•  
  •  
  •  
  •  
Index   ವಚನ - 493    Search  
 
ಭಕ್ತನ ಶರಣಸ್ಥಲ - ಪೂಜೆ
ಅಡಿಗಡಿಗೆ ಲಿಂಗವನಡರಿ ನೋಡಿ ನೋಡಿ ಕಂಗಳು ಕಡೆಗೋಡಿವರಿದುವೆನಗಯ್ಯಾ, ಎನ್ನಶ್ರುಜಲಂಗಳು. ಆಲಿಕಲ್ಲ ರೂಹಿನಂತೆ, ಅರಗಿನ ಪುತ್ಥಳಿಯಂತೆ ತನು ಪುಳಕಿತವಾದ ಬೆಮರುಬಿಂದುಗಳೆಲ್ಲಾ! ಕೂಡಲಸಂಗನ ದರ್ಶನಸ್ಪರ್ಶನದಿಂದ- ಮನವೊಲಿದು ನೆರೆವ ಭರವನೇನ ಹೇಳುವೆನಯ್ಯಾ!
Transliteration Aḍigaḍige liṅgavanadari nōḍi nōḍi kaṅgaḷu kaḍegōḍivariduvenagayya, ennaśrujalaṅgaḷu. Ālikalla rūhinante, aragina put'thaḷiyante tanu puḷakitavāda bemarubindugaḷellā! Kūḍalasaṅgana darśanasparśanadinda- manavolidu nereva bharavanēna hēḷenayyā!
Manuscript
English Translation 2 Again and again and again, I cling to Liṅga , feasting my eyes on Him, A stream of tears of joy flows down. As my flesh thrills, with hair on end, The drops of sweat are like The shapes of hailstone or a waxen doll! How shall I describe The ardour to unite my heart in love By sight of Kūḍala Saṅga and His touch? Translated by: L M A Menezes, S M Angadi
Hindi Translation निरंतर लिंगदेव से लिपटकर देखते देखते मेरे नेत्रों से अश्रु उमड आये पुलकित तन के स्वेद-कण हिमकण सम, उपल-रूप सम, लाक्षा पुत्थली सम हैं कूडलसंगमेश के दर्शन-स्पर्श से मन मुग्ध होने पर उस मिलनोत्साह का वर्णन कैसे करूँ? Translated by: Banakara K Gowdappa
Telugu Translation మాటిమాటికి మహాదేవుని; మనసార చూచిచూచి బాష్పజలములు కన్నుల మొఱవలై పోయె పుత్తడి బొమ్మ వోలె పులకరించిన మేన; వడగండ్ల రూపువలె చెమట బిందువు లొప్పె స్వామిదర్శన స్పర్శచే స్వాంత మలరి కూడుకొనుచున్న సంభ్రమమేమందునయ్య! Translated by: Dr. Badala Ramaiah
Tamil Translation அடிக்கடி இலிங்கத்துடன் இணைந்து, இணைந்து கண்டு கண்டு கண்களின் கடைக் கோடியில் கண்ணீர் வழிந்தது ஐயனே, ஆலங்கட்டியின் வடிவமனைய அரக்கு பொம்மையனையதாம் உடல் புளகமடைந்து வியர்வைத் துளிகள் அரும்பின கூடல சங்கனைக் கண்டு தீண்டியதால் மனம் விரும்பி இணையும் உற்சாகத்தை என்னென்பேன் ஐயனே. Translated by: Smt. Kalyani Venkataraman, Chennai
Marathi Translation एकसारखे लिंगाला एकाग्रतेने पाहून पाहून नेत्रातून आनंदाश्रूची धारा वहाते. बर्फाच्या आकृतीप्रमाणे, लाखेच्या पुतळीप्रमाणे, तन पुलकीत होऊन घामाचे मोती अंगावर आहे. कूडलसंगाच्या दर्शनस्पर्शाने होणाऱ्या तृप्त मनाचा मिलन उत्साह कसा सांगू ! Translated by Shalini Sreeshaila Doddamani
ಶಬ್ದಾರ್ಥಗಳು ಅಡರಿ = ಸೇರಿಕೊಳ್ಳು; ಅರಗು = ತಿಳಿಸು; ಆಲಿಕಲ್ಲು = ; ಕಂಗಳು = ; ದರ್ಶನ = ; ಪುತ್ಥಳಿ = ; ಪುಳಕ = ; ಬೆಮರ = ; ಭರವ = ; ರೂಹಿ = ; ಶ್ರುಜಲ = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಕುರಿತಿರುವ ಲಿಂಗವು ಇಷ್ಟಲಿಂಗವಲ್ಲವೆನಿಸುವುದು. ಇಷ್ಟಲಿಂಗವಾದರೆ-ಅಂಗೈಯಲ್ಲಿ ಕಣ್ಣಡಿಯಲ್ಲೇ ಇರುವುದರಿಂದ-ಅದನ್ನು ಅಡರಿ ಅಡರಿ (ಎಂದರೆ ನಿಮಿರಿ ನಿಮಿರಿ) ನೋಡಬೇಕಾಗಿಲ್ಲ. ಬಸವಣ್ಣನವರು ಲಿಂಗವನ್ನು ನಿಮಿರಿ ನಿಮಿರಿ ನೋಡಿ ತಮ್ಮ ಕಣ್ಣುಗಳಲ್ಲಿ ಆನಂದಬಾಷ್ಪ ತುಂಬಿ ಕೋಡಿಹರಿಯುತ್ತಿದೆಯೆನ್ನುವರು. ಈ ಕೂಡಲ ಸಂಗನ ದರ್ಶನದಿಂದ ಕಣ್ಣೀರು ಸುರಿದು-ಬಸವಣ್ಣನವರಿಗೆ ತಮ್ಮ ದೇಹ(ಭಾವ)ವೆಲ್ಲಾ ಆಲಿಕಲ್ಲಿನಂತೆ ನೀರಾಗಿ ಹೋಗುತ್ತಿರುವಂತೆನಿಸುವುದು. ಮತ್ತು ಕೂಡಲಸಂಗನ ಸ್ಪರ್ಶನದಿಂದ ಪುಲಕಿತಗೊಂಡು ಮೈಯೆಲ್ಲಾ ಬೆವರಿ ಉರಿಯ ನಾಲಗೆ ಸೋಕಿದ ಅರಗಿನ ಗೊಂಬೆಯಂತೆ ಕರಗಿಹೋಗುತ್ತಿರುವಂತೆನಿಸುವುದು. ಹೀಗೆ ಲಿಂಗದೇವನೂ ಬಸವಣ್ಣನವರೂ ಸಮರತಿಯಿಂದ ಒಲಿದು ಮೇಳನಗೊಳ್ಳುವ ರಭಸವೇನು ಸಾಮಾನ್ಯವೇ ? ದೇಹ(ಭಾವ)ವೆಲ್ಲಾ ಕರಗಿ ಹೋಗಿ, ಆತ್ಮವೊಂದೇ ಉಳಿಯುವುದು ಸಾಮಾನ್ಯವೆ ? ಆ ಉಳಿಮೆಯನ್ನೇ ಜ್ಞಾನಿಗಳು ಕೈವಲ್ಯವೆನ್ನುವರು ! (ನೆರೆ : ರತಿಕೇಳಿಯಾಡು).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು