•  
  •  
  •  
  •  
Index   ವಚನ - 491    Search  
 
ಭಕ್ತನ ಶರಣಸ್ಥಲ - ಪೂಜೆ
ನಿಮ್ಮ ನೋಟವನಂತಸುಖ, ಕೂಟ ಪರಮಸುಖ! ಅವುಟುಕೋಟಿ ರೋಮಂಗಳೂ ಕಂಗಳಾಗಿ ನೋಡುತ್ತಿದ್ದೆನು! ಕೂಡಲಸಂಗಮದೇವಯ್ಯಾ, ನಿಮ್ಮ ನೋಡಿ ನೋಡಿ ಮನದಲ್ಲಿ ರತಿಹುಟ್ಟಿ, ನಿಮಿರ್ದುವೆನ್ನ ಕಳೆಗಳು.
Transliteration Nim'ma nōṭavanantasukha, kūṭa paramasukha! Avuṭukōṭi rōmaṅgaḷū kaṅgaḷāgi nōḍidanu! Kūḍalasaṅgamadēvayya, nim'ma nōḍi manadalli rātihuṭṭi, nimirdavenna kaḷegaḷu.
Manuscript
English Translation 2 Infinite the bliss of seeing Thee, Infinite the bliss of loving Thee. I gaze at Thee, with all My billion hairs transfomed to eyes! O Kūḍala Saṅgama Lord, Gazing and gazing at Thee, As love was born in my heart, The many marks of love stood out! Translated by: L M A Menezes, S M Angadi
Hindi Translation तव दर्शन अनंत सुखदाई है। तव मिलन परम सुखदाई है। साढे तीन करोड रोमों को नेत्र बनाकर देख रहा हूँ स्वामी, कूडलसंगमदेव तुम्हें देख देखकर मन में अनुराग उत्पन्न हुआ, मेरी कांति प्रस्फुटित हुई ॥ Translated by: Banakara K Gowdappa
Telugu Translation నీ చూపులనంతసుఖము నీ కూటమి పరమ సుఖము మూడున్నర కోటి రోమములు కన్నులై చూచె సంగా నినుజూచి చూచి మనసున రతిబుట్టే మేనెల్ల కళలుబ్బె! Translated by: Dr. Badala Ramaiah
Tamil Translation உம் நோட்டம் அளவற்ற இன்பம் உன்னுடன் இணைவது மேலான இன்பம் எண்ணற்ற உரோமங்களனைத்தும் கண்களாகிக் கண்டுகொண்டிருந்தேன் கூடல சங்க தேவனே உம்மைக் கண்டு கண்டு மனதில் மகிழ்ச்சி தோன்றி, என் களை மிகுந்தது ஐயனே! Translated by: Smt. Kalyani Venkataraman, Chennai
Marathi Translation तव दर्शनात अनंत सुख, तव मिलनात परम सुख. साडे तीन कोटी रोमांना नयन बनवून पहात राहिलो. कूडलसंगमदेवा, तुम्हाला पहात पहात मनात अनुरक्ती जागृत होऊन तन तेजोमय झाले. Translated by Shalini Sreeshaila Doddamani
ಶಬ್ದಾರ್ಥಗಳು ಅನಂತ = ಅಂತ್ಯವಿಲ್ಲದ; ಅವುಟು = ; ಕಂಗಳು = ; ಕೂಟ = ; ನಿರ್ಮಿದ = ; ರತಿ = ; ರೋಮ = ;
ಕನ್ನಡ ವ್ಯಾಖ್ಯಾನ ಶಿವಪೂಜೆಯಲ್ಲಿ ಶಿವನನ್ನು ನೋಡುತ್ತಿರುವುದೇ ಸುಖ. ಅಲ್ಲಿ ಐಕ್ಯವಾಗುವುದೇ ಪರಮಸುಖ. ಮೈಯ ರೋಮ ರೋಮವೂ ಕಣ್ಣಾಗಿ ಶಿವನನ್ನು ಎಡೆಬಿಡದೆ ನೋಡುವ ರತಿ ಹೆಚ್ಚಿದಂತೆಲ್ಲಾ ತಮ್ಮ ದಿವ್ಯಜೀವನ ಕಳೆಗೂಡಿ ಪೂರ್ಣಚಂದ್ರಮನಂತಾದೆನೆಂದು ಬಸವಣ್ಣನವರು ತಮ್ಮ ಸಾಧನೆಯ ಪ್ರಾರಂಭದ ಕಾವಳ ಕಳೆದು ಬೆಳುದಿಂಗಳಾದಾಗ ಹರ್ಷಪಡುತ್ತಿರುವರು. ಒಂದು ಕಾಲಕ್ಕೆ-“ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ...ಇನ್ನೆಂದಿಂಗೆ ಮೋಕ್ಷವಹುದೋ” (ನೋಡಿ ವಚನ 9) ಎಂದು ಪರಿತಪಿಸುತ್ತಿದ್ದ ಬಸವಣ್ಣನವರು-ಬಿಡುಗಡೆಯನ್ನು ಪಡೆದಾಗ ಹಾಡಿದ ಆತ್ಮರಾಷ್ಟ್ರಗೀತೆಯೇ ಈ ವಚನ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು