काहीही जाणत नाही.
रात्र जाणत नाही, दिवस जाणत नाही,
काहीही जाणत नाही.
तुमची पूजा करीत भान हरपून जाणे
कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಇಂದು ಸೋಮವಾರ ಇಂದು ಗುರುವಾರವೆಂದು ವಾರವನ್ನು ಹಿಡಿದಾಗಲಿ ; ಇಂದು ಪಂಚಮಿ, ಇಂದು ನವಮಿಯೆಂದು ದಿನವನ್ನು ಹಿಡಿದಾಗಲಿ ; ಪ್ರಾತಃಕಾಲವಾಯಿತು ಹಗಲೆಂದಾಲಿ, ಸಂಜೆಯಾಯಿತು ರಾತ್ರಿಯೆಂದಾಗಲಿ ಮಾಡುವ ಪೂಜೆಯಲ್ಲಿ-ವಾರ ದಿನವೆಂದು ಕಾಲಹರಣದ ಚಿಂತೆಯೇ ಹೊರತು, ಹರನ ಚಿಂತೆಯಿಲ್ಲ, ಆ ವಾರ, ಆ ದಿನ, ಆ ಕಾಲ ಮುಗಿಯಿತೆಂದರೆ-ಆ ಶಿವಚಿಂತೆಯೂ ಮುಗಿಯಿತು. ಈ ಕಾಲದ ಕಾಟದ ಭಕ್ತಿ ಬಸವಣ್ಣನವರದಲ್ಲ, ಸದಾಕಾಲ ಶಿವಧ್ಯಾನ ಅವರ ಮನದಲ್ಲಿ ಮುಸುಗಿರುತ್ತಿತ್ತು.
ಜ್ಞಾನದ ಮಿಂಚು, ವೈರಾಗ್ಯದ ಸಿಡಿಲು, ನಾಮಾಮೃತ ಮಳೆಗರೆಯುತ್ತಿತ್ತು. ಅದರಲ್ಲಿ ಅವರ ಅಹಂಕಾರವೆಲ್ಲಾ ಲಯವಾಗಿ, ಕಾಲವೂ ಪ್ರಳಯವಾಗಿ ಶಿವಧ್ಯಾನವೊಂದೇ ಅಖಂಡವಾಗಿ ತುಂಬಿ ನಿಲ್ಲುತ್ತಿತ್ತು-ಅದು ಬಸವಣ್ಣನವರ ಶಿವಪೂಜೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು