•  
  •  
  •  
  •  
Index   ವಚನ - 494    Search  
 
ಭಕ್ತನ ಶರಣಸ್ಥಲ - ಪ್ರಾರ್ಥನೆ
ತಾಳಮಾನಸರಿಸವನರಿಯೆ, ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ! ಕೂಡಲಸಂಗಮದೇವಾ, ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ!
Transliteration Tāḷamānasarisavanariye, ōje bajāvaṇeya lekkavanariye, amr̥tagaṇa dēvagaṇavanariye! Kūḍalasaṅgamadēvā, ninage kēḷalilla ānu olidante hāḍuve!
Manuscript
Music Courtesy: Taala Maana Sarasa Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
English Translation 2 I don't know anything like time-beats and metre nor the arithmetic of strings and drums; I don't know the count of iamb and dactyl. My lord of the meeting rivers, as nothing will hurt you I'll sing as I love.

Translated by: A K Ramanujan
Book Name: Speaking Of Siva
Publisher: Penguin Books
----------------------------------
I do not know the prosody Of beat or measure, nor the count Of rhythm and of tone; I do not know This kind of feet or that! O Kūḍala Saṅgama Lord, Since Thou art past offence, I sing as love commands the tune! Translated by: L M A Menezes, S M Angadi

Hindi Translation ताल मान की गिनती मैं नहीं जानता: वाद्य-वादन की विद्या नहीं जानता; अमृतगण, देवगण नहीं जानता कूडलसंगमदेव, तुम हानि के परे हो अतः मैं मनमाना गाता हूँ ॥ Translated by: Banakara K Gowdappa
Telugu Translation తాళమానముల గతి యేమో తెలియ! ఓజభజావణుల లెక్క యెటులో తెలియ! అమృత దేవగణములేవో తెలియ! దేవ! నీకు కీడు కల్గనిరీతి నే వలచినట్లు పాడుకొందునయ్య. Translated by: Dr. Badala Ramaiah
Tamil Translation தாள அளவுகளின் சமானத்தை அறியேன் தோல் கருவிகளை இசைக்கும் முறைகளை அறியேன் அமுதகணம், தேவ கணங்களை அறியேன் கூடல சங்கமதேவனே, உனக்குக் கேடற்ற முறையில் நான் விரும்பியவாறு பாடுவேன். Translated by: Smt. Kalyani Venkataraman, Chennai
Marathi Translation लय तालातील मधुरता जाणत नाही. ढोल-मृदुंगाचे बोल जाणत नाही. अमृतगण, देवगण जाणत नाही. कूडलसंगा, तुमची हानी होणार नाही असे मनाला येईल तसे गातो. Translated by Shalini Sreeshaila Doddamani
ಶಬ್ದಾರ್ಥಗಳು ಅಮೃತಗಣ = ಛಂದಸಿಸಿನ ಗಣಗಗಳಲ್ಲಿ ಒಂದು ಭೇದ; ಓಜೆ = ; ಕೇಡು = ; ತಾಳಮಾನ = ; ಬಜಾವಣೆ = ; ಸರಸ = ;
ಕನ್ನಡ ವ್ಯಾಖ್ಯಾನ ಛಂದಶ್ಯಾಸ್ತ್ರ ಮತ್ತು ಸಂಗೀತಶಾಸ್ತ್ರಗಳಿಗೆ ವಿರುದ್ಧವಾಗಿ ಪ್ರಬಂಧಗಳನ್ನು ಕಟ್ಟಿ ಹಾಡಿದರೆ-ಹಾಡಿಸಿಕೊಂಡವನಿಗೆ ಕೇಡಾಗುವುದೆಂಬುದೊಂದು ನಂಬಿಕೆ-ಶಿವನಿಗೆ ಯಾವ ಕೇಡೂ ತಟ್ಟದಾಗಿ-ತಮ್ಮ ಭಕ್ತಿ ಭಾವಕ್ಕನುಗುಣವಾಗಿ ವಚನ(ಮತ್ತು ಹಾಡು)ಗಳನ್ನು ಕಟ್ಟಿ ತಮಗೆ ಪ್ರಿಯವಾದಂತೆ ಹಾಡುತ್ತಿರುವೆನೆನ್ನುವರು ಬಸವಣ್ಣನವರು ಶರಣ ಸಮ್ಮೇಳನದಲ್ಲಿ. ಗೇಯಕೃತಿಗಳಿಗೆ ರಾಗ ತಾಳ(ವಾದ್ಯ)ಗಳು ಅವಶ್ಯಕವೆಂಬುದು ನಿಜವಾದರೂ-ಅವೆಲ್ಲಕ್ಕಿಂತಲೂ “ಭಾವ” ಅಥವಾ “ಮನೋಧರ್ಮ” ಅತಿಶಯವಾದುದೆಂಬುದನ್ನು ಎಲ್ಲ ಸಂಗೀತ ವಿದ್ವಾಂಸರೂ ಒಪ್ಪಿರುವರೆಂಬುದನ್ನು ಮರೆಯಬಾರದು. ವಿ: ಬಸವಣ್ಣ ಮುಂತಾದ ಶರಣರ ವಚನಗಳನ್ನು ಅನುಕರಿಸಿ ಮುಂದೆ ಹರಿದಾಸರು ಉಗಾಭೋಗಗಳನ್ನು ಬರೆದರೆಂಬುದು ಪ್ರಸಿದ್ಧವೇ ಇದೆ-ನೋಡಿ ಶಿವದಾಸ ಗೀತಾಂಜಲಿ, ಪೀಠಿಕೆ ಪುಟ 105. ಈ ಉಗಾಭೋಗ(ವಚನ)ಗಳು ತಾಳಪ್ರಧಾನವಲ್ಲ ರಾಗಪ್ರಧಾನವೆಂದು ವಿದ್ವಾಂಸರು ಅಭಿಪ್ರಾಯಪಡುವರು-ನೋಡಿ ಕರ್ನಾಟಕ ಸಂಗೀತವೂ ದಾಸಕೂಟವೂ-ಹುಲಗೂರು ಕೃಷ್ಣಾಚಾರ್ಯರು, ಪುಟ 91-96. ತಾಳಮಾನ-ಓಜೆಬಜಾವಣೆಯ ಲೆಕ್ಕ : ಗ್ರಾಮವರ್ಜ್ಯಗಳನ್ನು ಪರೀಕ್ಷಿಸಿ, ಜನ್ಮಜನಕ(ರಾಗ)ಗಳನ್ನು ಗುರುತಿಸಿಕೊಂಡು, ಚತುರ್ವಿಧ ಸ್ವರಗಳನ್ನು ಪರುಠವಿಸಿ, ರೀತಿತ್ರಯಗಳನ್ನು ಕೂಡಿಸಿಕೊಂಡು ಚತುರ್ವಿಧ ದಂಡಿಯಲ್ಲಿ ತಾಳಹೀನ ಮುಂತಾದ ಹದಿನೈದು ಸ್ವರದೋಷಗಳಿಲ್ಲದೆ ಹಾಡಬೇಕೆನ್ನುವ ಸಂದರ್ಭದಲ್ಲಿ-“ಆಳಾಪ-ಬಜಾವಣೆ ಛಾಯೆದಪ್ಪದೆ ನಾದಾವತಿ-ನಂದಾವತಿ-ಭದ್ರಾವತಿ-ವಿನಯಾವತಿ-ಭೋಗಾವತಿ ಎಂಬೈದು ತೆರದಿಂದಳಾಪಿಸುವ ಪದಕ್ರಮ”ವನ್ನು ಹಾಡುಗಾರನು ಗಮನಿಸಬೇಕೆಂದು ನಿಜಗುಣ ಶಿವಯೋಗಿ ಹೇಳಿದ್ದಾರೆ-ನೋಡಿ ವಿವೇಕಚಿಂತಾಮಣಿ 4ನೇ ಪರಿಚ್ಛೇದ. ದೇವಗಣ: “ಮೂರಕ್ಕರ | ಬಿಡದತಿ ಲಘುವಾಗೆ [ನಗಣ] ದೇವಗಣ ಸರ್ವಜಯಂ” (ಕವಿಜಿಹ್ವಾಬಂಧನ 1-25). “ಭಾವಿಸೆ ಪದ ಪದ್ಯಂಗಳಿ 1 ಗಾವಗ ಮೊದಲಲ್ಲಿ ಗಣದೊಳದುಯಿದುಯೆನ್ನದೆ | ದೇವಗಣವಿಟ್ಟು ಮುಂದಕ್ಕಾವಗಣಂ ಬಂದೊಡುತ್ತಮಂ” (ಅದೇ 1-62) ಬಸವಣ್ಣನವರ ಕಾಲಕ್ಕೂ ಈ ಗಣಗಳ ಶುಭಾಶುಭಗಳ ಪುಕಾರು ಕೃತಿಕರ್ತರನ್ನು ಹಿಂತುಳಿಯುವಂತೆ ಮಾಡಿದೆ. ಈ ಮುಂತಾದ ವಿಚಾರವನ್ನು ವಿವರವಾಗಿ ತಿಳಿಯಬಯಸುವವರು ನೋಡಿ ಡಾ. ಎಲ್. ಬಸವರಾಜು ಅವರ ಕನ್ನಡ ಛಂಧಸ್ಸಂಪುಟ, ಪುಟ 145-156.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು